ಸುದ್ದಿ

ಮೂತ್ರ ವಿಸರ್ಜನೆ ಮಾಡುವುದಕ್ಕಾಗಿ ಚಲಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ಚಾಲಕ- ಕ್ರಮಕ್ಕೆ ಆಗ್ರಹ….!

50

ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್‌ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಶಿಂಧೆ ಎಂಬವರು ಕೆಲಸಕ್ಕಾಗಿ ತೆರಳುವಾಗ ರೈಲು ನಿಂತಿದ್ದನ್ನು ಗಮನಿಸಿದ್ದಾರೆ. ರೈಲಿನ ಚಾಲಕ ಕೆಳಗಿಳಿದು ಬಂದು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಸೋನು ಶಿಂಧೇ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.

ಯಾವುದೇ ತಾಂತ್ರಿಕ ವೈಫಲ್ಯ ಅಥವಾ ಕೆಂಪು ಸಿಗ್ನಲ್ ನೋಡಿ ರೈಲನ್ನು ನಿಲ್ಲಿಸಲಿಲ್ಲ. ನಾನು ಕೆಲಸಕ್ಕೆ ಹೋಗುವಾಗ ರೈಲು ಎರಡು ನಿಲ್ದಾಣದ ನಡುವೆ ನಿಂತಿತ್ತು. ಆಗ ಚಾಲಕ ರೈಲಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಹಾಗಾಗಿ ನಾನು ಅವರ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದೇನೆ ಎಂದು ಸೋನು ಶಿಂಧೇ ಹೇಳಿದ್ದಾರೆ.

ವೈರಲ್ ಫೋಟೋ ಹಾಗೂ ವಿಡಿಯೋಗಳು ಕೇಂದ್ರ ರೈಲ್ವೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಪ್ರತಿದಿನ ಅರಿಶಿನವನ್ನು ಬಳಸುವುದರಿಂದ ಏನಾಗುತ್ತೆ ಗೊತ್ತಾ.!

    ನೀವು ರಾತ್ರಿಯಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದರೆ, ಅರಿಶಿನ ಹಾಲು ನಿಮ್ಮ ನಿದ್ರೆಗೆ ಸಹಾಯಕವಾಗಬಹುದು. ರಾತ್ರಿ ಊಟದ ನಂತರ ಮಲಗುವ ಮುನ್ನ ಅರ್ಧ ಲೋಟ ಹಾಲನ್ನು ಅರಿಶಿನೊಂದಿಗೆ ಕುಡಿಯಿರಿ ಮತ್ತು ನಂತರ ನೀವು ರಾತ್ರಿಯಲ್ಲಿ ಹೇಗೆ ಮಲಗುತ್ತೀರಿ ಎಂಬುದನ್ನು ನೋಡಿ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ…

  • ಸುದ್ದಿ

    ಹಳಿಗಳಲ್ಲಿ ಇನ್ಮುಂದೆ ಕಂಪನಿ ರೈಲು ಸಂಚಾರ…!

    ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಐಆರ್‌ಸಿಟಿಸಿ ಜೊತೆಗೆ ಪ್ರಯೋಗ: ರೈಲುಗಳನ್ನು ಖಾಸಗಿಗೆ ನಿರ್ವಹಣೆಗಾಗಿ ನೀಡುವುದ‌ಕ್ಕೂ ಮುನ್ನ…

  • ಸುದ್ದಿ

    ಲಕ್ನೋ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಮುಸ್ಲಿಂ ಕುಟುಂಬಗಳು ಸತ್ತವರನ್ನು ತಮ್ಮ ಮನೆ ಮನೆಗಳಲ್ಲಿಯೇ ಸಮಾಧಿ ಮಾಡಿಕೊಳ್ಳುತ್ತಿದ್ದಾರೆ…!

    ಹೌದು. ಉತ್ತರ ಪ್ರದೇಶ ರಾಜ್ಯದ ಆಗ್ರಾ-ಜೈಪುರ ಹೆದ್ದಾರಿಯ ಆಗ್ರಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಅಚ್ನೇರಾ ಬ್ಲಾಕ್‍ನ ಕುರಾಲಿ ತೆಹ್‍ಸಿಲ್‍ಯಲ್ಲಿನ ಚಹ್ ಪೋಕರ್ ಎಂಬ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಅವರೆಲ್ಲರೂ ತಮ್ಮ ಕುಟುಂಬಸ್ಥರು ಯಾರದರೂ ಸತ್ತರೆ ಅವರನ್ನು ತಮ್ಮ ಮನೆಯಲ್ಲಿಯೆ ಸಮಾಧಿ ಮಾಡುವುದನ್ನು ರೂಡಿಸಿಕೊಂಡು ಬಂದಿದ್ದಾರಂತೆ. ಇದು ಯಾವುದೇ ಪದ್ಧತಿಯಲ್ಲ, ಬಲವಂತ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿರುವ 50 ಮುಸ್ಲಿಂ ಮನೆಗಳಲ್ಲಿ ಸುಮಾರು 300 ಜನಸಂಖ್ಯೆ ಹೊಂದಿದೆ. ಆದರೆ ಅವರಿಗೆ ಖಾಯಂ ಸ್ಮಶಾನ ಭೂಮಿ ಇಲ್ಲ….

  • ಸುದ್ದಿ

    ಮದುವೆಯಾದ್ರು ಬಸ್​​​ನಲ್ಲೇ ಜೀವನ ನಡೆಸುತ್ತಿರುವ ಪ್ರೇಮಿಗಳು..!ಇದಕ್ಕೆ ಕಾರಣ ಏನು ಗೊತ್ತಾ..?

    ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್​​​ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…

  • ಸ್ಪೂರ್ತಿ

    51ವರ್ಷದ ಮಹಿಳೆ ಮಾಡಿರುವ ಸಾಧನೆಯ ಬಗ್ಗೆ ನೀವು ತಿಳಿದ್ರೆ ಅಚ್ಚರಿ ಪಡೋದ್ರಲ್ಲಿ ಡೌಟ್ ಇಲ್ಲ.!

    ಸಾಧನೆ ಅನ್ನೋದು ಸುಲಭದ ಮಾತಲ್ಲ. ‘ಆಗುವುದಿಲ್ಲ ಅನ್ನೋ ಮಾತನ್ನು ಬಿಟ್ಟು ಆಗುತ್ತೆ’ ಅನ್ನೋ ದಾರಿಯನ್ನು ಹುಡುಕಿದಾಗ ಮಾತ್ರ ಆ ಸಾಧನೆಯನ್ನು ಮಾಡಲು ಸಾಧ್ಯವಾಗುವುದು ಹಾಗು ಅದಕ್ಕೆ ಪ್ರತಿಫಲ ಸಿಗುವುದು.ಕಣ್ರೀ ನಾವು ನಿಮಗೆ ಹೇಳಲು ಹೊರಟಿರುವ ಕಥೆ ಎಲ್ಲರ ಕಣ್ಣು ಹುಬ್ಬೇರಿಸುವ ರೀತಿಯಲ್ಲಿರುವ ಕಥೆ ಇದು.

  • ಸುದ್ದಿ

    ಇನ್ಫೋಸಿಸ್ ದಂಪತಿಗಳ ಸಿನಿಮಾದಲ್ಲಿ ಸುಧಾ ಮೂರ್ತಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ನ ಈ ಸ್ಟಾರ್ ನಟಿ..!ಆ ನಟಿ ಯಾರು?

    ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್​​ ನಾರಾಯಣ​​ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್​ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್​ನಲ್ಲಿ ವೇದಿಕೆ ಸಿದ್ಧವಾಗಿದೆ.ಈಗಾಗಲೆ ಚಿತ್ರಕ್ಕೆ ‘ಮೂರ್ತಿ’ ಎಂದು ಟೈಟಲ್ ಇಡಲಾಗಿದೆ. ಆದರೆ ಈಗ  ಪ್ರೇಕ್ಷಕರಲ್ಲಿ ಸುಧಾ ಮೂರ್ತಿ ಪಾತ್ರದಲ್ಲಿಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸುಧಾಮೂರ್ತಿ ಜೀವನವನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿರುವುದು ಬಾಲಿವುಡ್ ನ ಖ್ಯಾತನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ. ಈಗಾಗಲೆ ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡಿರುವ ಅಶ್ವಿನಿ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ…