ರೆಸಿಪಿ

ರುಚಿ ರುಚಿಯಾದ ಬಾದುಷ ಮಾಡುವ ವಿಧಾನ ತಿಳಿಯಿರಿ…

2439

 

ಸಿಹಿ ತಿಂಡಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಬಾದುಶ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಎಲ್ಲಾ ವಯೋಮಾನದವರು ಸಹ ಇಷ್ಟ ಪಡುತ್ತಾರೆ. ನೀವೂ ಮನೆಯಲ್ಲೇ ಬಿಸಿಯಾದ ರುಚಿಯಾದ ಬಾದುಶವನ್ನು ತಯಾರಿಸಬಹುದು. ತಿಳಿಯಲು ಮುಂದೆ ಓದಿ…

ಬೇಕಾಗುವ ಪದಾರ್ಥಗಳು…

  • ಮೈದಾಹಿಟ್ಟು – 2 ಬಟ್ಟಲು
  • ಅಡುಗೆ ಸೋಡಾ – ಚಿಟಿಕೆ
  • ಮೊಸರು- ಕಾಲು ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಡಾಲ್ಡಾ (ತುಪ್ಪ) – ಅರ್ಧ ಬಟ್ಟಲು
  • ಎಣ್ಣೆ – ಕರಿಯಲು
  • ಸಕ್ಕರೆ – 1 1/2 ಬಟ್ಟಲು

ಮಾಡುವ ವಿಧಾನ…

  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಡುಗೆ ಸೋಡಾ, ಮೊಸರು ಹಾಗೂ ತುಪ್ಪವನ್ನು ಹಾಕಿ ಚಪಾತಿ ಹಿಟ್ಟಿನಂತೆ ಮಾಡಿಕೊಳ್ಳಬೇಕು.
  • ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ಎಳೆ ಪಾಕ ಮಾಡಿಕೊಳ್ಳಬೇಕು. ಪಾಕ ತಯಾರಾದ ಬಳಿಕ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಬೇಕು.
  • ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು.
  • ನಂತರ ಈ ಹಿಂದೆಯೇ ಮಾಡಿಟ್ಟುಕೊಂಡ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಿಕ್ಕ ಗಾತ್ರಕ್ಕೆ ತಟ್ಟಿ, ಉಂಡೆ ಮಧ್ಯೆ ಬೆರಳಿನಿಂದ ಹಳ್ಳ ಮಾಡಬೇಕು. (ಹಳ್ಳ ಮಾಡುವುದರಿಂದ ಎಣ್ಣೆಗೆ ಹಾಕಿದಾಗ ಉಂಡೆಗಳು ಒಳಗಿನಿಂದ ಚೆನ್ನಾಗಿ ಬೇಯಲು ಸಹಾಯವಾಗುತ್ತದೆ).
  • ಎಣ್ಣೆಯನ್ನು ಬಹಳ ಕಾಯಿಸಬಾರದು. ಸ್ವಲ್ಪ ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿಯೇ ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಕೆಂಪಗೆ ಕರಿಯಬೇಕು. ನಂತರ ಪಾಕಕ್ಕೆ ಇದನ್ನು ಹಾಕಿ 5 ನಿಮಿಷಗಳ ನಂತರ ತೆಗೆದರೆ ರುಚಿಕರವಾದ ಬಾದುಷ ಸವಿಯಲು ಸಿದ್ಧ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದುವೆಯಾದ ಮೊದಲ ರಾತ್ರಿಯ ನಂತರ ಬೆಳಿಗ್ಗೆ ಮನೆ ಬಿಟ್ಟ ವಧು!ಅಸಲಿ ವಿಷಯ ನೀವು ಅಂದುಕೊಂಡ ಹಾಗೆ ಇಲ್ಲ….

    ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ  ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…

  • ವ್ಯಕ್ತಿ ವಿಶೇಷಣ

    ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ..!ಅವರ ಬಗ್ಗೆ ತಿಳಿಯಲು ಈ ಲೇಖನ ಓದಿ..

    ರೈತ ನಾಯಕ ,ಶಾಸಕ ಕೆ ಎಸ್‌ ಪುಟ್ಟಣ್ಣಯ್ಯ (69) ಹೃದಯಾಘಾಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್‌ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ.

  • ಜ್ಯೋತಿಷ್ಯ

    ಚಾಮುಂಡೇಶ್ವರಿ ದೇವಿಯನ್ನು ಸ್ಮರಿಸುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯ ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಆಸಕ್ತಿಗಳನ್ನು…

  • ಕರ್ನಾಟಕ

    ನಮ್ಮ ಹಳ್ಳಿ (ಲೊಕೇಶನ್ ಟು ಲೈವ್)

    ಸ್ನೇಹಿತರೇ ನೋಡಿ ನಮ್ಮ ಕನ್ನಡ ನಾಡು ಚೆಲುವಿನ ಬೀಡು………………ಅಮೋಘಮಯ ಪ್ರೇಕ್ಷಣಿಯ ತಾಣಗಳನ್ನು ಹೊಂದಿರುವ ಇ ನಮ್ಮ ಕನ್ನಡ ನಾಡು ವರ್ಣ ರಂಜಿತವಾಗಿದೆ ,ಮರೆಯದೆ ಭೇಟಿ ಕೊಡಿ. ಕರ್ನಾಟಕದ ಆ ಸೊಬಗನ್ನು ಸವಿಯಲು

  • ಸುದ್ದಿ

    ಬಿಗ್ ಬ್ರೇಕಿಂಗ್ ನ್ಯೂಸ್ : ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್…!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳ್ಳಂಬೆಳಿಗ್ಗೆ ಸೆಲೆಬ್ರಿಟಿ ಒಬ್ಬರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಮಧ್ಯಾಹ್ನ ಫೇಸ್ ಬುಕ್ ಲೈವ್ ಗೆ ಬಂದು ಅದನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಅಂದ ಹಾಗೆ, ಆ ಸೆಲೆಬ್ರಿಟಿ ಸಿನಿಮಾದವರೇ ಅಥವಾ ರಾಜಕೀಯದವರೇ ಎನ್ನುವುದು ಕುತೂಹಲ ಮೂಡಿಸಿದೆ. ‘ಕುರುಕ್ಷೇತ್ರ’ ಸಿನಿಮಾದ ಆಡಿಯೋ ಸಂದರ್ಭದಲ್ಲಿ ದರ್ಶನ್ ಫೋಟೋ ಇರಲಿಲ್ಲ ಎಂಬ ಆರೋಪ ಅಭಿಮಾನಿಗಳಿಂದ ಕೇಳಿಬಂದಿತ್ತು. ಅಲ್ಲದೆ, ಇತ್ತೀಚೆಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದರು. ಇಂದು ಅವರು…

  • ಜ್ಯೋತಿಷ್ಯ

    ಮಹಿಳೆಯರು ಸ್ಮಶಾನಕ್ಕೆ ಹೋಗಬಾರದೇಕೆ ಗೊತ್ತಾ?

    ಅಂತಿಮ ಸಂಸ್ಕಾರದ ವೇಳೆ ಸ್ಮಶಾನಕ್ಕೆ ಮಹಿಳೆಯರು ಹೋಗುವುದಿಲ್ಲ. ಹಿಂದೂ ಧರ್ಮದಲ್ಲಿ ಸ್ಮಶಾನಕ್ಕೆ ಮಹಿಳೆಯರು ಹೋಗೋದು ನಿಷಿದ್ಧ. ಇದಕ್ಕೆ ಅನೇಕ ಕಾರಣಗಳಿವೆ. ಮನೆಯಲ್ಲಿ ಸಾವಾದ್ರೆ ಶವವನ್ನು ಮನೆಯಿಂದ ತೆಗೆದುಕೊಂಡು ಹೋದ ನಂತ್ರ ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಮನೆ ಕ್ಲೀನ್ ಮಾಡಿದ ನಂತ್ರ ಅಡುಗೆ ಮಾಡಲಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗ್ಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಈ ಎಲ್ಲ ಕೆಲಸ ಮಾಡಲು ಮಹಿಳೆಯರು ಮನೆಯಲ್ಲಿರುವುದು ಅವಶ್ಯಕ. ಆದ್ರೆ ಇದೊಂದೇ ಕಾರಣವಲ್ಲ. ಸ್ಮಶಾನದಲ್ಲಿ ಆತ್ಮಗಳು ವಾಸವಾಗಿರುತ್ತವೆ. ಕೆಟ್ಟ ಆತ್ಮಗಳು ನೆಲೆ ನಿಲ್ಲಲು ಮನುಷ್ಯನ…