ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.
ಯುವಜನತೆ ಮದ್ಯಸೇವನೆ ಪ್ರಮಾಣವನ್ನು ನಿರ್ಧರಿಸುವುದು ಹೇಗೆ ಎಂಬುದನ್ನು ತಿಳಿದರೆ ಅಚ್ಚರಿ ಮೂಡುತ್ತದೆ. ಯಾಂತ್ರಿಕ ವ್ಯವಸ್ಥೆಯನ್ನು ವಿಶ್ಲೇಷಿಸುವ ಇಂಜಿನಿಯರಿಂಗ್ ಮಾದರಿ ಮದ್ಯಪಾನದ ಮಿತಿಯನ್ನು ಅಳೆಯುವುದಕ್ಕೂ ಅನ್ವಯಿಸುತ್ತದೆ ಎಂದು ಓಹಿಯೋ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
ಯುವಜನರು ಮದ್ಯಸೇವನೆ ಸಾಕು ಎಂದು ನಿರ್ಧರಿಸುವುದು ಇಂಜಿನಿಯರಿಂಗ್ ನಲ್ಲಿ ಹೇಳಲಾಗಿರುವ ಫೀಡ್ ಬ್ಯಾಕ್ ಕಂಟ್ರೋಲರ್ ನನ್ನೇ ಹೋಲುತ್ತದೆ ಎಂದು ಓಹಿಯೋ ವಿವಿಯ ಸಂಶೋಧಕ ಕೆವಿನ್ ಪಸ್ಸಿನೊ ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಕಾರ್ ಗಳಲ್ಲಿ ಬಳಕೆಯಾಗುವ ಕ್ರೂಸ್ ಕಂಟ್ರೋಲ್ ವ್ಯವಸ್ಥೆ ಯುವಜನರಲ್ಲೂ ಮದ್ಯ ಸೇವನೆ ಪ್ರಮಾಣವನ್ನು ‘ಸಾಕು’ ಎಂದು ನಿರ್ಧರಿಸುವ ವ್ಯವಸ್ಥೆಯನ್ನೇ ಹೋಲುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಯುವಜನತೆಯಲ್ಲಿ ಹೆಚ್ಚುತ್ತಿರುವ ಅತಿ ಹೆಚ್ಚು ಮದ್ಯ ಸೇವನೆಯ ಪ್ರವೃತ್ತಿಯನ್ನು ಇಂಜಿನಿಯರಿಂಗ್ ವಿಧಾನದ ಮೂಲಕ ಅರಿತುಕೊಳ್ಳದೆ ಇದ್ದರೆ ಅದು ಗೌಪ್ಯವಾಗಿಯೇ ಉಳಿಯುತ್ತದೆ ಎಂದು ಓಹಿಯೋ ವಿವಿಯ ಪ್ರೊಫೆಸರ್ ಜಾನ್ ಕ್ಲಾಪ್ಪ್ ಹೇಳಿದ್ದಾರೆ. ಸುಮಾರು 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಮೀಕ್ಷೆಗೊಳಪಡಿಸಲಾಗಿದ್ದು ಈ ಅಧ್ಯಯನ ವರದಿ ಪ್ರಕಟಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ. ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ…
ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ ಸೇವಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ಕುದಿಸಿದ ನೀರನ್ನು ಕುಡಿಯುವುದ್ರಿಂದ ಮಲಬದ್ಧತೆ, ಎಸಿಡಿಟಿ ಹಾಗೂ ಆಯಾಸ ಸಮಸ್ಯೆ ಕಡಿಮೆಯಾಗುತ್ತದೆ. ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ. ಇದು ದೇಹದಲ್ಲಿರುವ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಒಣದ್ರಾಕ್ಷಿ ಕುದಿಸಿಟ್ಟ ನೀರು ಮುಖದ ಮೇಲಿನ ಸುಕ್ಕನ್ನು ಕಡಿಮೆ…
ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಆಸೆಯೇ? ಹಾಗಿದ್ದರೆ ಎಸ್.ಬಿ.ಐ. ವೆಬ್ ಸೈಟ್ ಗೊಮ್ಮೆ ಭೇಟಿ ಕೊಡಿ, ಅವಕಾಶಗಳು ನಿಮಗಾಗಿ ಎದುರು ನೋಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 20-28 ವಯೋಮಿತಿಯವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶದ ತನ್ನ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 700 ಮಂದಿಗೆ ಅವಕಾಶ ನೀಡಲು ನಿರ್ಧರಿಸಿದೆ. ಮಾನ್ಯತೆಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು ಅಕ್ಟೋಬರ್ 16ರೊಳಗೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಬೇಕು.ಆನ್ ಲೈನ್ ನಲ್ಲೇ ಪರೀಕ್ಷೆ…
ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು. ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ ಇಲ್ಲದೆ ಸ್ಥಳಕ್ಕೆ ಬಂದ ಕೋತಿ,…
ರಾಯಚೂರು/ವಿಜಯಪುರ/ಬೆಳಗಾವಿ: ಜುಲೈಮುಗಿಯುತ್ತಿದ್ದರೂ ರಾಜ್ಯದ ಯಾವ ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲವೆಂಬುವುದು ದುಃಖದಸಂಗತಿ. ಅದರೊಟ್ಟಿಗೆ ಅಲ್ಲಲ್ಲಿ ಮಳೆಯಾಗಿರುವ ಸುದ್ದಿ ಕೇಳಿದರೂ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮಳೆಯಾಗುತ್ತಿದ್ದು, ನಾರಾಯಣಪುರಜಲಾಶಯದ ತುಂಬಿದೆ. ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ನಾರಾಯಣಪುರ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 18 ಗೇಟ್ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಾಲೂಕು…
ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.