ಗ್ಯಾಜೆಟ್

ಮುಂಬರುವ ದಿನಗಳಲ್ಲಿ ಹೂವಾವೆಯ್ ಇಂಡಿಯಾದಿಂದ 5G ತಂತ್ರಜ್ಞಾನ ಬಳಕೆ..?ತಿಳಿಯಲು ಈ ಲೇಖನ ಓದಿ..

177

ಮುಂದಿನ ಕೆಲ ದಿನಗಳಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ತರಲು Huawei ತುದಿಗಾಲಲ್ಲಿ ನಿಂತಿದೆ, ಭಾರತೀಯರು 4ಜಿ ತಂತ್ರಜ್ಞಾನದ ರುಚಿ ಸವಿಯುತ್ತಿರುವ ಬೆನ್ನಲ್ಲೇ ಇದೀಗ ೫ಜಿ ತಂತ್ರಜ್ಞಾನವು ಭಾರತಕ್ಕೆ ಬರುತ್ತಿರುವುದು ಕೌತುಕಕ್ಕೆ ಕಾರಣವಾಗಿದೆ.

Huawei ಭಾರತದ ಸಿಇಓ ಜೆಯ್ ಚೆನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಮೊದಲ ತಿಂಗಳುಗಳಲ್ಲಿ Huawei ಹಾಗೂ  ಭಾರತೀ ಏರ್ಟೆಲ್ ಸಹಯೋಗದೊಂದಿಗೆ ೫ಜಿ ತಂತ್ರಜ್ಞಾನವನ್ನು ಭಾರತೀಯರಿಗೆ ಪರಿಚಯಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

MIMO ತಂತ್ರಜ್ಞಾನ ಅಳವಡಿಕೆ.?

MIMO (Multiple In Multiple Out) ತಂತ್ರಜ್ಞಾನ ಒಂದು 5G ನೆಟ್ವರ್ಕ್ ನ ವಿಶೇಷತೆಯಲ್ಲಿ ಒಂದು, 5g ನೆಟ್ವರ್ಕ್ ಹೊಂದಿರುವ ವ್ಯಕ್ತಿಯು ಯಾವಪ್ರದೇಶಕ್ಕೆ ಹೋದರೂ MIMO ತಂತ್ರಜ್ಞಾನದಿಂದಾಗಿ ಸಂಪರ್ಕ ಕಡಿತಗೊಳ್ಳುವುದಿಲ್ಲ. (ನೆಟ್ವರ್ಕ್ ಕನ್ಸಿಸ್ಟೆನ್ಸ್)

4Gಗಿಂತ 10 ಪಟ್ಟು ಹೆಚ್ಚಿನ ವೇಗ.?

Huawei ಪ್ರಕಾರ ಭಾರತದಲ್ಲಿ ಈಗಿನ ೪ಜಿ ತಂತ್ರಜ್ಞಾನಕ್ಕೆ ಹೋಲಿಸಿದರೆ 5G ಅತ್ಯಂತ ಬಲಶಾಲಿ ತಂತ್ರಜ್ಞಾನವಾಗಲಿದೆ ಅದುವೇ 10 ಪಟ್ಟು ಹೆಚ್ಚು, ಈಗಿನ ಸರಾಸರಿ 4G ವೇಗ 50 ರಿಂದ 60 MBPS ಇರಲಿದೆ ಆದರೆ ೫ಜಿ ಯು 500 ರಿಂದ 600 MBPS ವೇಗವಿರಲಿದೆ!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ