ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…
ಪುಟ್ಟ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುವ ಹವ್ಯಾಸ ಬೆಳೆಸಿಕೊಂಡರೆ ಅಂತಹ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಏರ್ಪಡುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಕೇವಲ ಸಕ್ಕರೆ ಕಾಯಿಲೆ ಮಾತ್ರವಷ್ಟೇ ಅಲ್ಲ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುತ್ತಿದ್ದರೆ ಅವರ ಕಣ್ಣಿಗೂ ಗಂಭೀರ ಹಾನಿಯಾಗಲಿದ್ದು, ಮಕ್ಕಳ ಮೆದುಳಿನ ನರಮಂಡಲಕ್ಕೂ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಸ್ಮಾರ್ಟ್ ಫೋನ್ ಗಳಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದ್ದು, ಸ್ಮಾರ್ಟ್ ಫೋನ್ ಗಳು ಜನರ ಜೀವನದಲ್ಲಿ ಬೆರೆತು ಹೋಗಿದೆ.
ಇದಕ್ಕೆ ಪೂರಕ ಎಂಬಂತೆ ರಿಯಾಲಿಟಿ ಷೋಗಳ ಅಬ್ಬರ ಮತ್ತು ಫ್ರೀ ಆ್ಯಪ್ ಗಳ ಆಡಂಬರ ಕೂಡ ಮಕ್ಕಳಲ್ಲಿ ಇಂತಹ ಅಪಾಯಕಾರಿ ಬೆಳವಣಿಗೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬದಲಾದ ಜೀವನ ಶೈಲಿ ಹಾಗೂ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪಾಲನೆ ಅಷ್ಟು ಸುಲಭವಲ್ಲ. ಹೀಗಾಗಿ ಇತ್ತೀಚಿನ ಪೋಷಕರು ಮಕ್ಕಳು ಅತ್ತಾಗ, ಮಕ್ಕಳಿಗೆ ಹಸಿವಾದಾಗ ಸ್ಮಾರ್ಟ್ ಫೋನ್ ತೋರಿಸಿ ಸಮಾಧಾನ ಮಾಡುವಂತಹ ಪರಿಪಾಠ ತಾನೇ ತಾನಾಗಿ ಬೆಳೆದಿದೆ. ಇದೂ ಕೂಡ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಿ ಓದಿ :- ನಿಮ್ಮ ಕಣ್ಣುಗಳ ಆರೋಗ್ಯದ ಕಾಳಜಿ ಇದ್ದರೆ ಇದನ್ನು ಓದಿ…..

ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಣೆಯಿಂದಾಗಿ ಮಕ್ಕಳ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬಿದ್ದು, ಅವುಗಳ ನರಗಳಿಗೆ ಹಾನಿಯಾಗುತ್ತದೆ. ಅಂತೆಯೇ ಮೆದುಳಿನ ನರಮಂಡಲ ವ್ಯವಸ್ಥೆಯ ಕಾರ್ಯದ ಸಾಮರ್ಥ್ಯದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇನ್ನು ಪ್ರತಿನಿತ್ಯ ಮಕ್ಕಳು ಒಂದು ಗಂಟೆಗೂ ಅಧಿಕ ಸಮಯ ಸ್ಮಾರ್ಟ್ ಫೋನ್ ಮತ್ತು ಟಿವಿ ನೋಡುತ್ತ ಮಗ್ನರಾಗಿದ್ದರೆ ಅಂತಹ ಮಕ್ಕಳಲ್ಲಿ ಖಂಡಿತಾ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು.
ಸತತವಾಗಿ ಟಿವಿ ಮತ್ತು ಸ್ಮಾರ್ಟ್ ಫೋನ್ ನೋಡುವುದರಿಂದ ಮಕ್ಕಳ ವಯಸ್ಸಿಗೆ ಸಂಬಂಧಿಸಿದ ನೋವುಗಳು ಆರಂಭವಾಗುತ್ತವೆ.
ಇದೇ ಮುಂದುವರೆದರೆ ಮಕ್ಕಳು ಯುವ ಹಂತಕ್ಕೆ ಬರುವ ವೇಳೆಗೆ ಸಕ್ಕರೆ ಕಾಯಿಲೆಗೆ ತುತ್ತಾಗಿರುತ್ತಾರೆ. ಇಂತಹ ಸಾವಿರಾರು ಪ್ರಕರಣಗಳು ವಿಶ್ವಾದ್ಯಂತ ವರದಿಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈವರೆಗೂ ಮಕ್ಕಳ ದೈಹಿಕ ಚಟುವಟಿಕೆ, ಆಹಾರ ವ್ಯವಸ್ಥೆ ಮತ್ತು ಕುಟುಂಬದ ಆರೋಗ್ಯ ಇತಿಹಾಸದಿಂದ ಮಧುಮೇಹ ಖಾಯಿಲೆಯನ್ನು ಪರಿಗಣಿಸಲಾಗುತ್ತಿತ್ತು. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಸ್ಮಾರ್ಟ್ ಗ್ಯಾಜೆಟ್ ಗಳು ಕೂಡ ಪರಿಣಾಮ ಬೀರುತ್ತಿವೆ.
ಈ ಬಗ್ಗೆ ತಜ್ಞರು ಸುಮಾರು 4500 ಮಕ್ಕಳ ಜೀವನ ಶೈಲಿಯನ್ನು ಅಧ್ಯಯನ ಮಾಡಿದ್ದು, ಈ ಪೈಕಿ ಹೆಚ್ಚು ಹೊತ್ತು ಸ್ಮಾರ್ಟ್ ಗ್ಯಾಜೆಟ್ ಗಳಾದ ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್, ಗೇಮರ್ ಗಳಲ್ಲಿ ಹೆಚ್ಚು ಹೊತ್ತು ಕಳೆಯುವ ಮಕ್ಕಳಲ್ಲಿ ರೋಗದ ಅಪಾಯ ಹೆಚ್ಚಾಗಿತ್ತು.
ಇನ್ನು ಈ ಪೈಕಿ ಶೇ.37ರಷ್ಟು ಮಕ್ಕಳು ಮಾತ್ರ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುತ್ತಿದ್ದು, ಇಂತಹ ಮಕ್ಕಳಲ್ಲಿ ರೋಗದ ಅಪಾಯ ಕಡಿಮೆ ಕಂಡುಬಂದಿದೆ.

ಇನ್ನು ಶೇ.28ರಷ್ಟು ಮಕ್ಕಳು 1-2 ಗಂಟೆ ಅವಧಿ ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡಿದರೆ, ಶೇ.13 ರಷ್ಟು ಮಕ್ಕಳು 2-3 ಗಂಟೆ ಅವಧಿಯವರೆಗೆ ಮತ್ತು ಶೇ.18ರಷ್ಟು ಮಕ್ಕಳು 3-4 ಗಂಟೆ ಹೊತ್ತು ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ.
ಈ ಪೈಕಿ 3-4 ಗಂಟೆ ಹೊತ್ತು ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುವ ಮಕ್ಕಳಲ್ಲಿ ಟೈಪ್-2 ಸಕ್ಕರೆ ಕಾಯಿಲೆ ಅಪಾಯ ಹೆಚ್ಚಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ
ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ. ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ….
ನಮ್ಮ ಭಾರತೀಯ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸ್ತೋತ್ರ ಮತ್ತು ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ.
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಗಂಡ_ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು. ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ..? ಗಂಡ ಕಿಟಕಿಯಿಂದ ಹೊರಗೆ…
ಬಾಯಿ ಹುಣ್ಣು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಆಹಾರ ಸೇವನೆಗೂ ಇದು ಅವಕಾಶ ನೀಡುವುದಿಲ್ಲ. ಇದು ಕೆಲವೊಮ್ಮೆ ಹಲವಾರು ದಿನಗಳ ಕಾಲ ಬಾಯಿಯಲ್ಲಿ ನೋವುಂಟು ಮಾಡುತ್ತ ಲಿರುತ್ತದೆ. ಇಂತಹ ಸಮಯದಲ್ಲಿ ಇದನ್ನು ನಿವಾರಣೆ ಮಾಡಲು ನೀವು ತುಂಬಾ ಶ್ರಮ ಪಟ್ಟಿರಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿ ಬಾಯಿಯ ಹುಣ್ಣು ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆ : ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು…
ದಿನಬೆಳಗಾದ್ರೆ ನಾವು ಕನ್ನಡಿಗರು ನಮ್ಮ ಕರ್ನಾಟಕ, ಭಾಷೆ ಕನ್ನಡದ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ. ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ.