ಸುದ್ದಿ

ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು ಕಾರಣ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

631

ವರ ಬೋಳುಮಂಡೆಯವನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

ಹುಡುಗಿಯ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡಿದ್ದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಮದುವೆಯನ್ನ ನಿಶ್ಚಯಿಸಿದ್ದರು. ನಿಗದಿಪಡಿಸಿದಂತೆ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು.

ಆದ್ರೆ  ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆಯಬೇಕಿತ್ತು. ಹೀಗಾಗಿ ಅವರು ಪೇಟ ತೆಗೆದಿದ್ದು, ಮುಂದೆ ನಿಂತಿದ್ದ ವಧುಗೆ ಶಾಕ್ ಆಗಿತ್ತು. ತಾನು ಮದುವೆಯಾಗ್ತಿರೋ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ಆಗಲೇ ವಧುವಿಗೆ ಗೊತ್ತಾಗಿದ್ದು. ಯಾಕಂದ್ರೆ ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನ ಫೋಟೋಗಳಲ್ಲಿ ಮಾತ್ರ ನೋಡಿದ್ದಳು.

ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದು, ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗುವಂತೆ ಮಾಡಿದ್ದಾಳೆ. ಎರಡೂ ಕುಟುಂಬದವರು ಎಷ್ಟೇ ಹೇಳಿದ್ರೂ ವಧು ತನ್ನ ನಿರ್ಧಾರ ಬದಲಾಯಿಸಲು ಸಿದ್ಧಳಿರಲಿಲ್ಲ. ಆದ್ರೆ ವರ ರವಿಕುಮಾರ್ ಅಷ್ಟು ದೂರದಿಂದ ಬಂದು, ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು.

ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸೂಚಿಸಿದ್ದರು. ಹೀಗಾಗಿ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ರವಿಕುಮಾರ್‍ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.

  • ಸುದ್ದಿ

    ಸುಮಲತಾ ಅಂಬರೀಶ್ ವಿರುದ್ದ ಶಾಕಿಂಗ್ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ.!

    ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮಾತಿನ ಸಮರ ತಾರಕಕ್ಕೇರಿದೆ. ಸಿಎಂ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಏಟಿಗೆ – ಎದುರೇಟು ನೀಡತೊಡಗಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಸುಮಲತಾ ಅವರ ಕುರಿತಾಗಿ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಪಕ್ಷೇತರ ಅಭ್ಯರ್ಥಿಯ ಭಾಷಣದಲ್ಲಿ ಎಲ್ಲಿಯೂ ಮಂಡ್ಯ ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಪ್ರಸ್ತಾಪವಾಗಿಲ್ಲ. ಅವರಲ್ಲಿ ನೋವಿನ ಛಾಯೆಯೂ ಕಾಣುತ್ತಿಲ್ಲ. ನಾಟಕೀಯವಾಗಿ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ…

  • govt

    ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ

    ಗೃಹಲಕ್ಷ್ಮಿ ಹಣ ಬಾರದಿದ್ದಲ್ಲಿ ಏನು ಮಾಡಬೇಕು…? ಇಲ್ಲಿದೆ ಮಾಹಿತಿ   ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಕೆಲವೊಬ್ಬರ ಬ್ಯಾಂಕ್‌ ಖಾತೆಗೆ ಹಣ ಬಂದಿಲ್ಲ, ಹಾಗಿದ್ದರೆ ಹೇಗೆ ಚೆಕ್‌ ಮಾಡುವುದು? ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆ ಆಗಿದೆಯಾ? ಅಥವಾ ಇಲ್ಲ. ಸಲ್ಲಿಕೆ ಆಗಿದ್ದರೂ ಬ್ಯಾಂಕ್‌ ಖಾತೆಯ ಸಮಸ್ಯೆ ಇದೆಯಾ ಎಂಬುದನ್ನು ಮೊದಲಿಗೆ ತಿಳಿದು ಕೊಳ್ಳಬೇಕಾಗುತ್ತದೆ. ಲಕ್ಷಾಂತರ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದರೂ ಕೂಡ ಇದುವರೆಗೂ ಅಸಂಖ್ಯಾತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. 1.1 ಕೋಟಿ…

  • ಸುದ್ದಿ

    ಅಯೋಧ್ಯೆ ತೀರ್ಪಿಗೆ 27 ವರ್ಷ ಉಪವಾಸ ಮಾಡಿ ಕಾದ ಆಧುನಿಕ ಶಬರಿ.

    ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ…

  • ಆಧ್ಯಾತ್ಮ

    ಹಿ೦ದೂ ಧರ್ಮದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು…ತಿಳಿಯಲು ಈ ಲೇಖನಿ ಓದಿ…

    ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ಸನಾತನ ಧರ್ಮವಾಗಿದೆ. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.

  • ಸುದ್ದಿ

    ಶ್ರೀಮುರಳಿ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ; ‘ಭರಾಟೆ’ ಚಿತ್ರಕ್ಕೆ ಕೌಂಟ್‍ಡೌನ್ ಸ್ಟಾರ್ಟ್..!

    ಸಿನಿಮಾವೊಂದರ ಬಗ್ಗೆ ಬಿಡುಗಡೆಗು  ಮುನ್ನವೇ  ಸಹಜವಾಗಿ ಬರುವ ನಿರೀಕ್ಷೆಯಾ ತೀವ್ರತೆಯಿದೆಯಲ್ಲಾ? ಅದಕ್ಕೆ ಮಾಸ್ಟರ್ ಪೀಸ್‍ನಂಥಾ ಚಿತ್ರಗಳು ಅನೇಕವಿವೆ. ಇತ್ತೀಚಿನ ತಾಜಾ ಮಾದರಿಯಾಗಿ ನಿಲ್ಲುವಂಥಾ ಚಿತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ. ಈ ಟೈಟಲ್ ಅನೌನ್ಸ್ ಮಾಡಿದಗಿನಿಂದಲೇ  ಸೆನ್ಸೇಷನಲ್ ಭರಾಟೆ ಶುರುವಾಗಿ ಹೋಗಿತ್ತು. ರಾಜಸ್ಥಾನದ ಸುಂದರ ಸ್ಥಳಗಲ್ಲಿ , ವಿಭಿನ್ನ ಗೆಟಪ್ನಲ್ಲಿ ಮಿಂಚಿದ್ದ ಶ್ರೀಮುರಳಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಸಿದ್ದರು. ಅದೇ ರಭಸದೊಂದಿಗೆ ಸಾಗಿ ಬಂದಿರೋ ಭರಾಟೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಯುವ ಆವೇಗದ  ಚೇತನ್ ಅವರು ಈ…