ಸುದ್ದಿ

ಮನೆ ಬಾಗಿಲಿಗೆ ʼಈರುಳ್ಳಿʼಯನ್ನು ಅತಿ ಕಡಿಮೆ ದರದಲ್ಲಿ ತಲುಪಿಸಲು ಮುಂದಾದ ಸರ್ಕಾರ….!

42

ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ.

ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ ಉದ್ದೇಶದಿಂದ, ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅವುಗಳನ್ನು ಮೊಬೈಲ್ ವ್ಯಾನ್ ಮೂಲಕ ನಗರದಾದ್ಯಂತ ಗರಿಷ್ಠ ಪ್ರದೇಶಗಳಿಗೆ ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಸೇಬು ಬೆಲೆಗಿಂತ ಈರುಳ್ಳಿ ಬೆಲೆ ದುಬಾರಿಯಾಗಿರುವುದು ಕಂಡು ಬಂದಿದೆ. ಸಗಟು ಖರೀದಿಯಲ್ಲಿ ಪ್ರತಿ ಕೆಜಿ ಸೇಬಿಗೆ 30-40 ರೂಪಾಯಿವರೆಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಂಬಾನಿ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಕೇಳಿದರೆ ಶಾಕ್, ನೋಡಿ ಭಾರತದ ಐಷಾರಾಮಿ ಮನೆ.

    ಭಾರತದ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ ? ಇನ್ನು ಇತ್ತೀಚಿನ ದಿನಗಳಲ್ಲಿ ಜಿಯೋ ಸಿಮ್ ಅನ್ನು ಜಾರಿಗೆ ತಂದ ಮೇಲೆ ಆಟ ಆಡುವ ಹುಡುಗರಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ಅಂಬಾನಿ ಎಂದರೆ ಯಾರು ಎಂಬುದು ತಿಳಿದಿದೆ..ಯುವ ಪೀಳಿಗೆ ಅವರಿಗಂತೂ ಅವರನ್ನು ಜಿಯೋ ಅಂಬಾನಿ ಎಂದೇ ಕರೆಯುತ್ತಾರೆ. ಅಲ್ಲದೆ ಭಾರತ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರೇ ಮೊದಲ ಸ್ಥಾನ..ಇನ್ನು ಎಲ್ಲರೂ ಸಹ ಮುಕೇಶ್ ಅವರ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅವರ ಮನೆಯ…

  • ಕಾನೂನು

    ಭಾರತದಲ್ಲಿ ಇದೇ ಮೊದಲ ಬಾರಿಗೆ,ಕೋತಿಯನ್ನು ಹಿಂಸಿಸಿ ಕೊಂದ ಆರೋಪಿಗೆ ಬೇಲ್ ನಿರಾಕರಿಸಿದ ಕೋರ್ಟ್,ಆತನಿಗೆ ವಿಧಿಸಿದ ಶಿಕ್ಷೆ ಏನು ಗೊತ್ತಾ..?

    ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಸುದ್ದಿ

    ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್, ಉಪಾಸನಾ ಕೊನಿಡೆಲಾ ಇನ್ನು ಅನೇಕ ಸ್ಟಾರ್​ಗಳು,..ಇದಕ್ಕೆ ಕಾರಣ.?ಇಲ್ಲಿದೆ ನೋಡಿ….

    ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ  ‘ನಮ್ಮೊಳಗೆ ಬದಲಾವಣೆ’ (ಚೇಂಜ್ ವಿಥಿನ್) ಹೆಸರಿನಲ್ಲಿ ಬಾಲಿವುಡ್ ಸೆಲಬ್ರಿಟಿಗಳನ್ನು ಭೇಟಿಯಾಗಿದ್ದರು. ಬಾಲಿವುಡ್ ನಟರೊಂದಿಗಿನ ಮೋದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದವು. ಮತ್ತು  ಎಲ್ಲರ  ಟ್ವೀಟ್​ಗಳಿಗೂ ಉತ್ತರಿಸಿರುವ ಮೋದಿಕೂಡ ಚಿತ್ರರಂಗದ ದಿಗ್ಗಜರೊಂದಿಗೆ ಶನಿವಾರದ ಸಂಜೆಯನ್ನು ಕಳೆದಿರುವುದುಖುಷಿ ನೀಡಿದೆ ಎಂದು ಉತ್ತರಿಸಿದ್ದಾರೆ. ಆದರೆ, ಬಾಲಿವುಡ್ ಚಿತ್ರರಂಗವನ್ನು ಮಾತ್ರ ಭಾರತೀಯ ಚಿತ್ರರಂಗವೆಂದು ಪರಿಗಣಿಸುತ್ತಿರುವುದಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ…

  • ರಾಜಕೀಯ

    ಸುಮಲತಾ ಅಂಬರೀಷ್ ರವರಿಂದ ಸಿಎಂ ಕುಮಾರಸ್ವಾಮಿಗೆ ತಿರುಗೇಟು?ಏಕೆ ಗೊತ್ತಾ?

    ಸದ್ಯ ರಾಜ್ಯ ರಾಜಕೀಯದ ಹಾಟ್ ಸ್ಪಾಟ್ ಆಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳತೊಡಗಿವೆ. ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ತಿಳಿಸಿದ್ದು, ಬಿರುಸಿನ ಓಡಾಟ ನಡೆಸಿದ್ದಾರೆ. ಪುತ್ರ ನಿಖಿಲ್ ಕುಮಾರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಾಗಿದ್ದು ಪೂರ್ವ ತಯಾರಿ ನಡೆಸಿದ್ದಾರೆ. ಈ ಚುನಾವಣೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯದಲ್ಲಿ ರಾಜಕೀಯ…

  • ತಂತ್ರಜ್ಞಾನ

    ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂದೇಶ ಕಳುಹಿಸಲು ಹೊಸ ಆ್ಯಪ್‌..!ತಿಳಿಯಲು ಈ ಲೇಖನ ಓದಿ…

    ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಹೊಸ ಆ್ಯಪ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ಆ್ಯಪ್‌ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ಗೆ ಅಳವಡಿಸಬಹುದು. ನೆಟ್‌ವರ್ಕ್‌ ಇಲ್ಲದಿದ್ದರೂ ಈ ಆ್ಯಪ್‌ ಹಲವು ಕಿಲೋ ಮೀಟರ್‌ಗಳ ದೂರದವರೆಗೂ ವೈ–ಫೈ ಸಿಗ್ನಲ್‌ ಹೊರಸೂಸುತ್ತದೆ.

  • ದೇಗುಲ ದರ್ಶನ

    ಕಣ್ಮರೆಯಾಗಿ ಮತ್ತೆ ಪ್ರತ್ಯಕ್ಷ ವಾಗುವ ಶಿವನ ದೇವಾಲಯ. ಈ ವೇಳೆ ಹೊಳಗೆ ಹೋಗುವ ಹಾಗಿಲ್ಲ.!

    ಸ್ತಂಭೇಶ್ವರ ಮಹಾದೇವ ದೇವಸ್ಥಾನವು 150 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ. ಇದು ಗುಜರಾತ್ನ ವಡೋದರಾ ಬಳಿಯ ಕವಿ ಕಾಂಬೊಯ್ ಪಟ್ಟಣದಲ್ಲಿದ್ದು, ವಡೋದರಾ ಬಳಿಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. 4 ಅಡಿ ಎತ್ತರದ ಶಿವಲಿಂಗ ಸ್ತಂಭೇಶ್ವರ ಮಹಾದೇವ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ವಾಸ್ತುಶಿಲ್ಪವು ತುಂಬಾ ಸರಳವಾಗಿದ್ದು, ದೇವಾಲಯವು ಮುಖ್ಯವಾಗಿ ಸ್ತಂಭಗಳ ಮೇಲೆ ಬೆಂಬಲಿತವಾಗಿದೆ. ಆದ್ದರಿಂದ ಇದನ್ನು ‘ಸ್ತಂಭೇಶ್ವರ ಮಹಾದೇವ’ ಎಂದು ಕರೆಯುತ್ತಾರೆ. ಕಣ್ಮರೆಯಾಗುವ ಶಿವ ದೇವಾಲಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ವಿಶಿಷ್ಟವಾಗಿದೆ. ಏಕೆಂದರೆ ಈ…