ಸುದ್ದಿ

ಮೊಬೈಲ್ ನಂಬರ್ ಬದಲಿಸುವ ಮುನ್ನ ಹೆಚ್ಚರ!..ಈ ಸುದ್ದಿ ತಿಳಿದರೆ ನಡುಕ ಹುಟ್ಟಿಸುತ್ತಿದೆ!

74

ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ.

ಹೌದು, ಅಶ್ರಫ್ ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕುಶಾಲನಗದ ಬ್ಯಾಂಕ್ ಒಂದರ ಖಾತೆಗೆ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದರು. ಇದಾದ ಕೆಲದಿನಗಳ ನಂತರ ಆ ಮೊಬೈಲ್ ನಂಬರ್ ಅನ್ನು ಬಳಸದೇ ಬಿಟ್ಟು, ಬೇರೊಂದು ಮೊಬೈಲ್ ನಂಬರ್ ಹೊಂದಿರುವ ಸಿಮ್ ಬಳಸಲು ಶುರು ಮಾಡಿದರು. ಹೀಗೆ ಮಾಡಿದಾಗ ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಮತ್ತೋರ್ವರಿಗೆ ನೀಡಿ ಟೆಲಿಕಾಂ ಸೇವಾ ಸಂಸ್ಥೆ ಕೈತೊಳೆದುಕೊಂಡಿದೆ. ಇದಾದ ನಂತರ ಅಶ್ರಫ್ ಅವರಿಗೆ ಸಮಸ್ಯೆಗಳು ಶುರುವಾಗಿವೆ. ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಟೆಲಿಕಾಂ ಕಂಪೆನಿಯು ದಾವಣಗೆರೆಯ ಭರತ್ ಎಂಬ ಮತ್ತೋರ್ವ ವ್ಯಕ್ತಿಗೆ ನೀಡಿದೆ.

ಈ ನಂಬರ್ ಅನ್ನು ಪಡೆದುಕೊಂಡಿರುವ ಭರತ್‌ ಹೊಸ ಸಿಮ್ ಹಾಕಿಕೊಂಡಾಗ ಆಶ್ರಫ್ ಬ್ಯಾಂಕಿಂಗ್ ಸಂದೇಶಗಳು ಮೊಬೈಲ್​ಗೆ ಬರುತ್ತಿದ್ದವು. ಇದನ್ನು ಬಳಸಿಕೊಂಡ ಭರತ್, ನಂತರ ಮೊಬೈಲ್​ಗೆ ಪೇಟಿಎಂ ವ್ಯಾಲೆಟ್ ಆಕ್ಟಿವ್ ಮಾಡಿಕೊಂಡಿದ್ದ. ಆಶ್ರಫ್ ಬ್ಯಾಂಕ್ ಖಾತೆ ದಕ್ಕೆ ಸಿಂಕ್ ಆಗಿತ್ತು. ಬಳಿಕ ಭರತ್ ಪೇಟಿಎಂ ವ್ಯಾಲೆಟ್​ನಿಂದ ತನ್ನ ಬ್ಯಾಂಕ್ ಖಾತೆಗೆ 4 ದಿನಗಳಲ್ಲಿ 79,994 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದ.

ಇದರಿಂದ ಗಾಬರಿಗೊಂಡ ಆಶ್ರಫ್ ಅವರು ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್ ಆಧಾರದ ಮೇಲೆ ಭರತ್​ನನ್ನು ಬಂಧಿಸಿದ್ದಾರೆ. ಆದರೆ, ಎಲ್ಲ ಪ್ರಕರಣದಲ್ಲೂ ಆರೋಪಿ ಹೀಗೆ ಸಿಕ್ಕಿಕೊಳ್ಳುವುದು ಕಷ್ಟವೇ ಸರಿ. ಹಾಗಾಗಿ, ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲಾ ಖಾತೆಗಳ ಬಗ್ಗೆ ಎಚ್ಚರ ವಹಿಸಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲ ಸಂಪರ್ಕವನ್ನು ಕಡಿತ ಮಾಡಿ ಬಳಿಕವೇ ಹೊಸ ಗ್ರಾಹಕನಿಗೆ ಮಾರಾಟ ಮಾಡಬೇಕು ಎಂಬ ಕಾನೂನನ್ನು ತರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಲಿಂಕ್ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಇನ್ನಿತರ ಬ್ಯಾಂಕಿಂಗ್ ಸೇವೆಗೆ ಮೊಬೈಲ್ ನಂಬರ್ ಕಡ್ಡಾಯ.ಈ ಸೇವೆಗಳನ್ನು ಪಡೆಯುವಾಗ ಮೊಬೈಲ್​ಗೆ ಬರುವ ಒನ್ ಟೈಮ್ ಪಾಸ್​ವರ್ಡ್(ಒಟಿಪಿ) ಅತಿ ಮುಖ್ಯವಾಗಿರುತ್ತವೆ. ಇದರ ಮೇಲೆ ನೀವು ನಿಗಾ ವಹಿಸದೆ ಇದ್ದರೆ ಬ್ಯಾಂಕ್ ಖಾತೆ ಖಾಲಿ ಆಗಲಿದೆ. ಹಾಗಾಗಿ, ನೀವು ಎಚ್ಚರ.!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೆಬ್ಬಾವು ಕಚ್ಚಿ ಸತ್ತ ಮಹಿಳೆ ; ಸಾವಿನ ಬಳಿಕ ಮಹಿಳೆ ಮನೆಯಲ್ಲಿ 140 ಹಾವು ಪತ್ತೆ..!ಯಾಕೆ ಗೊತ್ತ?

    ಹೆಬ್ಬಾವು ಸುತ್ತಿ, ಉಸಿರುಗಟ್ಟಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಅವರ ಮನೆಯಲ್ಲಿ 140 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಮೆರಿಕದ ಇಂಡಿಯಾನಾ ಎಂಬಲ್ಲಿ 36 ವರ್ಷ ವಯಸ್ಸಿನ ಲಾರಾ ಹರ್ಸ್ಟ್ ಎಂಬ ಮಹಿಳೆಯ ದೇಹವನ್ನುಹೆಬ್ಬಾವು ಸುತ್ತಿಕೊಂಡಿತ್ತು. ಅವರು ಅದರಿಂದ ತಪ್ಪಿಸಿಕೊಳ್ಳಲುಎಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ.ಹಾಗೇ ಉಸಿರುಗಟ್ಟಿ ಅವರು ಅಸುನೀಗಿದ್ದರು. ಈ ಸಂದರ್ಭದಲ್ಲಿ ಮಹಿಳೆಯಿದ್ದ ಮನೆಯಲ್ಲಿ 140 ಹಾವಿದ್ದಿದ್ದು ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಡಾನ್ ಮುನ್ಸನ್ ಎಂಬುವವರು ಸಾಕಿದ್ದರು. ಅವರ ಬಳಿ ಲಾರಾ ಅವರು ಇಪ್ಪತ್ತಕ್ಕೂ ಹೆಚ್ಚು ಹಾವುಗಳನ್ನು ಸಾಕಲು…

  • corona, Health

    2022 ಕೋವಿಡ್ ಮುಕ್ತ ರಾಜ್ಯ:-ಮುಖ್ಯಮಂತ್ರಿ

    ರಾಜ್ಯದಲ್ಲಿ ಎಲ್ಲ  ಸಾರ್ವಜನಿಕರು ಮತ್ತು ಅರ್ಹ ಮಕ್ಕಳು ಕರೋನ ಲಸಿಕೆ ಪಡೆಯುವ ಮೂಲಕ 2022 ಅನ್ನು ಕೋವಿಡ್ ಮುಕ್ತ ರಾಜ್ಯ ಮತ್ತು ಆರೋಗ್ಯಭರಿತ ವರ್ಷವನ್ನಾಗಿ ಮಾಡುವ ಸಂಕಲ್ಪಕ್ಕೆ ಜನರು ಸಹಕರಿಸಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರೋನ ಸೋಂಕು ನಾವು ಯಾರು ನೀರಿಕ್ಷೀಸಿದಂತೆ ಇರುವುದಿಲ್ಲ.ಮೊದಲು ಕಾಣಿಸಿಕೊಂಡಾಗ ಹೇಗೆ ಹರಡುತ್ತದೆ, ಉಲ್ಬಣಗೊಳ್ಳುತ್ತದೆ,ಸೋಂಕಿತರಿಗೆ ಚಿಕಿತ್ಸೆ ಬಗ್ಗೆ ಗೊತ್ತಿರಲಿಲ್ಲ.ಇಂತಹ ವೇಳೆಯಲ್ಲಿಯೇ ಯಶಸ್ವಿಯಾಗಿ ನಿಯಂತ್ರಣ ಕಾರ್ಯ ನಿಭಾಯಿಸಿದ್ದೇವೆ.ಈ ಹಿಂದಿನ ಅನುಭವದಿಂದ ಸೋಂಕು ನಿಯಂತ್ರಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಳೆದೊಂದು ವಾರದಿಂದ…

    Loading

  • ಆರೋಗ್ಯ, ಉಪಯುಕ್ತ ಮಾಹಿತಿ, ಜೀವನಶೈಲಿ

    ನಿಂತ್ಕೊಂಡು ನೀರು ಕುಡಿದ್ರೆ, ಏನಾಗುತ್ತೆ ಗೊತ್ತಾ??? ಮುಂದೆ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ನಿಂತ್ಕೊಂಡು ನೀರು ಕುಡಿತೀರಾ, ಹಾಗಾದರೆ ಇಲ್ನೋಡಿ ವಿಜ್ಞಾನಿಗಳು ಹೇಳಿರೋ ಪ್ರಕಾರ , ಈ ಕಾರಣಗಳ್ನ ಓದಿದ್ರೆ ಶಾಕ್ ಆಗೋದು ಖಂಡಿತ. ಓದಿ ನೋಡಿ. ಎಷ್ಟು ನೀರು ಕುಡಿದ್ರೂ ಇನ್ನೂ ಕುಡೀತಾನೇ ಇರ್ಬೇಕು ಅನ್ಸುತ್ತೆ :- ನಿಂತು ನೀರು ಕುಡಿದ್ರೆ ಬಾಯಾರಿಕೆ ಹೋಗೋದಿಲ್ಲ. ಆಗಾಗ ನೀರು ಕುಡೀತಾನೇ ಇರ್ಬೇಕು ಅನ್ಸುತ್ತೆ. ಎಷ್ಟು ಕುಡಿದ್ರೂ ಉಪಯೋಗ ಇಲ್ಲ. ಅಜೀರ್ಣ ಆಗುತ್ತೆ :- ಕೂತು ನೀರು ಕುಡೀವಾಗ ನಿಮ್ ದೇಹ ರಿಲ್ಯಾಕ್ಸ್ ಆಗಿರುತ್ತೆ, ಆಗ ತಿಂದಿದ್ದು, ಕುಡ್ದಿದ್ದು ಸುಲಭವಾಗಿ ಜೀರ್ಣ ಆಗುತ್ತೆ….

  • ಜ್ಯೋತಿಷ್ಯ

    ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಮೇಷ ರಾಶಿಒಳ್ಳೆಯ…

  • ಸುದ್ದಿ

    ಚಾಕುವಿನಿಂದ ಇರಿದು ಕ್ರಿಕೆಟಿಗನ ಬರ್ಬರ ಹತ್ಯೆ…ಕಾರಣ?

    ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಕ್ರಿಕೆಟಿಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕ್ರಿಕೆಟಿಗನನ್ನು ರಾಕೇಶ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ರಾಕೇಶ್‍ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ರಾಕೇಶ್‍ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ…