ಸಿನಿಮಾ

ರಜನಿಕಾಂತ್ ಅಭಿಮಾನಿಗಳು ಅರೆಸ್ಟ್ !!!

77

ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರದಲ್ಲಿ ತಮಿಳುನಾಡಲ್ಲಿ ಭಾರೀ ಜಟಾಪಟಿ ಸಾಗಿದೆ. ಅದೂ ಕೂಡಾ ರಜನಿ ವಿಚಾರದಲ್ಲಿ ತಮಿಳು ಭಾಷಿಗರ ನಡುವೆಯೇ ಜಟಾಪಟಿ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಕ್ಕೆ ತಮಿಳು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಜನಿ ಅಭಿಮಾನಿಗಳು ತಲೈವಾ ಪರ ನಿಂತಿದ್ದಾರೆ. ಯಾರು ಏನೇ ಹೇಳಲಿ, ನೀವು ರಾಜಕೀಯಕ್ಕೆ ಎಂಟ್ರಿ ಕೊಡಿ ಅಂತ ಇದ್ದಾರೆ ಅವರ ಅಭಿಮಾನಿಗಳು.

ರಜನಿಕಾಂತ್ ರಾಜಕೀಯ ಪ್ರವೇಶದ ನಿರ್ಧಾರದ ವಿರುದ್ಧ ಸೋಮವಾರ ತಮಿಳು ಸಂಘಟನೆಗಳು ನಡೆಸಿದ್ದ ಪ್ರತಿಭಟನೆಗೆ ಪ್ರತಿಯಾಗಿ ಚೆನ್ನೆಯ್ಯನಲ್ಲಿ ಮಂಗಳವಾರ ರಜನಿ ಅಭಿಮಾನಿಗಳು ಶಕ್ತಿಪ್ರದರ್ಶನ ಮಾಡಿದರು. ಇಂದು ರಜನಿ ಅಭಿಮಾನಿಗಳು ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಚನ್ನೈನ ವಾಶರ್ ಮನ್ ಪೆಟ್ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿದ್ದ ರಜನಿಕಾಂತ್, ತಮಿಳು ಮುನ್ನಟ್ರ ಪಡೈ ಸಂಘಟನೆಯ ವಿರುದ್ದ ಘೋಷಣೆ ಕೂಗಿದರು.

 

ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ತಲೈವಾ ರಾಜಕೀಯ ಪ್ರವೇಶಕ್ಕೆ ಬೆಂಬಲ ಸೂಚಿಸಿದರು. ದೊಡ್ಡ ಸಂಖ್ಯೆಯಲ್ಲಿ ತಲೈವಾ ಬೆಂಬಲಿಗರು ಜಮಾಯಿಸಿದ ಹಿನ್ನಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸವನ್ನೇ ನಡೆಸಬೇಕಾಯಿತು.

ರಜನಿ ಅಭಿಮಾನಿಗಳು ರಜನೀಕಾಂತ್ ರಾಜಕೀಯಕ್ಕೆ ಬರುವುದನ್ನು ಉಗ್ರವಾಗಿ ಪ್ರತಿಭಟಿಸಿದ ಮುನ್ನೇತ್ರ ಪಡೆಯ ನಾಯಕಿ ವೀರಲಕ್ಷ್ಮೀಯ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.

ಇದೇ ವೇಳೆ ನೂರಕ್ಕೂ ಹೆಚ್ಚು ರಜನಿ ಅಭಿಮಾನಿಗಳನ್ನು ಪೋಲಿಸರು ವಶಕ್ಕೆ ಪಡೆದರು. ತಮ್ಮ ನೆಚ್ಚಿನ ನಾಯಕ ರಜನೀಕಾಂತ್ ರಾಜಕೀಯ ಪ್ರವೇಶವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಜನಿ ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಿದ್ದ ಸನ್ನಿವೇಶ ಗಮನಸೆಳೆಯಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ