ಉಪಯುಕ್ತ ಮಾಹಿತಿ

ಮನೆಯಲ್ಲಿ ನೀವು ಇಡಬೇಕಾದ ವಾಸ್ತು ಗಿಡಗಳು ಮತ್ತು ಅದರ ಪರಿಣಾಮಗಳು; ನೀವು ತಪ್ಪದೇ ತಿಳಿಯಬೇಕಾದ ಸಂಗತಿಗಳು….

864

ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. 
ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ ಕೆಲವೊಂದು ವಾಸ್ತು ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಸಮಸ್ಯೆಗಳು ಪರಿಹಾರವಾಗುವುದು. ಹಣಕ್ಕಾಗಿ ಇರುವಂತಹ ಕೆಲವೊಂದು ವಾಸ್ತು ಸಸ್ಯಗಳು ಯಾವುದೆಂದರೆ ಮನಿ ಪ್ಲ್ಯಾಂಟ್, ಅದೃಷ್ಟದ ಬಿದಿರು, ಪೀಸ್ ಲಿಲಿ, ಸಿಂಗೊನಿಯಮ್ ಗಳು, ಅಥುರಿಯಮ್ ಗಳು ಮತ್ತು ಜೇಡ್ ಗಳು ಇದರಲ್ಲಿದೆ. ಹಣವನ್ನು ಆಹ್ವಾನಿಸಲು ಅದೃಷ್ಟದ ಬಿದಿರು ಮತ್ತು ಮನಿ ಪ್ಲ್ಯಾಂಟ್ ನ್ನು ಮನೆಯಲ್ಲಿ ಇಡುವುದು ಸಾಮಾನ್ಯ.

ವಾಸ್ತು ಪ್ರಕಾರ ಅದೃಷ್ಟದ ಬಿದಿರು : ಫೆಂಗ್ ಶೂಯಿ ಅದೃಷ್ಟದ ಬಿದಿರನ್ನು ಮನೆಯಲ್ಲಿ ಇಡಬೇಕು ಎಂದು ಸಲಹೆ ನೀಡುತ್ತದೆ. ಇದು ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿದೆ. ಇದನ್ನು ನೀವು ಖರೀದಿ ಮಾಡುವುದು ತುಂಬಾ ಒಳ್ಳೆಯದು. ಇದು ಆನ್ ಲೈನ್ ಮತ್ತು ಅಂಗಡಿಯಲ್ಲೂ ಸಿಗುವುದು. ಇದು ನೀರು ಮತ್ತು ಮಣ್ಣಿನಲ್ಲಿ ಎರಡರಲ್ಲೂ ಬೆಳೆಯುವುದು. ಇದು ಚಿಕಣಿ ಬಿದಿರಿಗೆ ಕಂಡುಬಂದರೂ ಅದು ಡ್ರಯಕೆನಾ ಕುಲಕ್ಕೆ ಸೇರಿರುವಂತದ್ದಾಗಿದೆ. ಆಫ್ರಿಕಾ ಮೂಲದಿಂದ ಬಂದಿರುವಂತಹ ಇದರ ಎರಡು ವೈಜ್ಞಾನಿಕವಾದ ಹೆಸರುಗಳೆಂದರೆ ಡ್ರಾಕನೆ ಬ್ರಾಯುನಿ ಅಥವಾ ಡ್ರಾಕನೆ ಸ್ಯಾಂಡೇರಿಯಾನಾ. ಇದು ಮನೆಯ ಒಳಗಡೆ ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುವುದು. ಆದರೆ ಇದರ ನಿರ್ವಹಣೆ ಮತ್ತು ಆರೈಕೆಯು ತುಂಬಾ ಸುಲಭ.

ಹಣಕ್ಕಾಗಿ ಅದೃಷ್ಟದ ಬಿದಿರನ್ನು ಇಡಲು ಕೆಲವು ಸಲಹೆಗಳು •ಅದೃಷ್ಟದ ಬಿದಿರಿನಲ್ಲಿ ಎಲ್ಲಾ ಐದು ಅಂಶಗಳಾಗಿರುವಂತಹ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವು ಪ್ರತಿನಿಧಿಸುವ ಕಾರಣದಿಂದಾಗಿ ಇದು ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುವುದು. •ಮನೆಯಲ್ಲಿ ಲಕ್ಷ್ಮೀಯು ಬರಬೇಕೆಂದಿದ್ದರೆ ಆಗ ನೀವು ಈ ಅದೃಷ್ಟದ ಬಿದಿರನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. •ಉಡುಗೊರೆಯಾಗಿ ಇದನ್ನು ಪಡೆದಾಗ ಅದು ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಅದೃಷ್ಟ ತರುವುದು. •ಅದೃಷ್ಟದ ಬಿದಿರನ್ನು ಇಡುವ ವೇಳೆ ಇದರ ಸುತ್ತಲು ನಕಾರಾತ್ಮಕವಾದ ವಸ್ತುಗಳನ್ನು ಇಡಬೇಡಿ. ಅದೇನೆಂದರೆ ತುಂಡಾಗಿರುವ ಅಥವಾ ಕೆಲಸಕ್ಕೆ ಬಾರದ ವಸ್ತುಗಳನ್ನು ಇಡಬೇಡಿ.

ಮನಿಪ್ಲ್ಯಾಂಟ್ ನ್ನು ಮನೆಯಲ್ಲಿ ಇಡಲು ಕೆಲವೊಂದು ಸಲಹೆಗಳು •ಮನೆಯ ಹಾಲ್ ಅಥವಾ ವಾಸಿಸುವ ಕೊಠಡಿಯ ಆಗ್ನೇಯ ಭಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಡಲು ಸರಿಯಾದ ಜಾಗವಾಗಿದೆ. ಮನೆಯ ಆಗ್ನೇಯ ದಿಕ್ಕಿನ ಯಜಮಾನ ಗಣೇಶನಾಗಿರುವನು. ಈ ಪ್ರದೇಶದ ಆಡಳಿತಾಧಿಕಾರಿ ಶುಕ್ರ. ಗಣೇಶನು ಬರುವಂತಹ ತೊಂದರೆಗಳನ್ನು ನಿವಾರಣೆ ಮಾಡುವನು ಮತ್ತು ಶುಕ್ರನು ಸಂಪತ್ತನ್ನು ತರುವನು. ಇದರಿಂದ ಮನೆಯ ಆಗ್ನೇಯ ಭಾಗದಲ್ಲೇ ಈ ಮನಿಪ್ಲ್ಯಾಂಟ್ ನ್ನು ಇಡಬೇಕು. •ಮನೆಯ ಈಶಾನ್ಯ ಭಾಗದಲ್ಲಿ ಯಾವತ್ತಿಗೂ ಮನಿಪ್ಲ್ಯಾಂಟ್ ನ್ನು ಇಡಬಾರದು. ಈ ಭಾಗದ ಆಡಳಿತಾಧಿಕಾರಿ ಗುರು, ಇದು ಶುಕ್ರ ಗ್ರಹದ ಶತ್ರುವಾಗಿದೆ. ಈ ಜಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಟ್ಟರೆ ಅದರಿಂದ ದುರಾದೃಷ್ಟವು ಬರುವುದು. ಮರಗಳನ್ನು ನೆಡುವುದರಿಂದ ಎತ್ತರಕ್ಕೆ ಬೆಳೆಯುವ ಅಶೋಕ, ಬೇವು, ತೆಂಗಿನ ಮರ ಮತ್ತು ಗಿಡಗಳಾದ ತುಳಸಿ ಮತ್ತು ಅರಿಶಿನಗಳು ನಿಮ್ಮ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತವೆ ಹಾಗೂ ಇತರ ಸಸ್ಯಗಳಿಂದ ಎದುರಾಗಬಹುದಾಗಿದ್ದ ಕೆಟ್ಟ ಪ್ರಭಾವವನ್ನೂ ಕಡಿಮೆಗೊಳಿಸುತ್ತವೆ. ಹತ್ತಿಗಿಡ, ರೇಷ್ಮೆ ಹತ್ತಿಗಿಡ (Silky cotton plant) ಮತ್ತು ತಾಳೆ ಮರಗಳು ಮನೆಯ ಆವರಣದಲ್ಲಿರುವುದು ದುರಾದೃಷ್ಟವನ್ನು ತರುತ್ತದೆ ಎಂದು ವಾಸ್ತು ತಿಳಿಸುತ್ತದೆ. ವಿಶೇಷ ಟಿಪ್ಪಣಿ: ಮನೆಯ ಅಕ್ಕಪಕ್ಕ ಯಾವುದೇ ಗಿಡ ಅಥವಾ ಮರ ಸಾಯುತ್ತಿದ್ದರೆ ಅದನ್ನು ಆದಷ್ಟು ಬೇಗ ಅಲ್ಲಿಂದ ತೆಗೆಸಿ. ಒಣಗಿದ ಹೂವುಗಳು ಸಹಾ ದುರಾದೃಷ್ಟವನ್ನು ತರಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(13 ಡಿಸೆಂಬರ್, 2018) ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ…

  • ರಾಜಕೀಯ

    ರಾಜರಾಜೇಶ್ವರಿನಗರ ಮುನಿರತ್ನ VS ಪ್ರಜ್ವಲ್ ರೇವಣ್ಣ ನೀವು ಯಾರನ್ನ ಬೆಂಬಲಿಸುತ್ತೀರಾ..?

    ಮುನಿರತ್ನ ರವರು 2014ರಲ್ಲಿ ನಡೆದ MLA ಎಲೆಕ್ಷನ್ ನಲ್ಲಿ 71064 ವೋಟ್ ಪಡೆದು ಅವರ ಹತ್ತಿರದ ಸ್ಪರ್ದಿ Sri M. Srinivas (ಬಿಜೆಪಿ) ರವರಿಗಿಂತ 20338 ಮತಗಳಿಂದ ಗೆಲವನ್ನು ಪಡೆದರು.

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892.ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ  ಹಣಕಾಸಿನಲ್ಲಿ ಸುಧಾರಣೆ ನೀವು ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಅನುಕೂಲಕರವಾಗಿಸುತ್ತದೆ. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಯಾರಾದರೂ ನಿಮ್ಮನ್ನು…

  • ಜೀವನಶೈಲಿ

    ತನ್ನ ಸಂಗಾತಿ ಜೋತೆಗಿದ್ರೂ ಬೇರೆ ಹುಡುಗಿಯರನ್ನು ನೋಡುವ ಅಭ್ಯಾಸ ಏಕೆ ಗೊತ್ತಾ..?

    ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ ತೆಗೆದುಕೊಂಡ್ರೆ ಓಕೆ, ಇಲ್ಲದೇ ಇದ್ರೆ ಬ್ರೇಕಪ್ ಕೂಡ ಆಗಿಬಿಡಬಹುದು. ಎಂಥಾ ಸುದೀರ್ಘ ಕಾಲದ ಪ್ರೇಮಮಯ ಸಂಬಂಧವಾಗಿದ್ರೂ ಇತರರ ಕಡೆಗೆ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಸಂಶೋಧಕರು. ಯಾಕೆ ಎಲ್ಲರೂ ಈ ರೀತಿ ಮಾಡ್ತಾರೆ ಅನ್ನೋದಕ್ಕೆ ಕೂಡ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಹಜ. ಮಹಿಳೆ ಸಾಮಾನ್ಯವಾಗಿ…

  • ಉಪಯುಕ್ತ ಮಾಹಿತಿ

    ನೀವು ನಿಂಬೆ ಹಣ್ಣಿನ ರಸ ತೆಗೆದು ಬಿಸಾಡುತ್ತಿರಾ..!ಈ ಲೇಖನ ಓದಿ..

    ಸಾಮಾನ್ಯವಾಗಿ ನಾವು ಎಲ್ಲಾರ ಮನೆಯಲ್ಲಿ ನಿಂಬೆ ಹಣ್ಣು ರಸ ತೆಗೆದು ಕೊಂಡು ಬಿಸಾಡುವುದು ಸಾಮಾನ್ಯವಾಗಿದೆ. ಆದ್ರೆ ನೀವು ಈ ಸ್ಟೋರಿ ನೋಡಿದ್ರೆ ಬಿಸಾಕಲ್ಲ ಬಿಡಿ. ಯಾಕೆ ಅಂದ್ರೆ ಈ ರಸ ಹಿಂಡಿದ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳು ಉಂಟುಗುವುತದೆ ಯಾವುಅಂತೀರಾ ಇಲ್ಲಿವೆ ನೋಡಿ.

  • ಮನರಂಜನೆ

    ಅನುಶ್ರೀಗೆ ಮರೆಯಲಾರದ ಗಿಫ್ಟ್ ಕೊಟ್ಟ ಹನುಮಂತಪ್ಪ..ಸಾರಿ ಕೇಳಿದ ಅನುಶ್ರೀ!

    ಕುರಿಗಾಯಿ ಹನುಮಂತ ಅವರು ಜೀ ಕನ್ನಡ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಹನುಮಂತ ಅವರು ಮನೆ ಮಾತಾಗಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಕೊಡುವುದಾಗಿ ನಿರ್ದೇಶಕ ಯೋಗರಾಜ ಭಟ್ ಈಗಾಗಲೇ ಭರವಸೆ ನೀಡಿದ್ದಾರೆ. ‘ಸರಿಗಮಪ’ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಲಂಬಾಣಿ ಉಡುಗೆ ತಂದುಕೊಡುವಂತೆ ಕೇಳಿಕೊಂಡಿದ್ದರಂತೆ. ಹನುಮಂತ ಅವರ ತಾಯಿ ಲಂಬಾಣಿ ಉಡುಗೆ ತಂದುಕೊಟ್ಟಿದ್ದು, ಅದನ್ನು ಧರಿಸಿ ಸಂತಸ ಹಂಚಿಕೊಂಡ ಅನುಶ್ರೀ ಕ್ಷಮೆ ಕೂಡ ಕೇಳಿದ್ದಾರೆ. ‘ತಮ್ಮ ಹನುಮಂತ…