ರೆಸಿಪಿ

ಮೈಸೂರು ಶೈಲಿಯಲ್ಲಿ ಬಿಸಿ ಬಿಸಿ ‘ಚಿಲ್ಲಿ ಚಿಕನ್’ ಮಾಡಿ…

356

ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …

ಸಾಮಗ್ರಿಗಳು

ಚಿಕನ್‌ – 1 k.g

ಎಣ್ಣೆ – 1 ಕಪ್‌‌‌

ಕೊತ್ತಂಬರಿ ಸೊಪ್ಪು – 2 ಕಟ್ಟು

ಈರುಳ್ಳಿ – 4

ಏಲಕ್ಕಿ – 6

ಬಿರ್ಯಾನಿ ಎಲೆ – 6

ಲವಂಗ – 6

ಗೋಡಂಬಿ – 10

ತೆಂಗಿನ ಕಾಯಿ ಪೇಸ್ಟ್‌ – 1ಕಪ್

ಹಸಿಮೆಣಸಿನ ಕಾಯಿ – 5

ಮೊಸರು – 1/2 ಕಪ್‌‌‌

ಸೋಂಪು – 1 ಸ್ಪೂನ್

ಗಸಗಸೆ – 2 ಸ್ಪೂನ್.

ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ – 2 ಸ್ಪೂನ್.

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ – 1 ಸ್ಪೂನ್.

ಮಾಡುವ ವಿಧಾನ

*ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ಕೋಳಿ ಮಾಂಸವನ್ನು 15 ನಿಮಿಷ ಉರಿದು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ.

*ಜಾರ್‌ಗೆ ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ ತುರಿ, ಗೋಡಂಬಿ, ಗಸಗಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ.

*ಮತ್ತೊಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಏಲಕ್ಕಿ, ಲವಂಗ , ಸೋಂಪು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.

*ನಂತರ ರುಬ್ಬಿಕೊಂಡ ತೆಂಗಿನಕಾಯಿ, ಗೋಡಂಬಿ ಮಿಶ್ರಣ, ಮೊಸರು ಹಾಕಿ 5 ನಿಮಿಷ ಬೇಯಿಸಿ.

*ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಉರಿದಿಟ್ಟುಕೊಂಡ ಚಿಕನ್‌ , ಅರಿಶಿನ, ಹಾಕಿ ಬೆರೆಸಿ 15 ನಿಮಿಷ ಬೇಯಿಸಿದರೆ ಬಾಯಲ್ಲಿ ನೀರೂರಿಸುವ ಮೈಸೂರು ಚಿಲ್ಲಿ ಚಿಕನ್ ರೆಡಿ.

ಇದನ್ನು ನೀವು ಅನ್ನ, ರೊಟ್ಟಿ, ದೋಸೆ , ಚಪಾತಿಯೊಂದಿಗೆ ತಿನ್ನಬಹುದು. ಇನ್ನು ಬಹಳಷ್ಟು ಮಂದಿ ಚಿಕನ್‌ ಅನ್ನು ಫ್ರೈ ಮಾಡುವುದಿಲ್ಲ. ಹೀಗೆ ಬಳಸಿದರೆ ಹಸಿ ವಾಸನೆ ಹೋಗುವುದಿಲ್ಲ. ಆದ್ದರಿಂದ ಯಾವುದೇ ಚಿಕನ್, ಮಟನ್ ಡಿಶ್‌ ಮಾಡುವ ಮುನ್ನ ಎಣ್ಣೆಯಲ್ಲಿ 15 ನಿಮಿಷ ಉರಿದುಕೊಂಡರೆ ಮತ್ತಷ್ಟು ರುಚಿ ಹೆಚ್ಚುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಶ್ರೀ ಲಲಿತಾಸಹಸ್ರನಾಮ ಸ್ತೋತ್ರಂ ಅರ್ಥ

    ಪಂಡಿತ್ ರಾಘವೇಂದ್ರ ಸ್ವಾಮಿಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ…

  • ಸಂಬಂಧ

    ಮಗು ಹುಟ್ಟಿದ ತಕ್ಷಣ ತಕ್ಷಣ ಗಂಟಲು ಕಿತ್ತುಹೋಗುವಂತೆ ಅಳುವುದು ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳು ಲಯಬದ್ಧವಾಗಿ ತಾಯಿಯ ಹೃದಯದ ಬಡಿತವನ್ನು ಕೇಳುತ್ತಾ, ಅದರಲ್ಲೇ ತನ್ಮಯವಾಗಿರುತ್ತದೆ. ತಾಯಿಯ ಎದೆಬಡಿತದ ಶಬ್ಧ ತನಗೆ ರಕ್ಷಣೆ ಎಂದೇ ಮಗು ಭಾವಿಸಿರುತ್ತದೆ.

  • ವಿಸ್ಮಯ ಜಗತ್ತು

    ನೀವೂ ನಂಬಲೇಬೇಕು..ಇಲ್ಲಿ ಜನ ಪ್ರತೀದಿನ ಸ್ನಾನ ಮಾಡೋದು ಗೋವಿನ ಮೂತ್ರದಲ್ಲಿ!

    ನಮ್ಮ ದೇಶದಲ್ಲಿ ಆಕಳ ಸಗಣಿ ಹಾಗೂ ಗೋಮೂತ್ರವನ್ನು ಹಬ್ಬಗಳಲ್ಲಿ ಬಳಕೆ ಮಾಡ್ತೇವೆ. ಮನೆಯನ್ನು ಗೋಮೂತ್ರ ಹಾಗೂ ಸಗಣಿಯಿಂದ ಶುದ್ಧಮಾಡುವ ಪದ್ಧತಿ ಇದೆ. ಆದ್ರೆ ಆ ಬುಡಕಟ್ಟು ಜನಾಂಗದವರು  ಗೋಮೂತ್ರದಿಂದ ಸ್ನಾನ ಮಾಡ್ತಾರೆ. ಅಷ್ಟೇ ಅಲ್ಲ ರೋಗದಿಂದ ರಕ್ಷಣೆ ಪಡೆಯಲು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ತಾರೆ. ನಾವು ಈಗ ಹೇಳ್ತಾ ಇರೋದು ಆಫ್ರಿಕಾದ ದಕ್ಷಿಣ ಸುಡಾನ್ ನ ಮುಂದರಿ ಬಡುಕಟ್ಟು ಜನಾಂಗದ ಸಂಸ್ಕೃತಿಯ ಬಗ್ಗೆ. ಈ ಜನರು ಬೆಳಿಗ್ಗೆ ಎದ್ದ ತಕ್ಷಣ ಗೋಮೂತ್ರದಲ್ಲಿ ಸ್ನಾನ ಮಾಡ್ತಾರೆ. ಇವರ ಜೀವನ ಶೈಲಿ…

  • ರಾಜಕೀಯ

    ಆತಂಕದ ಭೀತಿಯಲ್ಲಿ ಜೆಡಿಎಸ್ ನ ಬಂಡಾಯ ಶಾಸಕರು..!ಅಸಲಿಗೆ ಆಗಿದ್ದೇನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಇಷ್ಟ ಆದ್ರೆ ಶೇರ್ ಮಾಡಿ…

    ಜೆಡಿಎಸ್ ನ ಶಾಸಕರಾಗಿದ್ದ ಚಲುವರಾಯಸ್ವಾಮಿ, ಎಚ್‌.ಸಿ.ಬಾಲಕೃಷ್ಣ, ಜಮೀರ್‌ ಅಹ್ಮದ್‌ ಖಾನ್‌, ರಮೇಶ್‌ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್‌ ಅನ್ಸಾರಿ ಮತ್ತು ಭೀಮಾ ನಾಯ್ಕ್‌ ಪಕ್ಷದಲ್ಲಿಯೇ ಸಂಚಲನ ಸೃಷ್ಟಿಸುವುದರ ಮೂಲಕ ಪಕ್ಷದ ದೋರಣೆಗೆ ಗುರಿಯಾಗಿದ್ದರು. ಅಡ್ಡಮತದಾನ ಮಾಡಿರುವ ಏಳು ಮಂದಿ ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಂತೆ ಅದೇಶಿಸುವಂತೆ ಕೋರಿ ಜೆಡಿಎಸ್​ನ ಶ್ರವಣಬೆಳಗೊಳದ ಶಾಸಕ ಸಿ.ಎನ್​. ಬಾಲಕೃಷ್ಣ, ಮೂಡಿಗೆರೆಯ ಬಿ.ವಿ ನಿಂಗಯ್ಯ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಕಳೆದ 2016ರಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ…

  • ಉಪಯುಕ್ತ ಮಾಹಿತಿ

    ರಾವಣ ಸಾಯೋಕೆ ಮುಂಚೆ ಲಕ್ಶ್ಮಣನಿಗೆ ಕಲಿಯುಗದ ಬಗ್ಗೆ ಹೇಳಿದ ಘೋರ ಸತ್ಯ. ಏನದು ಗೊತ್ತಾ?

    ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನಿಂದ ಅಮೂಲ್ಯವಾದ ಪಾಠಗಳನ್ನು ಕಲಿತು ಕೊಂಡು ಬಾ ಎಂದು ಹೇಳಿದ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ರಾವಣ ಸಾಯುವ ಮುನ್ನ ಲಕ್ಷ್ಮಣನಿಗೆ  ರಾವಣ ಯೋಧ ಮಾತ್ರವಲ್ಲ, ಸರ್ವೋಚ್ಚ ವಿದ್ವಾಂಸನು ಆಗಿದ್ದ ಬ್ರಾಹ್ಮಣ ಕುಲದಲ್ಲಿ ಜನಿಸಿದ…

  • ವಿಸ್ಮಯ ಜಗತ್ತು

    ಈ ಬೆಕ್ಕು ಮಗುವನ್ನು ಪ್ರಾಣಪಾಯದಿಂದ ಕಾಪಾಡಿದೆ!ಹೇಗೆ ಅಂತೀರಾ?ಈ ಲೇಖನಿ ಓದಿ…

    ಸಾಕುಪ್ರಾಣಿಗಳು ತಮ್ಮ ಯಜಮಾನನ ಮತ್ತು ಅವರ ಮನೆಯವರನ್ನು ತಮ್ಮ ಪ್ರಾಣ ಒತ್ತೆ ಇಟ್ಟು ರಕ್ಷಣೆ ಮಾಡಿದ ಎಸ್ಟೋ ವಿಚಾರಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಯೇ ಇಲ್ಲೊಂದು ಬೆಕ್ಕು ಮಗುವನ್ನು ರಕ್ಷಣೆ ಮಾಡಿ ಗಮನಸೆಳೆದಿದೆ.