ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.
ಆಹಾರ ಜೀರ್ಣ ಆಗೋಕೆ, ವಾಂತಿ ತಡಿಯಕ್ಕೆ, ಕ್ಯಾನ್ಸರ್ ಬರದೇ ಇರೋ ಹಾಗೆ ಕಾಪಾಡೋಕೆ, ಅಸ್ತಮಾ, ನೆಗಡಿ, ತಲೆನೋವು, ಕೆಮ್ಮು ಮತ್ತೆ ಬೇಧಿ ಇದೆಲ್ಲಕ್ಕೂ ರಾಮ ಬಾಣ. ಕಟ್ಟಿದ ಮೂಗಿಗೆ, ಗಂಟಲು ಅಥವಾ ಶ್ವಾಸಾಕೋಶದ ತೊಂದರೆಗೆ ಮತ್ತು ಅಲರ್ಜಿ ಆಗದ ಹಾಗೆ ನೋಡಿಕೊಳ್ಳುತ್ತೆ. ಇನ್ನು ಗರ್ಭಿಣಿಯರಲ್ಲಿ ಬೆಳಗಿನ ಹೊತ್ತು ವಾಂತಿ ಆಗದ ಹಾಗೆ ನೋಡಿಕೊಳ್ಳುತ್ತೆ. ಅಲ್ಸರ್ ನಿವಾರಿಸಿ ಲಿವರ್ ನ ಆರೋಗ್ಯ ಕಾಪಾಡುತ್ತೆ.
ಚರ್ಮದ ಮೇಲೆ ಹಚ್ಚೋಕೆ ಹಸಿದು, ಒಣಗಿದ್ದು, ರುಬ್ಬಿದ್ದು ಅಥವಾ ಎಣ್ಣೆ ರೂಪದಲ್ಲಿ ಬಳಸಿ ಚರ್ಮದ ಕಾಂತಿ ಹೆಚ್ಚಿಸ ಬಹುದು. ಚರ್ಮದ ಸುಕ್ಕು, ಕಪ್ಪು ಕಲೆ, ಕಣ್ಣಿನ ಸುತ್ತ ಕಪ್ಪು ಬಣ್ಣ , ಮೊಡವೆ ಎಲ್ಲಕ್ಕೂ ಬಳಸಬಹುದು. ಹಾಗಾಗೀನೆ ಕ್ಲೆನ್ಸಿಂಗ್ ಲೋಷನ್ಗಳಲ್ಲಿ ಇದನ್ನ ಬಳಸ್ತಾರೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯೂ ಆಗುತ್ತೆ, ಬಾಯ್ವಾಸನೆನೂ ದೂರ ಆಗುತ್ತೆ. ಹಲ್ಲು ಹಾಳಾಗದ ಹಾಗೆ ನೋಡಿಕೊಂಡು, ನಾಲಿಗೇನ ಸ್ವಚ್ಚಗೊಳಿಸುತ್ತೆ. ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದ ಹಾಗೆ ನೋಡಿಕೊಳ್ಳುತ್ತೆ. ಅದಕ್ಕೇ ಟೂತ್ ಪೇಸ್ಟ್, ಚ್ಯುಯಿಂಗ್ ಗಮ್ ಗಳಲ್ಲಿ ಇದನ್ನ ಬಳಸ್ತಾರೆ.
ಇದರಲ್ಲಿ ಪುದೀನ ಚಟ್ನಿ, ಪುದೀನ ಮೊಸರು ಬಜ್ಜಿ, ಪುದೀನ ರೈಸ್, ಜಲ್ ಜೀರಾ, ಪುದೀನ ಮಜ್ಜಿಗೆ ಮತ್ತಿನ್ನೂ ಏನೇನೋ ರುಚಿರುಚಿಯಾಗಿ ಮಾಡ್ಕೊಂಡು ತಿನ್ಬೋದು.
ನಮಗೆ ಗೊತ್ತಿಲ್ಲದ ಇನ್ನೂ ಕೆಲುವು ಉಪಯೋಗಗಳು ಎಲ್ಲಿವೆ ನೋಡಿ !
*ಶೀತ ಆಗಿ ಗಂಟಲು ನೋವು ಬಂದಿದ್ದರೆ, ಅದಕ್ಕೆ ಪುದೀನ ರಸದ ಜೊತೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ.
*ದಿನಕ್ಕೆ ಎರಡರಿಂದ ಮೂರು ಸರ್ತಿ ಪುದೀನ ಟೀ ಕುಡಿದರೆ ಅಜೀರ್ಣ ಮತ್ತು ಶೀತ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಜೊತೆ ಅಷ್ಟೇಪ್ರಮಾಣ ಜೇನು ಹಾಕಿ ಕುಡಿಯೋದ್ರಿಂದ ಅಸಿಡಿಟಿ ಹಾಗು ವಾಂತಿ ಗುಣ ಆಗುತ್ತೆ.
*ಊಟಕ್ಕೆಮುಂಚೆ ಮತ್ತು ಊಟ ಆದ್ಮೇಲೆ ಪುದೀನ ಎಲೆ ತಿನ್ನೋದ್ರಿಂದ ಬಾಯಿ ವಾಸನೆ ಬರಲ್ಲ.
*ಪುದೀನ ಪೇಸ್ಟ್ ಗೆ ಅರಿಶಿಣ ಹಾಕಿ ಮುಖಕ್ಕೆ ಹಚ್ಚೋದ್ರಿಂದಮೊಡವೆ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಗೆ ಅರ್ಧ ಚಮಚ ಶುಂಠಿ, ಸ್ವಲ್ಪ ನಿಂಬೆರಸ ಮತ್ತುಜೇನು ಸೇರಿಸಿ 3 ದಿನ ಕುಡಿದರೆ, ವಾಂತಿ ಪೂರ್ತಿ ವಾಸಿ ಆಗುತ್ತೆ.
ನೋಡಿದರಲ್ಲ ಮನೆ ಮುಂದೆ ಸಿಗೋ ಪುದೀನಾ ಸೊಪ್ಪಿಂದ ಎಷ್ಟೆಲ್ಲಾ ಉಪಯೋಗ ಇದೆ ಅಂತಾ? ನೀವಿದನ್ನ ಹೆಂಗೆ ಉಪಯೋಗಿಸ್ತೀರ ಅಂತ ಯೋಚ್ನೆ ಮಾಡಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.
ನೀರಿನ ಸಂರಕ್ಷಣೆಗಾಗಿ ನ್ಯೂಸ್ 18 ಹಮ್ಮಿಕೊಂಡಿರುವ #Mission Paani ಆಂದೋಲನ ಸಾಕಷ್ಟು ಪರಿಣಾಮಕಾರಿಯಾಗಿದೆ. ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ನೀರಿನ ಸಂರಕ್ಷಣೆ ಕುರಿತು ನ್ಯೂಸ್ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀರನ್ನು ಸಂರಕ್ಷಿಸುವುದು ಹೇಗೆ? ಬರಗಾಲದಿಂದ ತತ್ತರಿಸಿ ಹೋಗಿರುವ ಭೂಮಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಿನ ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು. ತಮಿಳುನಾಡಿನಲ್ಲಿ ಈ ವರ್ಷ ಬರಗಾಲ ಸೃಷ್ಟಿಯಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ….
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ…
ಸ್ನಾನವನ್ನ ಎಲ್ಲರೂ ಮಾಡೇ ಮಾಡುತ್ತಾರೆ, ಕೆಲವರು ದಿನದಲ್ಲಿ ಒಮ್ಮೆ ಸ್ನಾನ ಮಾಡಿದರೆ ಇನ್ನು ಕೆಲವರು ದಿನದಲ್ಲಿ ಎರಡು ಭಾರಿ ಸ್ನಾನವನ್ನ ಮಾಡುತ್ತಾರೆ. ಇನ್ನು ಬೆಳಿಗ್ಗೆ ಸ್ನಾನವನ್ನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಕೆಲವು ಬೆಳಗಿನ ಸಮಯದಲ್ಲಿ ತಣ್ಣೀರಿನಲ್ಲಿ ಸ್ನಾನವನ್ನ ಮಾಡಿದರೆ ಇನ್ನು ಕೆಲವು ಬಿಸಿ ನೀರಿನಲ್ಲಿ ಸ್ನಾನವನ್ನ ಮಾಡುತ್ತಾರೆ. ಇನ್ನು ಪ್ರಪಂಚದಲ್ಲಿ ಹೆಚ್ಚಿನ ಜನರು ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ತಣ್ಣಗಿನ ನೀರಿನಲ್ಲಿ ಸ್ನಾನವನ್ನ ಮಾಡಿದರೆ ಚಳಿ ಆಗುತ್ತದೆ ಅನ್ನುವ ಕಾರಣಕ್ಕೆ…