ರಾಜಕೀಯ

ಮಹಿಳಾ ಸಚಿವರಿಂದ ಬಿಯರ್ ಬಾರ್ ಉದ್ಘಾಟನೆ ! ಸಿಎಂ ಯೋಗಿಗೆ ತೀವ್ರ ಮುಜುಗರ

73

ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ ತಂದಿಟ್ಟಿದೆ.

 

ಸ್ವಾತಿ ಸಿಂಗ್ ಅವರು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಗೌರವ್ ಪಾಂಡೆ ಮತ್ತು ಅವರ ಪತ್ನಿ ನೇಹಾ ಅವರೊಂದಿಗೆ  ಗೋಮತಿ ನಗರದಲ್ಲಿ  ಬಿ ದಿ ಬಿಯರ್ ಎಂಬ ಹೆಸರಿನ ಬಿಯರ್ ಬಾರ್ವೊಂದಕ್ಕೆ  ಚಾಲನೆ ನೀಡಿದ್ದರು.

ಈ ವಿಚಾರ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ಮತ್ತು ಸಾರ್ವಜನಿಕರು ನೂತನ ಸರ್ಕಾರದ ವಿರುದ್ಧ ವ್ಯಾಪಕ ಟೀಕಾ ಪ್ರಹಾರ ನಡೆಸಿದ್ದು, ನೂತನ ಬಿಯರ್ ಬಾರ್ಗೆ ಸರಿಯಾದ ಪರವಾನಿಗೆ ಇಲ್ಲ. ಸರ್ಕಾರ ದ್ವಂದ ನಿಲುವುಗಳನ್ನು ತೋರಿ ಅಕ್ರಮಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸಚಿವೆ ಸ್ವಾತಿ ಮತ್ತು ಇಬ್ಬರು ಅಧಿಕಾರಿಗಳ ಬಳಿ ಸಿಎಂ ಯೋಗಿ ಕೂಡಲೇ ವರದಿ ನೀಡುವಂತೆ ಹೇಳಿದ್ದಾರೆ.

ಸ್ವಾತಿ ಸಿಂಗ್ ಅವರು ಮಾಯಾವತಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕ ದಯಾ ಶಂಕರ್ ಸಿಂಗ್ ಅವರ ಪತ್ನಿಯಾಗಿದ್ದು, ಸರೋಜಿನಿ ನಗರ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿ  ಸಚಿವೆಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಫುಡ್ ಡೆಲಿವರಿಗೆ ಮಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೆ ಓದಲೇಬೇಕಾದ ವಿಷಯ,.!!

    ಮನೆ ಬಾಗಿಲಿಗೆ ಆಹಾರ ವಿತರಿಸುವ ಜೊಮ್ಯಾಟೋ ವಿತರಕ ವ್ಯವಸ್ಥೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ‌ ವಿಚಿತ್ರ ಆರೋಪವೊಂದು ಕೇಳಿಬಂದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.‌ ಹೌದು ಮಹಾರಾಷ್ಟ್ರದ ಪುಣೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದ್ದು ಫುಡ್ ಡೋರ್ ಸ್ಟೆಪ್ ಡೆಲಿವರಿ ಮಾಡುವ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ನಾಯಿ ಕಳ್ಳತನದ ಆರೋಪ ಕೇಳಿ ಬಂದಿದೆ. ಪುಣೆಯ ಕಾವೇರಿ ರಸ್ತೆಯಲ್ಲಿ ವಾಸವಾಗಿರುವ ವಂದನಾ ಎಂಬಾಕೆ‌ ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದು…

  • Uncategorized

    ಹಳ್ಳಿ ಹುಡುಗರಿಂದ ಕ್ರಿಕೆಟ್ ಕನ್ನಡದಲ್ಲಿ ಲೈವ್ ಕಾಮೆಂಟ್ರಿ

    ನಮ್ಮ ತಂಡದವರಿಂದ ಹಳ್ಳಿಯ ಪ್ರತಿಯೊಬ್ಬನಿಗೂ ಮನಮುಟ್ಟುವಾಗೆ ಕನ್ನಡಲ್ಲಿ ಕ್ರಿಕೆಟ್ ರಸದೌತಣವನ್ನು ಸವಿಯಲು ಸಿದ್ದರಾಗಿ …. ಸಾಧಾರಣ ಮೊತ್ತ ಬೆನ್ನತ್ತಿದರೂ ಆತಂಕದ ಕ್ಷಣಗಳನ್ನು ಎದುರಿಸಿದ ಪಾಕಿಸ್ತಾನ ಒತ್ತಡ ಮೆಟ್ಟಿ ನಿಂತು ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿತು. 237 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಕಂಡರೂ ನಂತರ ಆತಂಕಕ್ಕೆ ಒಳ ಗಾಯಿತು. ಅಜರ್‌ ಅಲಿ ಮತ್ತು ಫಕ್ರ್ ಜಮಾನ್‌ ಮೊದಲ ವಿಕೆಟ್‌ಗೆ 68 ಎಸೆತಗಳಲ್ಲಿ 74…

  • ಸಂಬಂಧ

    ಮದುವೆಯಾದ ಹುಡುಗ ನಿಮಗೆ ತಕ್ಕ ವರನೇ ಎಂದು ತಿಳಿದುಕೊಳ್ಳುವುದು ಹೇಗೇ..? ಈ ಗುಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಆತ ನಿಮಗೆ ತಕ್ಕ ವ್ಯಕ್ತಿ ಎಂದು ಅರ್ಥ…

    ಮದುವೆ ಎಂಬುದೇ ವಿಚಿತ್ರ ನಂಟು. ಎಲ್ಲಿಯೋ ಇದ್ದ ಹುಡುಗ – ಹುಡುಗಿ ಮದುವೆ ಎಂಬ ಸಂಬಂಧ ದೊಂದಿಗೆ ಬೆಸೆಯುತ್ತದೆ. ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ

  • ಸ್ಪೂರ್ತಿ

    19 ವರ್ಷದ ಈ ಯುವತಿ ತನ್ನ ಓದಿಗಾಗಿ ಮಾಡಿದ್ದು ಏನು ಗೊತ್ತಾ..!ಮುಂದೆ ಓದಿ ಶಾಕ್…

    ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.

  • ಸುದ್ದಿ

    ರೈಲಿನಲ್ಲಿ ಮೃತ ಆತ್ಮಗಳಿಗೂ ಆಗುತ್ತದೆ ಟಿಕೆಟ್ ಬುಕ್ಕಿಂಗ್ …!

    ಸದ್ಯ ಪಿತೃಪಕ್ಷ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಜನರು ಗಯಾಕ್ಕೆ ಬಂದು ಪಿಂಡದಾನ ಮಾಡ್ತಾರೆ. ಒಡಿಸಾದ ಕಠ್ಮಂಡುವಿನಿಂದ ಬಂದ ಪಿಂಡದಾನಿಗಳ ತಂಡವೊಂದು ಗಮನ ಸೆಳೆದಿದೆ. ಅವ್ರು ರೈಲಿನಲ್ಲಿ ಪೂರ್ವಜರಿಗೂ ಟಿಕೆಟ್ ಬುಕ್ ಮಾಡಿದ್ದಾರೆ. ಪೂರ್ವಜರ ಬಗ್ಗೆ ಇವರಿಗೆ ನಂಬಿಕೆಯಿಂದೆಯಂತೆ. ಪಿಂಡದಾನಕ್ಕೆ ಬರುವ ಏಳು ದಿನಗಳ ಮೊದಲು ಭಗವದ್ಗೀತೆ ಪಠಣ ಮಾಡ್ತಾರಂತೆ. ನಂತ್ರ ಪೂರ್ವಜರ ವಸ್ತುಗಳನ್ನು ಕಟ್ಟಿ ಪಿತೃದಂಡ ಸಿದ್ಧಪಡಿಸುತ್ತಾರಂತೆ….