ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟಿಪ್ಪು ಸುಲ್ತಾನ್ ಜಯಂತಿಯ ವಿಚಾರದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಮಧ್ಯೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟಿಪ್ಪು ಗುಣಗಾನ ಮಾಡಿದ್ದಾರೆ.
ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ಬುಧವಾರ ಜಂಟಿ ಅಧಿ ವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, “ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಟಿಪ್ಪು ಸುಲ್ತಾನ್’ ಎಂದು ಶ್ಲಾ ಸಿದ್ದಾರೆ.
ಇದಷ್ಟೇ ಅಲ್ಲ, ಮೈಸೂರು ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಯುದ್ಧ ಭೂಮಿಯಲ್ಲಿ ಮೊದಲ ಬಾರಿಗೆ ಬಳಕೆ ಮಾಡಿದ ಕೀರ್ತಿಯೂ ಟಿಪ್ಪು ಸುಲ್ತಾನ್ಗೆ ಸಲ್ಲುತ್ತದೆ ಎಂದು ಕೋವಿಂದ್ ಅವರು ಟಿಪ್ಪು ಸಾಧನೆಯನ್ನು ಕೊಂಡಾಡಿದ್ದಾರೆ. ಟಿಪ್ಪು ಬಳಸಿದ ಮೇಲಷ್ಟೇ ಐರೋಪ್ಯ ದೇಶಗಳಲ್ಲಿ ಈ ತಂತ್ರಜ್ಞಾನ ಬಳಕೆ ಮಾಡಲಾಯಿತು ಎಂದೂ ಹೇಳಿದರು.
ರಾಷ್ಟ್ರಪತಿ ಮಾತಿನಿಂದ ಖುಷಿ ಗೊಂಡ ಕಾಂಗ್ರೆಸ್, ಜೆಡಿಎಸ್ ಸದ ಸ್ಯರು ಮೇಜು ಕುಟ್ಟಿ ಸ್ವಾಗತಿಸಿದರೆ, ಅನಿ ರೀಕ್ಷಿತವಾಗಿ ಎದುರಾದ “ಟಿಪ್ಪು ಬಣ್ಣನೆ’ ಬಿಜೆಪಿ ಸದಸ್ಯರಿಗೆ ಶಾಕ್ ನೀಡಿತು.
ಇದರ ಜತೆಗೆ ಸದ್ಯ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಇನ್ನೊಂದು ವಿವಾದ “ಲಿಂಗಾಯತ’ದ ಬಗ್ಗೆಯೂ ಮಾತನಾಡಿದ ಕೋವಿಂದ್, ಸಮಾಜ ಸುಧಾರಣೆಯ “ಲಿಂಗಾಯತ’ ಚಳವಳಿ ಬಸವಾಚಾರ್ಯರ ನೇತೃತ್ವದಲ್ಲಿ ನಡೆದದ್ದು ಕರ್ನಾಟಕದಲ್ಲೇ. ಈ ಎಲ್ಲವೂ ದೇಶ ನಿರ್ಮಾಣಕ್ಕೆ ನೀಡಿದ ಕೊಡುಗೆಗಳೇ ಎಂದು ಬಣ್ಣಿಸಿದರು.
ಮಹಾವೀರ ಜೈನ, ಗೌತಮ ಬುದ್ಧ ಸ್ವೀಕರಿಸಿದ ನಾಡಿದು. ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರು ಮಠ ಸ್ಥಾಪಿ ಸಿದ್ದು, ಕಲಬುರಗಿ ಸೂಪಿ ಸಂಸ್ಕೃತಿಯ ಕೇಂದ್ರವಾಗಿರುವುದು ಈ ನಾಡಿನ ವೈಶಿಷ್ಟ é ಎಂದು ಕೊಂಡಾಡಿದರು.
ರಾಷ್ಟ್ರಪತಿಯವರು ತಮ್ಮ ಭಾಷಣ ದಲ್ಲಿ ವಿಜಯನಗರ ಸಾಮ್ರಾಜ್ಯ ಆಳಿದ ಶ್ರೀಕೃಷ್ಣದೇವರಾಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರನ್ನು ಸ್ಮರಿಸಿಕೊಂಡರು. ಸೇನಾ ಮುಖ್ಯಸ್ಥರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಕರ್ನಾಟಕದ ಮಕ್ಕಳು ಎಂದು ಬಣ್ಣಿಸಿದರು.
ಹೆಮ್ಮೆಯ ಕ್ಷಣ: ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ ಬಗ್ಗೆಯೂ ಮೆಚ್ಚುಗೆ ಸೂಚಿಸಿದ ರಾಷ್ಟ್ರಪತಿ ಯವರು ನಾನು ರಾಷ್ಟ್ರಪತಿಯಾದ ಅನಂತರ ಮೊದಲ ಭೇಟಿ ಇದಾಗಿದ್ದು, ವಿಧಾನಸೌಧ ವಜ್ರ ಮಹೋತ್ಸವದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡು ತ್ತಿರುವುದು ಹೆಮ್ಮೆ ಎಂದರು.
1956ರ ಅಕ್ಟೋಬರ್ನಲ್ಲಿ ದೇಶದ ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದ್ದ ವಿಧಾನಸೌಧದಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಸಂತಸ ತಂದಿದೆ. ನಾನು ರಾಜೇಂದ್ರ ಪ್ರಸಾದ್ ಅವರ ಮಾರ್ಗದಲ್ಲೇ ಸಾಗುತ್ತೇನೆ ಎಂದರು.
ದೇವೇಗೌಡರ ಹೆಸರೇ ಇಲ್ಲ: ಭಾಷಣ ಸಂದರ್ಭ ವಿಧಾನ ಸೌಧ ನಿರ್ಮಾಣಕ್ಕೆ ಕಾರಣರಾದವರು, ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದ ಮುಖ್ಯಮಂತ್ರಿಗಳ ಹೆಸರನ್ನೂ ರಾಷ್ಟ್ರಪತಿ ಕೋವಿಂದ್ ನೆನಪಿಸಿಕೊಂಡರು.
ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಸರೇ ಕಣ್ಮರೆಯಾಗಿದ್ದುದು ಜೆಡಿಎಸ್ ಸದಸ್ಯರ ಆಕ್ರೋ ಶಕ್ಕೂ ಕಾರಣವಾಯಿತು. ಬಳಿಕ ಅವರೇ ನೆನಪಿಸಿ ಕೊಂಡು, ನನ್ನ ಸ್ನೇಹಿತರೂ ಆಗಿರುವ ದೇವೇಗೌಡರನ್ನು ಮರೆಯುವು ದುಂಟೇ ಎಂದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೈಲಟ್ ಇಲ್ಲದ ವಿಮಾನ ತಯಾರಿಸಲು ಬೋಯಿಂಗ್ ಕಂಪನಿ ಮುಂದೆ ಬಂದಿದೆ. ವಿಮಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಮುಂದಿನ ವರ್ಷದ ವೇಳೆಗೆ ಪೈಲಟ್ ಇಲ್ಲದ ವಿಮಾನ ನಿರ್ಮಾಣದ ಕನಸು ನನಸಾಗಿರುವ ಗುರಿ ಹೊಂದಿದೆ.
ಒಂದೊಂದು ಬಗೆಯ ಆಹಾರಗಳು ಒಂದೊಂದು ಸೀಸನ್ ಗೆ ಸೀಮಿತವಾಗಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳು ಒಂದು ಕಾಲಮಾನದಲ್ಲಿ ಬೆಳೆಯಲ್ಪಟ್ಟು ಜನರಿಗೆ ಸಹಾಯಕವಾದರೆ, ಕೆಲವೊಂದು ಪದಾರ್ಥಗಳು ನಿರ್ದಿಷ್ಟ ಕಾಲಮಾನದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ಮನೆ ಮಾಡಿದೆ. ನಾವು ಇತ್ತೀಚಿನ ದಿನಗಳಲ್ಲಿ ಸೀಸನಲ್ ಫ್ರೋಟ್ ಹಾಗೂ ತರಕಾರಿಗಳಿಗೆ ಮಾರು ಹೋಗುತ್ತೇವೆ. ಅಂದರೇ ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಗಳನ್ನು ಬಿರು ಬಿಸಿಲಿನ ಬೇಸಿಗೆಯ ಕಾಲದಲ್ಲಿ ಸೇವಿಸುತ್ತವೆ. ಅದಕ್ಕೆ ಕಾರಣ ಇದರಲ್ಲಿ ಹೆಚ್ಚಿನ ನೀರಿನ ಮಟ್ಟವಿದ್ದು ಅದು ನಮ್ಮ ದೇಹವನ್ನು…
ಕೇಂದ್ರ ಸರ್ಕಾರ ಅಂತೂ ಇಂತೂ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಘೋಷಿಸಿದೆ. ಬಿಹಾರದ ಜತೆ ಕರ್ನಾಟಕಕ್ಕೂ ನೆರೆಪರಿಹಾರ ಹಣವನ್ನು ಇಂದು [ಶುಕ್ರವಾರ] ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪ್ರವಾಹ ಪೀಡಿತ ಬಿಹಾರ ಮತ್ತು ಕರ್ನಾಟಕ ರಾಜ್ಯಗಳಿಗೆ ಮಧ್ಯಂತರ ಪರಿಹಾರ ಹಣವನ್ನಾಗಿ ಬಿಹಾರಕ್ಕೆ 400 ಕೋಟಿ ರೂ. ಮತ್ತು ಕರ್ನಾಟಕಕ್ಕೆ1200 ಕೋಟಿ ರೂ. ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್ಡಿಆರ್ಎಫ್) ಒಟ್ಟು1813.75 ಕೋಟಿ…
ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.
ತಮಿಳು ರಾಕರ್ಸ್ ಈ ಹೆಸರನ್ನು ಕೇಳಿದರೆ ಸಾಕು ಇಡೀ ತಮಿಳು ಚಿತ್ರೋದ್ಯಮ ಬೆಚ್ಚಿ ಬೀಳುತ್ತದೆ. ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ. ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ…
ಇಂದು ಶನಿವಾರ, 17/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…