ಸೌಂದರ್ಯ

ಮೊಡವೆಗಳಿಂದ ಬೇಜಾರಾಗಿದ್ರೆ ಇಲ್ಲಿದೆ ಸಿಂಪಲ್ ಮನೆಮದ್ದು……

2357

ನಮ್ಮಲ್ಲಿ ಅನೇಕರಿಗೆ ಆಹಾರ ಕ್ರಮಗಳಿಂದಾಗಿ, ಮೊಡವೆಗಳು ಬಂದು, ಅವು ನಮ್ಮ ಚರ್ಮದ ಮೇಲೆ ಕಲೆಯಾಗಿ ಕಾಡುತ್ತದೆ. ಇದನ್ನು ಹೋಗಲಾಡಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಾರೆ.

ಆದರೆ ಈ ಮೊಡವೆಗಳಿಗೆ ಮನೆಯಲ್ಲಿಯೇ ತಯಾರಿಸಬಹುದಾದ ಅನೇಕ ಮನೆಮದ್ದುಗಳು ಇವೆ. ಅಂತಹ ಕೆಲವೊಂದು ಮನೆಮದ್ದುಗಳು ವಿವರಣೆ ನೀಡಲಾಗಿದೆ.

  • ಕಡಲೆ ಇಟ್ಟು ಹಾಗೂ ಮುಲ್ತಾನಿ ಹಣ್ಣನ್ನು ಸೇರಿಸಿ ಮೊಡವೆ ಇರುವ ಭಾಗಕ್ಕೆ ಹಚ್ಚುವುದರಿಂದ ಮುಕದ ಮೇಲಿನ ಎಣ್ಣೆ ಅಂಶವನ್ನು ಅದು ಹೀರಿಕೊಳ್ಳುತ್ತದೆ. ಇದರಿಂದ ರಂಧ್ರಗಳು ತೆರೆದುಕೊಂಡು ಮೊಡವೆಗಳು ಕಡಿಮೆ ಆಗುತ್ತವೆ.

  • ಆಲೋವೇರಾ ಹಲವು ಪೋಷಕಾಂಶಗಳಿಂದ ಕೂಡಿದ್ದು ಟಾಕ್ಸಿನ್ ಗಳನ್ನು ತೆಗೆದು ಹಾಕಿ ಸಾಮಾನ್ಯ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮೊಡವೆಗಳು ಕಡಿಮೆ ಆಗುತ್ತದೆ.

 

  • ಟೊಮ್ಯಾಟೋ ಹಣ್ಣು ಮಿಟಮಿನ್ ಎ ಹೊಂದಿದ್ದು ಚರ್ಮದ ಪೋಷಣೆಗೆ ಸಹಕಾರಿ. ತಾಜಾ ಟೊಮ್ಯಾಟೋ ತಿರುಳನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನಂತರ ತೊಳೆಯುವುದರಿಂದ ಮೊಡವೆ ಕಡಿಮೆ ಆಗುತ್ತದೆ.
  • ಬಿಸಿ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ವಿಧಾನ.

  • ನಿಂಬೆರಸವನ್ನು ಹಚ್ಚುವುದರಿಂದ ಮೊಡವೆ ಕಡಿಮೆ ಆಗುತ್ತದೆ. ಉರಿಯುತ್ತಿದ್ದಲ್ಲಿ ಮೊಸರು ಸೇರಿಸಿ ಹಚ್ಚಬಹುದು.

  • ಬೆಳ್ಳುಳ್ಳಿಯನ್ನು ಜಜ್ಜಿ ಅಥವಾ ಬೆಳ್ಳುಳ್ಳಿಯ ರಸ ತೆಗೆದು ಅದಕ್ಕೆ ಒಂದು ಚಮಚ ನಿರು ಸೇರಿಸಿ ಅಥವಾ ಆಲೋವೇರಾದ ತಿರುಳು ಸೇರಿಸಿ ಹಚ್ಚಬಹುದು. ಇದರಿಂದ ಮೊಡವೆ ಕಡಿಮೆಯಾಗುತ್ತದೆ.

  • ಪುದಿನಾವನ್ನು ಸೇರಿಸಿದ ನೀರಿನಿಂದ ಮುಖ ತೊಳೆದುಕೊಳ್ಳುವುದುರಿಂದ ಮೊಡವೆ ಕಡಿಮೆಯಾಗುವುದು.
  • ಆಲೂಗಡ್ಡೆಯು ಆ್ಯಂಟಿ-ಆಕ್ಸಿಡೆಂಟ್ ಗಳ ಆಗರವಾಗಿದೆ. ಇದು ಚರ್ಮದ ಆರೋಗ್ಯಕ್ಕೆ ಬಹಳ ಸಹಕಾರಿ. ಚರ್ಮದ ಕೋಶಗಳು ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ. ಒಂದು ಹಾಲೂಗಡ್ಡೆಯನ್ನು ಕತ್ತರಿಸಿ ಅದರ ತಿರುಳನ್ನು ಅರೆದು ಮುಖಕ್ಕೆ ಹಚ್ಚಬೇಕು. ವೃತ್ತಾಕಾರದಲ್ಲಿ ಸ್ವಲ್ಪ ಸಮಯ ಮಸಾಜ್ ಮಾಡಬೇಕು. 15-30 ನಿಮಿಷ ಬಿಟ್ಟು ಸ್ವಲ್ಪ ಬಿಸಿ ನೀರಿನಲ್ಲಿ ತೊಳೆಯಬೇಕು.

  • ಶ್ರೀಗಂಧದ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಸಮಾನ ಪಿಎಚ್ ಲೆವೆಲ್ ನ್ನು ಕಾಯ್ದುಕೊಂಡು ಚರ್ಮವು ಸ್ವಸ್ಥವಾಗಿರುತ್ತದೆ.

  • ಜೇನುತುಪ್ಪವು ಮೊಡವೆ ನಿವಾರಣೆಗೆ ಬಹಳ ಸಹಾಯಕಾರಿ. ಅಂತೆಯೇ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.
  • ಮಾನಸಿಕ ಒತ್ತಡವು ಮೊಡವೆಗೆ ಕಾರಣವಾಗಬಲ್ಲದು. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳಿ.
  • ಧೂಳು, ಸ್ವಚ್ಚತೆ ಇಲ್ಲದಿರುವುದು ಮೊಡವೆಗೆ ದಾರಿಮಾಡಿಕೊಡಬಲ್ಲದು.
  • ಗಡುಸಾದ ಸೋಪು ರಾಸಾಯನಿಕಗಳು ಮೊಡವೆಯನ್ನಂಟುಮಾಡಬಲ್ಲದು.
  • ಪದೇಪದೆ ದಿಂಬಿನ ಹೊದಿಕೆಯನ್ನು ತೊಳೆದು ಉಪಯೋಗಿಸುವುದು ಒಳಿತು.
  • ಮೊಡವೆಗಳನ್ನು ಮತ್ತೆ ಮತ್ತೆ ಕೈಯಿಂದ ಮುಟ್ಟಿಕೊಳ್ಳಬಾರದು.
  • ಪದೇ ಪದೇ ಮುಖ ತೊಳೆಯವುದರಿಂದ ಮುಖವು ಪೂರ್ಣವಾಗಿ ಶುಷ್ಕವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಹಳ ಜಾಗರೂಕತೆಯಿಂದ ಚರ್ಮವನ್ನು ನಿಭಾಯಿಸಬೇಕು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ