ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..
ಬೆಂಗಳೂರಿನ ಸಂಜಯನಗರದ ಸಮಾಜ ಸೇವಕರಾದ ಶ್ರೀಮತಿ ಸುನಿತಾ ಮಂಜುನಾಥ್ ರವರು ಕನ್ನಡದ ಮೇಲಿನ ಅಭಿಮಾನಕ್ಕಾಗಿ ಈ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ.. ಈಗಾಗಲೇ ತಮ್ಮ ಎಜುಕೇಶನ್ ಟ್ರಸ್ಟ್ ಗಳ ಮೂಲಕ ಸಮಾಜ ಸೇವೆ ಮಾಡುತ್ತಾ ಅಪಾರ ಹೆಸರು ಗಳಿಸಿರುವ ಇವರು ಇದೀಗ ಕನ್ನಡಕ್ಕೆ ಹಾಡಿನ ರೂಪದಲ್ಲಿ ಕೊಡುಗೆಯೊಂದನ್ನು ನೀಡಿದ್ದಾರೆ..
ಪ್ರಖ್ಯಾತ ರ್ಯಾಪರ್ ಅಲೋಕ್ ರವರು ಹಾಡಿರುವ ಈ ಆಲ್ಬಂ ನಲ್ಲಿ ಹೆಸರಾಂತ IPS ಆಫೀಸರ್ ಡಿ.ರೂಪ ರವರು, ಸುಧಾ ನಾರಾಯಣಮೂರ್ತಿಯವರು, ಹಾಗೂ ಚಿತ್ರ ನಟಿಯರಾದ ಮಯೂರಿ, ಸಂಯುಕ್ತ ಹೊರನಾಡ್, ಸುಧಾ ಬೆಳವಾಡಿ, ಹಾಗೂ ಆಯುಷಿ ರವರು ಸೇರಿದಂತೆ ಇನ್ನು ಅನೇಕ ಮಂದಿ ಕಾಣಿಸಿಕೊಂಡಿದ್ದಾರೆ..
ಕೇಳಿದರೇ ಮೈ ರೋಮಾಂಚನವಾಗುವ ಈ ಹಾಡನ್ನು ನಮ್ಮ ಸ್ಯಾಂಡಲ್ವುಡ್ ನ ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ..ಆಲ್ಬಂ ಬಿಡುಗಡೆ ಮಾಡಿದ ಸಂಧರ್ಭದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಮಾತನಾಡಿ “ತಾಯಿ ಕನ್ನಡ” ಆಲ್ಬಂ ವೈಯಕ್ತಿಕವಾಗಿ ನನಗೆ ಬಹಳ ಇಷ್ಟವಾದ ಹಾಡು.. ಇಂತಹ ಕನ್ನಡದ ಹಾಡುಗಳು ಹೆಚ್ಚು ಹೆಚ್ಚಾಗಿ ಬರಬೇಕೆಂದು ಆಶಯ ವ್ಯಕ್ತಪಡಿಸಿದರು..
ಈ ಅಧ್ಬುತ ವೀಡಿಯೋವನ್ನು ನೋಡಿ:https://youtu.be/AK9ZQl4ARDY
ಕನ್ನಡ ತಾಯಿ ಪ್ರಧಾನವಾದ ಈ ಆಲ್ಬಂ ನಲ್ಲಿ ನೂರಾರು ಮಕ್ಕಳು ಅಭಿನಯಿಸಿದ್ದಾರೆ.. ನಗರದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿಸಿರುವ ಸುನಿತಾ ಮಂಜುನಾಥ್ ರವರು ತಮ್ಮ ಶಾಲೆಗಳಲ್ಲೂ ಈ ಹಾಡಿನ ಚಿತ್ರೀಕರಣಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ..
ಇಂತಹ ಕನ್ನಡದ ಹಾಡನ್ನು ನಮಗೆ ನೀಡಿದ ಸಮಾಜ ಸೇವಕಿ ಶ್ರೀಮತಿ ಸುನಿತಾ ಮಂಜುನಾಥ್ ರವರಿಗೆ ಹಾಗೂ ಹಾಡಿದಂತಹ ಅಲೋಕ್ ರವರಿಗೆ.. ಈ ಆಲ್ಬಂ ನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಸಾಧಕರಿಗೂ ನಮ್ಮ ಧನ್ಯವಾದಗಳು..
ಜೈ ಕರ್ನಾಟಕ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ: ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ…
ನೋಡುಗರ ಮನವನ್ನು ಕೆರಳಿಸುವ ಬ್ರಹ್ಮ ಕಮಲ ಸೂರ್ಯನ ಬೆಳಕಿನಿಂದ ಮೊಗ್ಗಾಗಿ ರಾತ್ರಿ ಚಂದ್ರ ಬರುವವರೆಗೂ ಕಾದು 11 ಗಂಟೆಯ ನಂತರ ಅರಳಿ ಬೆಳಗಾಗುವ ಹೊತ್ತಿಗೆ ಕಮರುವುದೇ ಬ್ರಹ್ಮ ಕಮಲ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.
ಭಾರತದ ಅತೀ ದೊಡ್ಡ ಹನುಮಂತನಿಗೆ ಭರ್ಜರಿ ಸ್ವಾಗತ ಮಾಡಿ, ಬೀಳ್ಕೊಟ್ಟ ಸೂಲಿಬೆಲೆ ಗ್ರಾಮಸ್ತರು. ಹೌದು, ಭಾರತದ ಅತೀ ಎತ್ತರದ, 62 ಅಡೀ ಇರುವ ಹನುಮನ ಏಕಶಿಲಾವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಹನುಮನಿಗೆ ಅಭೂತಪೂರ್ವ ಸ್ವಾಗತ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ. ಮಾರ್ಗ ಮಧ್ಯ ತೊಂದರೆಯಾದರೂ, ಆ…
ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್ಗಳು ದೇಹಕ್ಕೆ ಆರಾಮ ಕೊಡುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಪೋಲೆಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ. ಬೆಲ್ಲದಲ್ಲಿ ಮೆಗ್ನೀ ಷಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16…
ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಬದಲಾವಣೆಯಗಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು, ಆಗಸ್ಟ್ 1ರಿಂದ ಹಲವಾರು ನಿಯಮಗಳು ಬದಲಾವಣೆಯಾಗಲಿವೆ. ಬ್ಯಾಂಕ್ನಲ್ಲಿ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇದು ಸಿಹಿಸುದ್ದಿ. ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ಹಣ ವರ್ಗಾವಣೆ ಶುಲ್ಕವನ್ನು ಹಿಂಪಡೆಯಲು ಆರ್ಬಿಐ ನಿರ್ಧರಿಸಿದ ಬೆನ್ನಲ್ಲೇ, ಎಸ್ಬಿಐ ಜು.1ರಿಂದ ಅನ್ವಯವಾಗುವಂತೆ ಎನ್ಇಎಫ್ಟಿ ಮತ್ತು ಆರ್ಟಿಜಿಎಸ್ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.ಬ್ಯಾಂಕ್ನಲ್ಲಿ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ…
ಶಾಸ್ತ್ರಗಳ ಪ್ರಕಾರ ಜನರು ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಜನರ ದೃಷ್ಠಿಯನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಾರೆ. ಮನೆ ಮತ್ತು ಕಚೇರಿಯಲ್ಲಿ ನಿಂಬೆ ಹಣ್ಣು ಹಾಗೂ ಹಸಿ ಮೆಣಸನ್ನು ಕಟ್ಟುವುದು ಕೂಡ ಇದ್ರಲ್ಲಿ ಒಂದು. ನಿಂಬೆ-ಮೆಣಸಿನಲ್ಲಿ ತಂತ್ರ-ಮಂತ್ರದ ಜೊತೆ ಮನೋವಿಜ್ಞಾನದ ಸಂಬಂಧವೂ ಅಡಗಿದೆ. ನಿಂಬೆ ಹಣ್ಣು ಸೇರಿದಂತೆ ಹಸಿ ಮೆಣಸಿನಕಾಯಿ ಇನ್ನಿತರೇ ಅಡುಗೆಗೆ ಮಾತ್ರ ಮೀಸಲಾಗಿಲ್ಲ.ತಂತ್ರ-ಮಂತ್ರಕ್ಕೂ ಸಂಬಂಧವಿದೆ.ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನ ಖಾರದ ರುಚಿ ಕೆಟ್ಟ ದೃಷ್ಟಿಯುಳ್ಳವರ ಗಮನವನ್ನು ಬೇರೆಡೆಗೆ…