ಸುದ್ದಿ

ಮುಚ್ಚುವ ಅಂತದಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ: ರಿಷಬ್ ದತ್ತು ಪಡೆದ ಶಾಲೆ ಈಗ ಹೇಗಿದೆ ಗೊತ್ತ..?

57

ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು” ಸಿನಿಮಾ ಮೂಲಕ ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದರು. ಶೆಟ್ಟರ ಸರ್ಕಾರಿ ಶಾಲೆಗೆ ಎಲ್ಲಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ಮಾಡಿ, ಸಿನಿಮಾ ಸಕ್ಸಸ್ ಆದ ನಂತರ ಸೈಲೆಂಟ್ ಆಗದ ರಿಷಬ್, ಚಿತ್ರೀಕರಣ ಮಾಡಿದ ಶಾಲೆಯನ್ನು ದತ್ತು ಪಡೆದಿದ್ದರು. ಶಾಲೆ ಅಳಿವಿನ ಅಂಚಿನಲ್ಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಶಾಲೆಗೆ ಮರುಜೀವ ನೀಡಲು ಮುಂದಾಗಿದ್ದರು. ಈಗ ಆ ಶಾಲೆಯನ್ನು ಮಾದರಿಶಾಲೆಯಾಗಿ ರೂಪಿಸಿದ್ದಾರೆ.

ಚಿತ್ರೀಕರಣ ಸಮಯದಲ್ಲಿ ಶಾಲೆಯಲ್ಲಿ 42 ಮಕ್ಕಳು ಇದ್ದರಂತೆ. ಆ ನಂತರ ಶಾಲೆಯಲ್ಲಿಕೇವಲ 17 ಮಕ್ಕಳು ಮಾತ್ರ ಉಳಿದ್ದರು. ಇನ್ನೇನು ಶಾಲೆ ಮುಚ್ಚಿ ಹೋಗುತ್ತಿದೆ ಎನ್ನುವಷ್ಟೊತ್ತಿಗೆ ರಿಷಬ್ಶಾಲೆಯನ್ನು ಕಾಪಾಡಿ ಉಳಿಸಿಕೊಂಡಿದ್ದಾರೆ. ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದಾರೆ. ಶಾಲೆಯನ್ನು ಸಂಪೂರ್ಣವಾಗಿನವೀಕರಿಸಿದ್ದಾರೆ. ಅಲ್ಲದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಉತ್ತಮ ಶಿಕ್ಷಕರು ಹೀಗೆ ಸಾಕಷ್ಟು ರೀತಿಯಲ್ಲಿಶಾಲೆಯನ್ನು ಬದಲಾಯಿಸಿದ್ದಾರೆ ರಿಷಬ್ ಮತ್ತು ತಂಡ. 17 ಮಕ್ಕಳಿದ್ದ ಶಾಲೆಯಲ್ಲೀಗ 84 ಜನ ವಿದ್ಯಾರ್ಥಿಗಳಿದ್ದಾರೆ.ಇನ್ನು ಎರಡು ವರ್ಷಗಳಲ್ಲಿ ಮಕ್ಕಳ ಸಂಖ್ಯೆ 300ಕ್ಕೆ ಏರಿಕೆಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆರಿಷಬ್.

ರಿಷಬ್ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದರೀತಿಯಲ್ಲೆ, ನಿಜಜೀವನದಲ್ಲೂ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ರಕ್ಷಿಸಿ ಹೊಸ ರೂಪ ನೀಡಿದ್ದಾರೆ.ಇದೊಂದೆ ಶಾಲೆಯಲ್ಲ ಕರ್ನಾಟಕದಲ್ಲಿ ಇಂತಹ ಸಾಕಷ್ಟು ಕನ್ನಡ ಮಾಧ್ಯಮದ ಶಾಲೆಗಳು ಅಳಿವಿನ ಅಂಚಿನಲ್ಲಿವೆ.ರಿಷಬ್ ಕನ್ನಡ ಶಾಲೆ ಉಳಿಸಿ ಎನ್ನುವ ಅಭಿಯಾನ ಕೂಡ ಶುರುಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ