ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮತದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡದಿರಿ
ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಂತೆ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಎನ್.ಜಿ.ಓ.ಗಳು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಇಂತಹ ವಂಚನೆ ಪ್ರಕರಣಗಳಿಂದ ಸಾರ್ವಜನಿಕರು ಜಾಗರೂಕರಾಗಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಚುನಾವಣಾ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳಂತೆ ಹಾಗೂ ಐ.ಟಿ ತಂತ್ರಾAಶಗಳ ಮೂಲಕ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದೂರುಗಳು ಮತ್ತು ಆರೋಪಗಳನ್ನು ಮಾಡಲಾಗಿದೆ. ಆದರಿಂದ ಸರ್ಕಾರದಿಂದ ಅಥವಾ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಅಧಿಕೃತಗೊಳಿಸದ ಯಾವುದೇ ಏಜೆನ್ಸಿಯ ಯಾವುದೇ ಚಟುವಟಿಕೆಗಳನ್ನು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವರೆಗೆ ಜಿಲ್ಲೆಯಲ್ಲಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಮತದಾರರ ಹಾಗೂ ವೈಯಕ್ತಿಕ ಡಾಟಾವನ್ನು ಸುರಕ್ಷಿತವಾಗಿರಿಸಲು ಯಾವುದೇ ಮಾಧ್ಯಮದ ಮೂಲಕ ಯಾವುದೇ ರೀತಿಯ ನೇರ ಸಮೀಕ್ಷೆಗಳಲ್ಲಿ ಭಾಗಿಯಾಗುವ ಸಂಸ್ಥೆ/ವ್ಯಕ್ತಿಗಳ ವಿರುದ್ದ ಐ.ಪಿ.ಸಿ ಸೆಕ್ಷನ್ 188 ರಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳವುದಾಗಿ ಆದೇಶದಲ್ಲಿ ಎಚ್ಚರಿಸಲಾಗಿದೆ.
ಸಾರ್ವಜನಿಕರು ಅಂತಹ ಚಟುವಟಿಕೆಗಳ ಬಗ್ಗೆ ಯಾವುದೇ ಕುಂದುಕೊರತೆ ಇದ್ದಲ್ಲಿ ಸಾಕ್ಷಿ ಆಧಾರಗಳೊಂದಿಗೆ ದೂರನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯ ಟೋಲ್ ಫ್ರೀ ಸಂಖ್ಯೆ: 08152-1950 ಮೂಲಕ ತಿಳಿಸಬಹುದು ಹಾಗೂ ಸಾರ್ವಜನಿಕರು ಭಾರತ ಚುನಾವಣಾ ಆಯೋಗದ ಅನುಮೋದಿತ ತಂತ್ರಾAಶಗಳ ಮೂಲಕ ಮಾತ್ರವೇ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಅಥವಾ ಅವರಿಂದ ನೇಮಿಸಲಾದ ಅಧಿಕೃತ ಅಧಿಕಾರಿಗಳಿಗೆ ಮತ್ತು ಬಿ.ಎಲ್.ಓ/ಮತಗಟ್ಟೆ ಹಂತದ ಅಧಿಕಾರಿಗಳಿಗೆ ಮಾತ್ರ ತಮ್ಮ ವೈಯಕ್ತಿಕ ಅಥವಾ ಮತದಾರರ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರಿಗೆ ಕೋಲಾರಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹತ್ತು ರುಪಾಯಿಯ ನಾಣ್ಯವನ್ನು ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.ವ್ಯಾಪಾರಿಗಳು ತಮಗಿರುವ ಗೊಂದಲದಲ್ಲಿ, 10ರುಪಾಯಿಯ ನಾಣ್ಯವನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದಾರೆ.
ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ. ಮೌತ್ ಅಲ್ಸರ್ ಅಥವಾ ಬಾಯಿಯಲ್ಲಾಗುವ ಉಷ್ಣದ ಗುಳ್ಳೆಗಳನ್ನೂ ಕೊತ್ತಂಬರಿ ಸೊಪ್ಪು…
ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಇಬ್ಬರೂ ಕನಸುಗಳನ್ನು ಕಾಣುತ್ತಾರೆ. ಆದರೆ…ತಮ್ಮ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಲ್ಲಿ ಜೀವನ ಪರ್ಯಂತ ಚಿಂತಿಸುತ್ತಾರೆ.
ರಾಜಕೀಯ ಬಿಕ್ಕಟ್ಟಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಐವರು ಶಾಸಕರ ರಾಜೀನಾಮೆ ಮಾತ್ರ ಸ್ವೀಕೃತಗೊಂಡಿದೆ. ಉಳಿದ 8 ಮಂದಿ ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಉಸಿರಾಡಲು ಅವಕಾಶ ಸಿಕ್ಕಿದಂತಾಗಿದೆ. ಸರ್ಕಾರ ರಕ್ಷಿಸಲು ದೋಸ್ತಿ ನಾಯಕರಿಗೆ ಎರಡು, ಮೂರು ದಿನಗಳ ಕಾಲ ಅವಕಾಶ ಸಿಕ್ಕಿದೆ. ಯಾರ ರಾಜೀನಾಮೆ ಸ್ವೀಕೃತ..? ರಾಮಲಿಂಗಾ ರೆಡ್ಡಿ ಆನಂದ್ ಸಿಂಗ್ ಪ್ರತಾಪಗೌಡ ಪಾಟೀಲ್ ಗೋಪಾಲಯ್ಯ ನಾರಾಯಣ ಗೌಡ ಕಾಂಗ್ರೆಸ್ನ ರಾಮಲಿಂಗಾ ರೆಡ್ಡಿ, ಆನಂದ್ ಸಿಂಗ್, ಪ್ರತಾಪಗೌಡ ಪಾಟೀಲ್ ಅವರು…
ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.
ಹಣ್ಣು ತರಕಾರಿಗಳನ್ನು ತಿನ್ನುವುದು ಒಂದು ಅತ್ಯುತ್ತಮ ಅಭ್ಯಾಸವಾಗಿದೆ.ನಿರಂತರವಾಗಿ ತಿನ್ನುವ ಹವ್ಯಾಸ ಉಳ್ಳವರಾಗಿದ್ದರೆ ನೀವು ಸಿಪ್ಪೆಗಳನ್ನು ಎಸೆಯುತ್ತಿರಾ… ನಿಲ್ಲಿ ನಿಲ್ಲಿ ಎಸೆಯಬೇಡಿ ಆ ಸಿಪ್ಪೆಗಳ ಉಪಯೋಗ ನಾವು ಹೇಳ್ತೀವಿ ನಿಮ್ಮ ಸೌಂದರ್ಯ ಕಾಂತಿ ಹೆಚ್ಚಿಸೋಕೆ ಈ ಸಿಪ್ಪೆಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ತಿಳಿಯಿರಿ…..