ಮನರಂಜನೆ

ಲಕ್ಶ್ಮಿ ಹುಟ್ಟುಹಬ್ಬಕ್ಕೆ ಅನುಶ್ರಿ ಕೊಟ್ಟ ಕಾಣಿಕೆ ಏನು ಗೊತ್ತಾ..?ಹುಟ್ಟುಹಬ್ಬ ಆಚರಿಸಿಕೊಂಡ ಹಳ್ಳಿ ಹುಡುಗಿ ಲಕ್ಷ್ಮಿ ಹೇಳಿದ್ದೇನು.?ತಿಳಿಯಲು ಈ ಲೇಖನ ಓದಿ…

1209

ಜೀ-ಕನ್ನಡದಲ್ಲಿ ಆರಂಭವಾಗಿರುವ ‘ಸರಿಗಮಪ’ 14ನೇ ಆವೃತ್ತಿ ಈಗಾಗಲೇ ಕರುನಾಡ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಮಕ್ಕಳ ಸಿಂಗಿಂಗ್ ಶೋ ಎಷ್ಟೋ ಜನರಿಗೆ ವೀಕೆಂಡ್ ನಲ್ಲಿ ಮನರಂಜನೆಯ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ.. ಅದರಲ್ಲೂ ಕೆಲವು ಸ್ಪರ್ಧಿಗಳು ನಮ್ಮ ಮನೆಯ ಸದಸ್ಯರಂತಾಗುತ್ತಾರೆ.ಜೀ ಕನ್ನಡ ಟಿವಿ ರಿಯಾಲಿಟಿ ಸಿಂಗಿಂಗ್ ಸರಿಗಮಪ ಶೋ ನ ಲಕ್ಷ್ಮೀ ಕೂಡ ಇದಕ್ಕೆ ಹೊರತಾಗಿಲ್ಲ.. ಹಳ್ಳಿಯಿಂದ ಬಂದ ಪ್ರತಿಭಾನ್ವಿತ ಕಲಾವಿದೆ ಈ ಲಕ್ಷ್ಮಿರಾಮಪ್ಪ.ಇವರ ಮೊದಲನೇ ಹಾಡಿನಲ್ಲಿಯೇ ಕರ್ನಾಟಕ ಜನರ ಮನವನ್ನು ಗೆದ್ದಿದ್ದಾರೆ.

ಇಂತಹ ಪ್ರತ್ಭಾನ್ವಿತ ಕಲಾವಿದೆಯ ಹುಟ್ಟುಹಬ್ಬ ಜೀ ಕನ್ನಡ ವಾಹಿನಿಯಲ್ಲಿ ನಡೆಯಿತು.ಕೇಕ್ ಕಟ್ ಮಾಡಿದ ನಂತರ ಮಾತನಾಡಿದ ಲಕ್ಷ್ಮಿ ನಾನು ಇದುವರೆಗೂ ಹುಟ್ಟು ಹಬ್ಬ ಆಚರಿಸುವಾಗ ಕೇವಲ ಸ್ವೀಟ್’ನ್ನು ಮಾತ್ರ ಕೊಡುತ್ತಿದ್ದೆ ಆದರೆ ಇದೆ ಮೊದಲನೇ ಬಾರಿಗೆ ನಾನು ಕೇಕ್ ಕಟ್ ಮಾಡ್ತಾಯಿದ್ದೀನಿ ಎಂದಾಗ ನೆರೆದಿದ್ದವರು ಭಾವುಕರಾದರು..

ಈ ಸಂಭ್ರಮದ ಸಮಯದಲ್ಲಿ ಲಕ್ಷ್ಮಿರವರ ತಾಯಿಯು ಸಹ ಜೊತೆಗಿದ್ದು, ಏನೂ ಮಾತನಾಡಲಾರದೆ ತುಂಬಾ ಬಾವುಕರಾಗಿ ಅಳುತ್ತಿದ್ದರು.ಅಷ್ಟೇ ಅಲ್ಲದೇ ಪರತಿಯೊಬ್ಬ ಜಡ್ಜಸ್ ಎಲ್ಲರೂ ಲಕ್ಷ್ಮಿ ಗಾಗಿ ಒಂದೊಂದು ಗಿಫ್ಟ್ ಅನ್ನು ನೀಡಿದರು..ವಿಜಯ ಪ್ರಕಾಶ್.ಹಂಸಲೇಖ, ಮತ್ತು ಅರ್ಜುನ ಜನ್ಯ ರವರು ಒಂದೊಂದು ಗಿಪ್ಟ್’ನ್ನು ಲಕ್ಷ್ಮಿಗೆ ಕೊಟ್ಟು ಶುಭ ಹಾರೈಸಿದರು.

ಇದರ ಜೊತೆ ನಿರೂಪಕಿ ಅನುಶ್ರೀ ಕೂಡ ಒಂದು ಮರೆಯಲಾರದ,ಲಕ್ಷ್ಮಿಗೆ ಅಗತ್ಯವಾದ ಕಾಣಿಕೆಯನ್ನು ನೀಡಿದರು.ಅದೆಂದರೆ ಲಕ್ಷ್ಮಿಗೆ ಶಾಲೆಗೆ ಹೋಗಲು ಒಂದು ಬ್ಯಾಗ್ ಕೂಡ ಇರಲಿಲ್ಲ. ಇದನ್ನು ಅರಿತಿದ್ದ ಅನುಶ್ರೀ ಬ್ಯಾಗ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾರೆ..

ಹೀಗೆ ತನ್ನ ಹಾಡಿನಿಂದಲೇ ಎಲ್ಲರ ಮನಗೆದ್ದಿರುವ ಹಳ್ಳಿ ಹುಡುಗಿ ಲಕ್ಷ್ಮಿ’ಗೆ ನಮ್ಮ “ಹಳ್ಳಿಹುಡುಗರು” ತಂಡದಿಂದ   ಹುಟ್ಟುಹಬ್ಬದ ಪ್ರಯುಕ್ತ ಶುಭ ಹಾರೈಸುತ್ತಾ, ಲಕ್ಷ್ಮಿ ತನ್ನ ಹಾಡಿನಿಂದ ಇನ್ನಷ್ಟೂ ಮತ್ತಷ್ಟು ಜನರನ್ನು ರಂಜಿಸಿ ಅತ್ತ್ಯುತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಇಲ್ಲಿದೆ ನೋಡಿ ಲಕ್ಷ್ಮಿ ರಾಮಪ್ಪ ಹುಟ್ಟುಹಬ್ಬದ ವಿಡಿಯೋ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ