ಸುದ್ದಿ

150 ವರ್ಷ ಬದುಕಬೇಕೆಂಬ ಮೈಕಲ್ ಜಾಕ್ಸನ್ ಬಗ್ಗೆ ನಿಮಗೆಷ್ಟು ಗೊತ್ತು,.??

55

ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ, ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ್ಟರ್ ಗಳನ್ನು ತನ್ನ ಮನೆಯಲ್ಲಿ ನೇಮಿಸಿದ್ದ. ಆತ ಆಹಾರವನ್ನು ಸೇವಿಸುವುದಕ್ಕೆ ಮುಂಚೆ ಆತನ ಆಹಾರಗಳನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡುತ್ತಿದ್ದರು. ಆತನ ದೈನಂದಿನ ವ್ಯಾಯಾಮ ಮತ್ತು ಇತರ ದೇಹ ಸಂರಕ್ಷಣೆಗಾಗಿ ಮತ್ತೆ 15 ಜನರನ್ನು ಕೂಡಾ ನೇಮಿಸಿದ್ದ.

ಆಕ್ಸಿಜನ್ ನ ಅಳತೆಯನ್ನು ನಿಯಂತ್ರಿಸುವ ತಂತ್ರಜ್ಞಾನವಿರುವ ಬೆಡ್ಡನ್ನು ಮಲಗಲು ಆತ ಉಪಯೋಗಿಸುತ್ತಿದ್ದ. ತನ್ನ ಅಂಗಾಂಗಗಳಿಗೆ ಏನಾದರೂ ತೊಂದರೆ ಆದರೆ, ತಕ್ಷಣ ಹಾನಿಗೀಡಾದ ಅಂಗಾಂಗವನ್ನು ಶಸ್ತ್ರಕ್ರಿಯೆ ಮಾಡಿಸಿ ಬೇರೆ ಅವಯವವನ್ನು ಕಸಿ ಮಾಡಲು ಅವಯವ ದಾನಿಗಳನ್ನೂ ಆತ ಇರಿಸಿದ್ದ….!! ಈ ಅವಯವ ದಾನಿಗಳ ದೈನಂದಿನ ಖರ್ಚುಗಳನ್ನು ಆತನೇ ಬರಿಸುತ್ತಿದ್ದ. 150 ವರ್ಷಗಳ ಕಾಲ ಬದುಕಬೇಕೆಂಬ ಕನಸುಗಳೊಂದಿಗೆ ಆತನ ಜೀವನ ನೌಕೆಯು ಸಾಗುತ್ತಿತ್ತು……

ಆದರೆ, ಆತ ಪರಾಜಯಗೊಂಡ, 2009 ಜೂನ್ 25 ರಂದು ಆತನ 50 ನೆಯ ವಯಸಲ್ಲಿ ಆತನ ಹೃದಯವು ನಿಶ್ಚಲವಾಯಿತು.. ಆತ ನೇಮಿಸಿದ್ದ ಆ 12 ಡಾಕ್ಟರ್ ಗಳ ಶ್ರಮವು ವಿಫಲವಾಯಿತು. ಲಾಸ್ ಏಂಜಲೀಸ್ , ಕ್ಯಾಲಿಫೋರ್ನಿಯಾ ಮುಂತಾದ ಸ್ಥಳಗಳಿಂದ ಬಂದಿದ್ದ ಡಾಕ್ಟರ್ ಗಳ ಸಂಯುಕ್ತ ಪರಿಶ್ರಮದಿಂದಲೂ ಆತನನ್ನು ರಕ್ಷಿಸಲಾಗಲಿಲ್ಲ. 25 ವರ್ಷಗಳ ಕಾಲ ಡಾಕ್ಟರ್ ಗಳ ನಿರ್ದೇಶವಿಲ್ಲದೆ, ಯಾವತ್ತೂ ಒಂದು ಹೆಜ್ಜೆಯನ್ನೂ ಮುಂದೆ ಇಡಲಗಾದ ವ್ಯಕ್ತಿಗೆ 150 ವರ್ಷಗಳು ಬದುಕಬೇಕೆಂಬ ಬಯಕೆಯನ್ನು ಪೂರ್ತೀಕರಿಸಲು ಆಗಲಿಲ್ಲ…..

ಮೈಕಲ್ ಜಾಕ್ಸನ್ ನ ಶವಯಾತ್ರೆಯನ್ನು 25 ದಶಲಕ್ಷ ಜನರು ವೀಕ್ಷಿಸಿದ್ದರು. ಜಾಕ್ಸನ್ ಮರಣವನ್ನು ಸೋಲಿಸಲು ಸೆಣಸಾಡಿದ. ಆದರೆ, ಮರಣವು ಆತನನ್ನು ಸೋಲಿಸಿತು. ಸ್ವಾರ್ಥ ಮತ್ತು ಅಹಂಕಾರಿಯಾದ ಮನುಜನೇ. ಇನ್ನು ನಿನ್ನತ್ರ ಕೆಲವುಪ್ರಶ್ನೆಗಳನ್ನು ಕೇಳುವೆ. ಸಂಪತ್ತು,ಜಾತಿ , ಮತ , ಪಕ್ಷ, ರಾಜಕೀಯ , ಅಂತೆಲ್ಲಾ ಹೊಡೆದಾಡುವುದು ಯಾತಕ್ಕಾಗಿ…??. ಓ ಮನುಜನೇ ಬರುವ ದಿನ ನೀನು ಬದುಕಿರುವೆಯೋ ಇಲ್ಲವೋ ಎಂಬಾ ಯಾವುದೇ ಗ್ಯಾರಂಟಿಯಿಲ್ಲದ  21900 ದಿನಗಳು ಮಾತ್ರ ನಿನ್ನ ಮುಂದೆ ಇರುವುದು. ಅದರಲ್ಲಿ 7300 ದಿನಗಳನ್ನು ನೀನು ನಿದ್ದೆಯಲ್ಲಿ ಕಳೆಯುವಿ….

ದೇವರ ಕೊಡುಗೆಯಾಗಿ ಸಿಕ್ಕಿರುವ ಅಮೂಲ್ಯವಾದ ಬದುಕಿನ ಈ ಚಿಕ್ಕ ಕಾಲಮಾನದಲ್ಲಿ ಪರಸ್ಪರ ಜಗಳಾಡುತ್ತಾ ದ್ವೇಷದಿಂದ ಬದುಕಬೇಕೆ….?? ಸಂತೋಷದಿಂದ ಬದುಕಲು ಯಾಕೆ ಪ್ರಯತ್ನಿಸಬಾರದು?  ಸತ್ಕರ್ಮ ಮತ್ತು ಪರೋಪಕಾರದಿಂದ ಇತರರನ್ನು ಸಂತೋಷಪಡಿಸಲು ಪ್ರಯತ್ನಿಸುವ ಜೊತೆಗೆ, ಸ್ವತಃ ನೀವೇ ಸಂತೋಷಪಡುವಿರಿ ಎಂಬ ಸತ್ಯವನ್ನು ನೀನು ಅರಿತುಕೊ. ತನ್ನ ಕುಟುಂಬದೊಂದಿಗೆ ಪ್ರೀತಿಯಿಂದ ಕಳೆಯಲು ಸ್ವಲ್ಪ ಸಮಯವನ್ನು ಮೀಸಲಿಡು. ಶ್ರೀಮಂತನಾಗುವುದು ತಪ್ಪಲ್ಲ… ಹೃದಯವಂತಿಕೆಯಿಲ್ಲದೆ ಕೇವಲ ಹಣದಿಂದ ಶ್ರೀಮಂತನಾಗಬೇಕೆಂಬ ವ್ಯಾಮೋಹ ಖಂಡಿತವಾಗಿಯೂ ತಪ್ಪು. ಜೀವನವನ್ನು ನಿಯಂತ್ರಿಸು. ಇಲ್ಲವಾದಲ್ಲಿ ಜೀವನವು ನಿನ್ನನ್ನು ನಿಯಂತ್ರಿಸುತ್ತದೆ. ಬದುಕಿನಲ್ಲಿ ನಿಜವಾಗಿಯೂ ಬೇಕಾಗಿರುವುದು ಸಂತೋಷ, ಸಂತೃಪ್ತಿ, ನೆಮ್ಮದಿ ಮುಂತಾದವಾಗಿವೆ. ಓ ಮನುಜನೇ… ಇವೆಲ್ಲವನ್ನೂ ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂಬ ಕಟುಸತ್ಯವನ್ನು ಅರಿತುಕೊ… ವಳಿತು ಮಾಡು ಮನುಷ್ಯ  ನೀ ಇರೋದು ಮೂರು ದಿವಸ……..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಿಸಾಡುವ ಮುಂಚೆ ಈ ಲೇಖನ ಓದಿ

    ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ. * ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. *ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ. *ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ…

  • ಸುದ್ದಿ

    ರಣಂ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ದುರ್ಮರಣ ಪ್ರಕರಣ- ತನಿಖೆ ನಡೆಸುವವೇಳೆ ಸ್ಫೋಟಕ ಟ್ವಿಸ್ಟ್…….!

    ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ…

  • ಆರೋಗ್ಯ

    ಹಲವು ಸಮಸ್ಯೆಗಳಿಗೆ ರಾಮಭಾಣ ಖರಬೂಜ ಹಣ್ಣು. ಈ ಹಣ್ಣಿನ

    ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…

  • Cinema

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳಿಂದ ಮತ್ತೊಂದು ಬಿರುದು….! ಏನೆಂದು ತಿಳಿಯಲು ಇದನ್ನೊಮ್ಮೆ ಓದಿ.

    ಕುರುಕ್ಷೇತ್ರಸಿನಿಮಾ 100 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳುಹೊಸ ಬಿರುದು ಕೊಟ್ಟು ಸನ್ಮಾನಿಸಿದ್ದಾರೆ. ಕುರುಕ್ಷೇತ್ರ 100 ಕೋಟಿ ಕ್ಲಬ್ ಸೇರಿದ ಸಂಭ್ರಮವನ್ನು ದರ್ಶನ್ ಈಗಾಗಲೇಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಇದೀಗ ಬಾಕ್ಸ್ ಆಫೀಸ್ ಸುಲ್ತಾನನಿಗೆಅಭಿಮಾನಿಗಳು ಹೊಸ ಬಿರುದು ಕೊಟ್ಟಿದ್ದಾರೆ. ದರ್ಶನ್ ರನ್ನು ‘ಶತಕೋಟಿ ಸರದಾರ’ ಎಂಬ ಹೊಸ ಬಿರುದು ಕೊಟ್ಟುಸನ್ಮಾನಿಸಿದ್ದಾರೆ ಅಭಿಮಾನಿಗಳು. ಈಗಾಗಲೇ ದರ್ಶನ್ ರನ್ನು ಪ್ರೀತಿಯಿಂದ ಅಭಿಮಾನಿಗಳುಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಎಂದೆಲ್ಲಾ ಕರೆಯುತ್ತಾರೆ….

  • ಆಧ್ಯಾತ್ಮ

    ಹಿಂದೂ ಧರ್ಮದಲ್ಲಿ ಯಾರಾದ್ರು ಸತ್ತಾಗ ಕೇಶ ಮುಂಡನ ಮಾಡುತ್ತಾರೆ, ಏಕೆ ಗೊತ್ತಾ?

    ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.