ಜ್ಯೋತಿಷ್ಯ

ಯಾವ ದಿನ ಹುಟ್ಟಿದವರು, ಏನೆಲ್ಲಾ ಗುಣ ನಡೆತೆ ಹೊಂದಿರುತ್ತಾರೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

1465

ಜ್ಯೋತಿಷ್ಯಾಸ್ತ್ರ ಬಹು ಪುರಾತನವಾಗಿದ್ದರೂ ಕೆಲವರು ಇಂದಿಗೂ ನಂಬುವುದಿಲ್ಲ. ಆದರೆ ನಮ್ಮ ಹುಟ್ಟಿನ ಕೆಲವು ಅಂಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.

ದೇಹದ ಮೇಲಿನ ಮಚ್ಚೆ, ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ! ಹುಟ್ಟಿದ ದಿನಾಂಕ, ಸಮಯ ಗೊತ್ತಾದರೆ ಜ್ಯೋತಿಷಿಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಇತರ ವಿಷಯಗಳ ಬಗ್ಗೆ ಸೂಕ್ತ ವಿವರ ನೀಡಬಲ್ಲರು. ಇಂದಿನ ಲೇಖನದಲ್ಲಿ ಹುಟ್ಟಿದ ದಿನ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನೋಡೋಣ: ಈ ವಿವರಗಳ ಬಗ್ಗೆ ಅರಿತರೆ ನಿಮ್ಮ ಅಥವಾ ನೀವು ತಿಳಿದುಕೊಳ್ಳಬೇಕಾದ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಿಮ್ಮ ಗುಣಗಳು ಹೇಗೆ ಎಂಬುದನ್ನು ಕಂಡುಕೊಳ್ಳಬಹುದು.

ಸೋಮವಾರ:-

ಈ ದಿನದಂದು ಹುಟ್ಟಿದವರು ಸಾಮಾನ್ಯವಾಗಿ ಸ್ವಪ್ರಶಂಸಕರಾಗಿದ್ದು ಉಳಿದವರನ್ನೆಲ್ಲಾ ದ್ವೇಶಿಸುವ ಮನೋಭಾವ ಹೊಂದಿರುತ್ತಾರೆ. ಆದರೆ ಕೆಲವು ಅಪವಾದ ಎಂಬಂತೆ ಈ ದಿನ ಹುಟ್ಟಿರುವವರಲ್ಲಿ ಕೆಲವರು ಅತ್ಯಂತ ಪ್ರೇಮಮಯಿಗಳಾಗಿರುತ್ತಾರೆ.  ಇವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುವವರೂ, ಕ್ರಿಯಾತ್ಮಕರೂ, ತಮ್ಮ ವಿಚಾರಗಳನ್ನು ತಮ್ಮೊಂದಿಗೇ ಇಟ್ಟುಕೊಳ್ಳುವವರೂ ಆಗಿರುತ್ತಾರೆ. ಇವರು ಯಸಸ್ಸನ್ನು ಹಿಂಬಾಲಿಸಿಕೊಂಡು ಹೋಗುವವರೂ, ನಾಯಕತ್ವದ ಗುಣಗಳನ್ನು ಹೊಂದಿರುವವರೂ ಆಗಿದ್ದಾರೆ.

ಮಂಗಳವಾರ:-

ಇವರು ಕುತೂಹಲಕಾರಿ ವ್ಯಕ್ತಿಗಳಾಗಿದ್ದು ತಮ್ಮ ಬಗ್ಗೆ ಬರುವ ಅಭಿಪ್ರಾಯಗಳನ್ನು ಅತಿ ಗಂಭೀರವಾಗಿ ಪರಿಗಣಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಒಂದು ಗುರಿಯನ್ನು ಹೊಂದಿದ್ದು ಆ ಗುರಿಯನ್ನು ಪಡೆಯಲು ತಮ್ಮ ಪೂರ್ಣ ಸಾಮರ್ಥ್ಯವನ್ನು ಮುಡಿಪಾಗಿಸುತ್ತಾರೆ. ಸಂಬಂಧಗಳಿಗೆ ಹೆಚ್ಚು ಒಲವು ನೀಡುವ ಇವರು ಸಾಮಾನ್ಯವಾಗಿ ತಮ್ಮ ಕೆಲಸದ ಬಗ್ಗೆ ಹೆಚ್ಚು ಒತ್ತಡವನ್ನು ಅನುಭವಿಸುತ್ತಾರೆ.

ಬುಧವಾರ:-

ಈ ದಿನ ಹುಟ್ಟಿದವರು ತಮ್ಮ ಕೆಲಸವನ್ನು ಇಷ್ಟಪಟ್ಟರೂ ಆರಾಮವಾಗಿ ಮಗಿಸುವಂತಹವರಾಗಿದ್ದಾರೆ. ಇವರು ತಾವಾಗಿ ಕೆಲಸ ಮಾಡುವುದಕ್ಕಿಂತ ತಮ್ಮ ಕೈಕೆಳಗಿನ ವ್ಯಕ್ತಿಗಳಿಂದ ಪೂರ್ಣಪ್ರಮಾಣದ ಕೆಲಸವನ್ನು ಮಾಡಿಸಿಕೊಳ್ಳುವ ಗುಣ ಹೊಂದಿದ್ದು ಇದಕ್ಕಾಗಿ ತಮ್ಮ ಸ್ನೇಹ ಆದರಗಳನ್ನು ಬಳಸುತ್ತಾರೆ. ಇವರು ಸಮಾಜದ ವಿವಿಧ ಬಗೆಯ ವ್ಯಕ್ತಿಗಳೊಂದಿಗೆ ಇತರರಿಗಿಂತ ಸುಲಭವಾಗಿ ಸ್ನೇಹ ಸಂಪಾದಿಸಿಕೊಳ್ಳುತ್ತಾರೆ.

ಗುರುವಾರ:-

ಈ ದಿನ ಹುಟ್ಟಿದ ಜನರು ಸಾಮಾನ್ಯವಾಗಿ ಇತರರಿಂದ ಪ್ರಶಂಸೆ ಪಡೆಯುವವರಾಗಿರುತ್ತಾರೆ. ಇವರು ಆಕರ್ಷಕ ವ್ಯಕ್ತಿತ್ವ ಹೊಂದಿದ್ದು ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ. ಇವರು ಒಂಟಿಯಾಗಿ ಕೆಲಸ ಮಾಡಲು ಇಚ್ಛಿಸುವವರಾಗಿದ್ದು ಸದಾ ಆಶಾವಾದಿಗಳಾಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ಜನರಿಗೆ ಅತಿ ಹೆಚ್ಚಿನ ಗೌರವ ನೀಡುತ್ತಾರೆ ಹಾಗೂ ಗೌರವ ಪಡೆಯಲು ಇಚ್ಛಿಸುತ್ತಾರೆ.

ಶುಕ್ರವಾರ:-

ಶುಕ್ರವಾರ ಜನಿಸಿದ ಜನರು ಕ್ರಿಯಾತ್ಮರಾಗಿರುತ್ತಾರೆ. ಇವರು ಅಪಾರ ಬುದ್ಧಿಮತ್ತೆಯುಳ್ಳವರಾಗಿದ್ದು ತಮ್ಮ ಸ್ನೇಹವೃಂದದಲ್ಲಿ ಪ್ರಮುಖ ಪಾತ್ರ ಪಡೆಯುತ್ತಾರೆ. ಇವರಿಗೆ ಅಪಾರವಾದ ದೂರದೃಷ್ಟಿ ಮತ್ತು ಒಳ ಅರಿವು ಸಹಾ ಜನ್ಮತಃ ಬಂದಿರುತ್ತದೆ.

ಶನಿವಾರ:-

ಈ ದಿನ ಹುಟ್ಟಿದವರು ಅತಿ ಹೆಚ್ಚಿನ ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ. ಆದರೆ ಕೆಲವೊಮ್ಮೆ ಇವರು ಚಿಕ್ಕಪುಟ್ಟ ಸೋಲುಗಳಿಗೂ ತೀರಾ ಹತಾಶೆ ವ್ಯಕ್ತಪಡಿಸಿ ಹಿಮ್ಮೆಟ್ಟುತ್ತಾರೆ. ಇವರು ಸಾಮಾನ್ಯವಾಗಿ ಹೊಸ ವಿಚಾರಗಳಿಗೆ ಸ್ಪಂದಿಸದೇ ಬದಲಿಗೆ ಋಣಾತ್ಮಕ ಸಲಹೆಗಳನ್ನೇ ನೀಡುತ್ತಾರೆ. ಇವರು ತಮ್ಮ ರೂಪ ಲಾವಣ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಕೊಂಚ ಕುಟಿಲರೂ ಆಗಿರುತ್ತಾರೆ.

ಭಾನುವಾರ:-

ಈ ದಿನ ಹುಟ್ಟಿದ ವ್ಯಕ್ತಿಗಳು ಅತಿ ಆಶಾವಾದಿಗಳಾಗಿದ್ದು ಭಿನ್ನ ಸಂದರ್ಭಗಳಲ್ಲಿ ಭಿನ್ನವಾಗಿ ಪ್ರತಿಕ್ರಿಯಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಚಿಂತನೆ ಹೊಂದಿದ್ದು ಸದಾ ನಗುತ್ತಲೇ ಇರುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಸಮಾಜದಲ್ಲಿರಲು ಇಷ್ಟಪಡುವಂತೆಯೇ ಕೊಂಚ ಕಾಲ ಏಕಾಂತದಲ್ಲಿಯೂ ಇರಲು ಇಚ್ಛಿಸುತ್ತಾರೆ.

ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ಭವಿಷ್ಯ ಹೇಳುತ್ತೆ…ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ರೂ,ಈ ನಟನ ಜನಪರ ಕಾಳಜಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!ತಿಳಿಯಲು ಈ ಲೇಖನಿ ಓದಿ…

    ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…

  • ಆಧ್ಯಾತ್ಮ

    ರೋಗಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ ಮಾಡಿ

    ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ…

  • ಉಪಯುಕ್ತ ಮಾಹಿತಿ

    ಶೂನ್ಯ ಬಂಡವಾಳದಲ್ಲಿ ಶುರುಮಾಡುಬಹುದಾದ 7 ಬುಸಿನೆಸ್..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡುವವರು ಮೊದಲು ನೋಡುವುದು ಬಂಡವಾಳ‌.. ಹೌದು ದೊಡ್ಡ ಮಟ್ಟದ ಬಂಡವಾಳ ಹಾಕುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತವರು ಒಂದು ಹತ್ತು ಸಾವಿರ ರೂಪಾಯಿಗಳ ಒಳಗೆ ಬಂಡವಾಳ ಹೂಡಿ ಸ್ವಂತ ಉದ್ಯೋಗ ಮಾಡಬಹುದು.. ಆ ಉದ್ಯೋಗಗಳು ಇಲ್ಲಿವೆ ನೋಡಿ.. ಬ್ಲಾಗಿಂಗ್ ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(13 ಡಿಸೆಂಬರ್, 2018) ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ…

  • ಸುದ್ದಿ

    ರಾತ್ರಿಸಮಯ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

    ಡ್ರಗ್ಸ್, ಆಲ್ಕೋಹಾಲ್‌ನಂತಹ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿರುವಂತೆ ಸ್ಮಾರ್ಟ್‌ಫೋನ್‌ಗಳಿಗೆ ಇಂದಿನ ಜನ ಅಡಿಕ್ಟ್ ಆಗುತ್ತಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ. ಆದರೆ, ಇದೀಗ ಬಿಡುಗಡೆಯಾಗಿರುವ ನೂತನ ವರದಿಯೊಂದು ಸ್ಮಾರ್ಟ್‌ಫೋನ್ ಬಳಕೆಗೂ ಒಂದು ಮಿತಿ ಎನ್ನುವುದನ್ನು ಸಾರಿಸಾರಿ ಹೇಳುತ್ತಿದೆ. ಹೌದು, ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ ‘ಸ್ಯಾನ್ ಡೈಗೊ ಸ್ಟೇಟ್’ ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ…

  • ಕರ್ನಾಟಕ

    ನಿಮ್ಮ ಬೆರಳ ತುದಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ!ಹೇಗೆ ಅಂತೀರಾ?ಈ ಲೇಖನಿ ಓದಿ….

    ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.