ಕರ್ನಾಟಕ

ಮೋದಿಯವರಿಗೆ ತನ್ನ ರಕ್ತದಲ್ಲಿ, ಪತ್ರ ಬರೆದ ಕರುನಾಡಿನ ಹಳ್ಳಿ ಯುವಕ! ಆ ಪತ್ರದಲ್ಲಿ ಏನಿದೆ ಗೊತ್ತಾ?

2536

ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಲು ಸಿಂಧನೂರು ತಾಲೂಕಿನ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

 

ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ವೀರಭದ್ರಪ್ಪ ಅನ್ನೋ ರೈತನ ಮಗನಾದ ರವಿ ಗೌಡ, ದ್ವಿತೀಯ ಪಿಯುಸಿ ವಿದ್ಯಾಬ್ಯಾಸ ಮಾಡಿದ್ದು, ತಮ್ಮ ಎರಡು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ತಮ್ಮ ಕುಟುಂಬ ಸೇರಿದಂತೆ,  ಈ ಭಾಗದ ರೈತರ ಶೋಚನೀಯ ಸ್ಥಿತಿಯ ಬಗ್ಗೆ ಗಮನ ಸೆಳೆಯುವುದಕ್ಕೆ ಹಾಗೂ ತುಂಗಭದ್ರ ಎಡದಂಡೆ ಕಾಲುವೆ ನೀರು ರೈತರಿಗೆ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಮೂರು ಪುಟದ ಒಂದು ಪತ್ರ ಬರೆದಿದ್ದಾರೆ.

 

ತುಂಗಭದ್ರ ಎಡದಂಡೆ ಕಾಲುವೆ ನೀರು ರೈತರಿಗೆ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಮೂರು ಪುಟದ ಒಂದು ಪತ್ರ ಬರೆದಿದ್ದಾರೆ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ತುಂಗಭದ್ರಾ ಜಲಾಶಯದ ಜೀವನಾಡಿಯಾಗಿದೆ. ಈ ಮೂರು ಜಿಲ್ಲೆಗಳಿಗೆ ತುಂಗಭದ್ರಾ ಎಡದಂಡೆ ನಾಲೆಯಿಂದ ನೀರು ಹರಿಯಬೇಕು. ಆದ್ರೆ ಸಮರ್ಪಕವಾಗಿ ನೀರು ಹರಿಯದೇ ಕಾಲುವೆಯಲ್ಲಿ ಹರಿಯುವ ನೀರನ್ನು ಅಕ್ರಮವಾಗಿ ಪಡೆದು ನೀರಾವರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪರಿಣಾಮ ರೈತರ ಬೆಳೆಗಳಿಗೆ ನೀರು ಸಿಗದೆ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಮೊದಲನೇ ಪುಟದಲ್ಲಿ ವಿವರಿಸಿದ್ದಾರೆ.

ಜೊತೆಗೆ ಪ್ರಾಥಮಿಕ ಪ್ರೌಢ ಶಾಲಾ ಪಠ್ಯಕ್ರಮದಲ್ಲಿ ಇತರೆ ವಿಷಯಗಳಂತೆ ವ್ಯವಸಾಯ ಶಾಸ್ತ್ರವನ್ನು ಅಳವಡಿಸಬೇಕು. ಇದರಿಂದ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲದೆ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ಅಂತ ಮೂರು ಪುಟಗಳ ಎರಡನೇ ಪತ್ರವನ್ನೂ ಬರೆದಿದ್ದಾರೆ.

 

 

ಮಲ್ಲದಗುಡ್ಡ ಗ್ರಾಮದ ನಾನು ರೈತನ ಮಗನಾಗಿ ಇತರ ರೈತರ ಒಳಿತಿಗಾಗಿ ಪ್ರಧಾನಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಅಂತ ರವಿ ಗೌಡ ಹೇಳಿದ್ದಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ