ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲುಕಿನ ಒಂದು ಕುಗ್ರಾಮ, ಮಲ್ಲದ ಗುಡ್ಡ ಗ್ರಾಮದ ಒಂದು ಸಣ್ಣ ರೈತ ಕುಟುಂಬದಲ್ಲಿ ಜನಿಸಿದ ಹುಡುಗ ರವಿ ಗೌಡ. ಇವರ ತಂದೆ ವೀರ ಭದ್ರಗೌಡ ಜೀವನಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
ಹಳ್ಳಿ ಯುವಕ ರವಿ ಗೌಡರವರು ಸಣ್ಣ ರೈತ ಕುಟುಂಬದಲ್ಲಿ ಜನಿಸಿದ್ದರೂ, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಹಂಬಲದಿಂದ, ಏನು ಮಾಡಬೇಕೆಂದು ಯೋಚಿಸುತ್ತಿದ್ದರು. ಇಂತಹ ಸಮಯದಲ್ಲಿ, ರವಿ ಗೌಡರ ಮಾವನವರಾದ ಚನ್ನನ ಗೌಡರವರು ಸಾಂಪ್ರದಾಯಿಕ ಪದ್ದತಿಯಲ್ಲಿ ಸಂಗ್ರಾಣಿ ಕಲ್ಲು ಎತ್ತುವುದನ್ನು ಅದೇ ಊರಿನ ಗರಡಿ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.
ಇದನ್ನು ಗಮನಿಸಿದ ರವಿಗೌಡ ತಾವು ಇದರಲ್ಲಿ ಏಕೆ ಸಾಧನೆ ಮಾಡಬಾರದೆಂದು ಯೋಚಿಸಿ, ಅಂದಿನಿಂದ ಅಂದರೆ ಅವರು 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗಲೇ ಸಂಗ್ರಾಣಿ ಕಲ್ಲು ಎತ್ತುವ ಅಭ್ಯಾಸ ಶುರು ಮಾಡಿದ್ದಾರೆ. ಇದಕ್ಕೆ ಅವರ ಮಾವನವರು ಮತ್ತು ಸ್ನೇಹಿತರು ಹಾಗೂ ಗರಡಿ ಮನೆಯವರು ಪ್ರೋತ್ಸಾಹ ಕೊಟ್ಟಿದ್ದಾರೆ.
ಇದರಿಂದ ಹೆಚ್ಚು ಪ್ರೆರಿಪಿತಗೊಂಡ ರವಿಗೌಡ ತಾವು 9ನೇ ತರಗತಿಯಲ್ಲಿದ್ದಾಗ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾಗಿ ವಿಜಯಿಯಾಗಿದ್ದಾರೆ.
ಇವರು ತಮ್ಮ 19 ನೇ ವಯಸ್ಸಿಗೆ ಕರ್ನಾಟಕದ ಎಲ್ಲಾ ಜಿಲ್ಲೆ ಹಾಗೂ ಎಲ್ಲಾ ಊರಿನ ಜಾತ್ರೆ ಮತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.
ಕಲ್ಲು ಎತ್ತುವ ಸ್ಪರ್ಧೆ ಇಟ್ಟಾಗ ಘಟಾನು ಘಟಿಘಳ ಜೊತೆ ಭಾಗವಹಿಸಿ ಅವರಿಗೆ ಪೈ ಪೋಟಿ ಕೊಟ್ಟು ಪ್ರಥಮ ಸ್ಥಾನ ದ್ವೀತಿಯ ಸ್ಥಾನ ಹಾಗೂ ತೃತೀಯ ಸ್ಥಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಆದ್ರೆ ಈ ಹಳ್ಳಿ ಹುಡುಗ ತಮ್ಮ ಸಾಧನೆಯ ಹಾದಿಯಲ್ಲಿದ್ದಾಗ, ದುರಾದ್ರಷ್ಟವಶಾತ್ ಅವರ ತಲೆಗೆ ಅಗಾಧವಾದ ಪೆಟ್ಟು ತಾಗಿ, ವೈದ್ಯರು ಇನ್ನೂ 4 ವರ್ಷಗಳ ಕಾಲ, ನೀನು ಈ ಕಲ್ಲನ್ನು ಎತ್ತುವುದು ಬೇಡ ಎಂದು ಸಲಹೆ ಕೊಟ್ಟಿದ್ದಾರೆ.
ಇದರಿಂದ ಬಹಳ ನಿರಾಶೆ ಅನುಭವಿಸಿದ್ದಾರೆ ಯುವಕ ರವಿಗೌಡ. ಆದ್ರೆ ತಮ್ಮ ಚಿಕ್ಕ ವಯಸ್ಸಿನಲ್ಲೇ ಬಹಳ ದೊಡ್ಡ ಸಾಧನೆ ಮಾಡಿದ ಈ ಯುವಕನ ಹೆಸರು ಜನರ ಮನಸ್ಸಿನಲ್ಲಿ ಮಾಸದೆ ಇನ್ನು ಉಳಿದಿದ್ದು, ಇವರನ್ನು ಜನ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಯುವಕ ಎಂದು ಈಗಲೂ ಹೊಗಳುತ್ತಿದ್ದಾರೆ.
ಇವರ ಸಾಧನೆಯನ್ನು ಅರಸಿ ಬೆಳ್ಳಿ ಕಡಗ ಸೇರಿದಂತೆ ಹಲವಾರು ಪ್ರಶಸ್ತಿ ಪದಕಗಳು ಇವರಿಗೆ ಬಂದಿವೆ. ಹಲವು ಕಾರ್ಯಕ್ರಮಗಳಲ್ಲಿ ಇವರ ಸಾಧನೆಯನ್ನು ಮೆಚ್ಚಿ ಸನ್ಮಾನಿಸಲಾಗಿದೆ.
ಇಂತಹ ಸಾಧನೆಯನ್ನು ಮಾಡಿರುವ ಈ ಯುವಕ ಈಗ ಮತ್ತೆ ಸಂಗ್ರಾಣಿ ಕಲ್ಲು ಎತ್ತುವುದನ್ನು ಶುರು ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಇಂತಹ ಹಳ್ಳಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಟ್ಟು ಅವರಿಗೆ ಅವರ ಸಾಧನೆಯಲ್ಲಿ ಮುಂದುವರೆಯಲು ಸಹಾಯ ಮಾಡಿ ಎಂದು ಹಳ್ಳಿ ಹುಡುಗರ ತಂಡವು ಕೇಳಿಕೊಳ್ಳುತ್ತದೆ.
ಹಳ್ಳಿ ಹುಡುಗರ ತಂಡವು ನಿಮ್ಮಲ್ಲಿ ವಿನಂತಿಸಿಕೊಲ್ಲುವುದೆನೆಂದರೆ, ನಿಮ್ಮ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ, ಜಾತ್ರೆಗಳಲ್ಲಿ ಇವರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಮಾಡಿಕೊಟ್ಟು ಇಂತಹ ಹಳ್ಳಿ ಯುವಕರನ್ನು ಬೆಳೆಸಿ ಪ್ರೋತ್ಸಾಹಿಸಿ.
ಇದರಿಂದ ನಮ್ಮ ಹಳ್ಳಿ ಸಾಂಪ್ರದಾಯಿಕ ಆಟಗಳು ಮುಂದಿನ ಪೀಳಿಗೆಗೆ ಉಳಿಯುವುದಲ್ಲದೆ ಬೇರೆ ಇಂತಹ ಹಳ್ಳಿ ಪ್ರತಿಭೆಗಳು ಮುಂದೆ ಬರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಈ ಪ್ರತಿಭಾವಂತ ಹಳ್ಳಿ ಯುವಕ ರವಿ ಗೌಡ ಯಾರೂ ಗೊತ್ತಾ?
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಬುಧವಾರ, 14/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಟೈಗರ್ ಪ್ರಭಾಕರ್, ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋನಟರಿಗೆ ಆದರ್ಶ, ಚಿತ್ರರಂಗದಲ್ಲಿ ಘರ್ಜಿಸಿದ ನಟ, ಆದರೆ ಪ್ರಭಾಕರ್ ಅವರ ಕೊನೆಯ ದಿನಗಳು ಜನರು ಊಹಿಸಿದಷ್ಟು ಸುಂದರವಾಗಿರಲಿಲ್ಲ, ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಕಾಸು ಖಾಲಿ ಆಗಿತ್ತು. 25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ಬಹು ಅಂಗಾಂಗ ವೈಪಲ್ಯದಿಂದ ಇಹಲೋಕ ತ್ಯಜಿಸಿದರು, ಈ ಸುದ್ದಿ ಕೇಳಿ ಕಣ್ಣೀರು ಹಾಕಿದ ಲಕ್ಷಾಂತರ ಅಭಿಮಾನಿಗಳು, ಕೊನೆಯದಾಗಿ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆಯಲು…
ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ…
Cuba is a small country that is located in the Caribbean Sea that is a part of the North American continent. It is an island country that consists of numerous archipelagos.
ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.
ಕಿರುಗೋಣಿಸೊಪ್ಪು ಎಂದು ಕರೆಯಲ್ಪಡುವ ಈ ಸಸ್ಯ ಬೆಳೆಯದಿರುವ ಜಾಗವೇ ಇಲ್ಲ. ಶೇಕಡ 65 % ನೀರನ್ನು ಹಿಡಿದಿಟ್ಟು ಕೊಳ್ಳುವ ಹಾಗೂ ಒಮ್ಮೆಲೇ ಸುಮಾರು 3 ಲಕ್ಷ ಬೀಜ ಪ್ರಸರಣ ಸಾಮರ್ಥ್ಯ ಇರುವ ಸಸ್ಯ ಎಂತಹಾ ಬರದಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸೇವಿಸುವವರ ಬದುಕನ್ನೂ ಹಸನು ಮಾಡುವ ಗುಣಗಳಿವೆ. Purslane ಎಂದು ವಿಶ್ವದಾದ್ಯಂತ ಸಾಮಾನ್ಯವಾಗಿ ಕರೆಯಲ್ಪಡುವ Portulacaceae ಕುಟುಂಬದ ಇದರ ಸಸ್ಯ ಶಾಸ್ತ್ರೀಯ ಹೆಸರು Portulaca oleracea. ಮುಲತಃ ಉತ್ತರ ಅಮೆರಿಕಾದ ಸಸ್ಯ. ಗೋಣಿಸೊಪ್ಪು ಅತ್ಯಾದಿಕವಾದ ವಿಟಮಿನ್…