ಉಪಯುಕ್ತ ಮಾಹಿತಿ

ಲೈಫಲ್ಲಿ ಹೇಗೆ ಗೆಲ್ಲಬೇಕು ಅನ್ನೋರು..! ಮಿಸ್ ಮಾಡದೇ ಈ ಲೇಖನ ಓದಿ…

1329

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!

ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ.

ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ 1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ ಮುಂದೊಂದು ದಿನ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..! ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು. ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..!

ನೆನಪಿಟ್ಕೊಳಿ ಸೋಲು ನಿಮಗೆ ನಿಮ್ಮವರು ಯಾರು ಅನ್ನೊದು ಪರಿಚಯಿಸುತ್ತೆ..! ಸೋತಾಗ ನಿಮ್ಮ ಜೊತೆಗೆ ಯಾರಿರ್ತಾರೋ ಅವರು ಮಾತ್ರ ಸಾಯೋ ತನಕ ಜೊತೆಗಿರ್ತಾರೆ.. ನೀವು ಸೋತು ಗೆದ್ದಾಗ ಮಾತ್ರ ಪ್ರಪಂಚ ಏನು ಅಂತ ನಿಮಗೆ ಅರ್ಥ ಆಗೋದು.. ಗೆಲುವು ಈಸಿಯಾಗಿ ಸಿಕ್ಕಿದ್ರೆ ಅಷ್ಟೆ ಬೇಗ ಅದು ನಿಮ್ಮ ಕೈ ಜಾರಿ ಹೋಗುತ್ತೆ.. ಸೋತು ಗೆದ್ದವನಿಗೆ ಮಾತ್ರ ಗೆಲುವು ಉಳಿಸ್ಕೊಳೋ ಐಡಿಯಾ ಇರುತ್ತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  1. 1
  2. 2
  3. 3
  4. 4
  5. 5
  6. 6