ಉಪಯುಕ್ತ ಮಾಹಿತಿ, ವಿಧ್ಯಾಭ್ಯಾಸ

ಮಕ್ಕಳು ಓದಿದ್ದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೀಗೆ ಮಾಡಿದರೆ ಚೆನ್ನಾಗಿ ನೆನಪಿರುತ್ತದೆ..!ತಿಳಿಯಲು ಇದನ್ನು ಓದಿ ..

369

ನಿಮ್ಮ ಮಕ್ಕಳು ಕೂಡ ವಸ್ತು ಅಥವಾ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗಿದ್ದಾರೆಯೇ? ಹೌದು ಎಂದಾದರೆ ಅದರ ಬಗ್ಗೆ ಟೆನ್ಶನ್‌ ಮಾಡಬೇಡಿ. ಈ ಸಮಸ್ಯೆಗೆ ಪರಿಹಾರವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ಯಾವುದೆ ವಿಷಯವನ್ನು ಅರ್ಥಮಾಡಿಕೊಳ್ಳಲು ಅಥವಾ ಅದನ್ನು ನೆನಪು ಮಾಡಿಕೊಳ್ಳಲು ಕಷ್ಟವಾದರೆ, ಅವರಿಗೆ ಅದನ್ನು ಸ್ವಲ್ಪ ಜೋರಾಗಿ ಓದಲು ಹೇಳಿ.

ಹೆಚ್ಚಾಗಿ ಮಕ್ಕಳ ಮನಸ್ಸಿನಲ್ಲಿ ಎಕ್ಸಾಮ್‌ ಬಗ್ಗೆ ಹೆಚ್ಚು ಪ್ರೆಶರ್‌ ಇರುತ್ತದೆ. ಈ ಭಯದಿಂದಾಗಿ ಮಕ್ಕಳು ಎಲ್ಲಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಆದರೆ ಅದೆ ವಿಷಯವನ್ನು ಅವರು ಸ್ವಲ್ಪ ಜೋರಾಗಿ ಓದಿದರೆ ಅವರ ಕಂಠವು ಸ್ಪಷ್ಟವಾಗುತ್ತದೆ ಜೊತೆಗೆ ಅವರಿಗೆ ವಿಷಯಗಳು ನೆನಪಿನಲ್ಲಿ ಉಳಿಯಲು ಸಹ ಸಹಾಯಕವಾಗುತ್ತದೆ.

ಈ ಸಂಶೋಧನೆಯಲ್ಲಿ ತಿಳಿಸಿದಂತೆ ಮಾತನಾಡುವುದು ಹಾಗೂ ಆ ಮಾತನ್ನು ತಾನಾಗಿ ಕೇಳುವುದು ಯಾವುದೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಪ್ರೊಡಕ್ಷನ್‌ ಇಫೆಕ್ಟ್‌‌ ಎಂದು ಕರೆಯಲಾಗುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಮುಖ್ಯವಾಗಿದೆ ಎಂದು ಹೇಳಲಾಗುತ್ತದೆ.

ಈ ಪ್ರೊಡಕ್ಷನ್‌ ಇಫೆಕ್ಟ್‌ನ ಪರಿಣಾಮ ಪ್ರಭಾವಶಾಲಿಯಾಗಿರುತ್ತದೆ. ಯಾಕೆಂದರೆ ತಾವು ಹೇಳಿದ ಶಬ್ಧಗಳನ್ನು ಮತ್ತೆ ಕೇಳಿದಾಗ ಮೆದುಳು ಇನ್ನಷ್ಟು ಚುರುಕಾಗುತ್ತದೆ. ನಂತರ ಅದು ಮೆದುಳಿನಲ್ಲಿ ಹೇಗಾದರು ಫೀಡ್‌ ಆಗುತ್ತದೆ.

ಕೆನಡಾ ಯುನಿವರ್ಸಿಟಿ ಆಫ್‌ ವಾಟರಲುನ ಪ್ರೊಫೇಸರ್‌ ಕೊಲಿನ್‌ ಎಂ ಮೆಕ್‌ಲಾಯ್ಡ್‌ ಹೇಳುವಂತೆ ನಾವು ಯಾವುದೆ ಶಬ್ಧದಲ್ಲಿ ಕ್ರಿಯೆಯನ್ನು ಸೇರಿಸಿದರೆ ಅದನ್ನು ನಮ್ಮ ಮೆದುಳು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇದರಿಂದ ಆ ಶಬ್ಧಗಳು ತುಂಬಾ ಸಮಯದವರೆಗೂ ನೆನಪಿನಲ್ಲಿರುತ್ತವೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಯಾವುದೇ ಹೊಸ ಗಡಿಯಾರಗಳನ್ನ ನೋಡಿದಾಗ ಅದರಲ್ಲಿ 10:10 ಟೈಮ್ ಗೆ ನಿಂತಿರುತ್ತದೆ ಯಾಕೆ ಗೊತ್ತಾ?

    ಹೌದು ನೀವು ಗಮನಿಸಿರಬಹುದು ನೀವು ಯಾವುದೇ ಗಡಿಯಾರಗಳನ್ನು ತರಲು ಅಂಗಡಿಗಳಿಗೆ ಹೋದಾಗ ಆ ಎಲ್ಲ ಗಡಿಯಾರಗಳು 10:10 ಸಮಯವನ್ನು ತೋರಿಸುತ್ತದೆ ಅಂದರೆ ಗಡಿಯಾರ ರೆಡಿಯಾಗಿ ಬಂದಿರುವಾಗ ಎಲ್ಲವು ಕೂಡ 10 :10 ಸಮಯದಲ್ಲಿ ನಿಂತಿರುತ್ತದೆ, ಅದು ಯಾಕೆ ಅನ್ನೋದು ನಿಮಗೆ ತಿಳಿಯದೆ ಇರಬಹುದು ಆದ್ರೆ ಇದರ ಹಿಂದಿದೆ ಕೆಲವು ಇಂಟ್ರೆಸ್ಟಿಂಗ್ ವಿಚಾರ ಅದು ಏನು ಅನ್ನೋದನ್ನ ಮುಂದೆ ನೋಡಿ. ನೀವು ಇದನ್ನು ಗಮನಿಸಿರಬಹುದು ಒಂದು ವೇಳೆ ಗಮನಿಸದೆ ಇದ್ರೆ ನೀವು ಒಮ್ಮೆ ಯಾವಾಗಲು ಗಡಿಯಾರದ ಅಂಗಡಿಗೆ ಹೋದಾಗ…

  • ಸ್ಪೂರ್ತಿ

    ಸಂಕಷ್ಟದಲ್ಲಿದ್ದಗಲೇ ಕೈ ಬಿಟ್ಟ ಸಿ ಎಂ ಧೋಸ್ತಿ….!

    ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್‍ನಲ್ಲಿ ಇರಲಿದ್ದಾರೆ. ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ

    ಕೋಲಾರ: ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯ, ರಾಯಲ್ಪಾಡು ಹೋಬಳಿ, ಎ.ಕೊತ್ತೂರು ಗ್ರಾಮದ ನವೀನ್ ಕುಮಾರ್ ಬಿನ್ ರವಣಪ್ಪ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆ ನಿರೀಕ್ಷಕರಾದ ಸಿ.ರವಿಕುಮಾರ್ 6 ಮತ್ತು 16 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆಸಿದ…

  • ದೇಗುಲ ದರ್ಶನ

    ಅಚ್ಚರಿ ಮೂಡಿಸುವ ಸಹಸ್ರಾರು ಶಿವಲಿಂಗಗಳು..!ಎಲ್ಲಿ ಗೊತ್ತಾ.?ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಶೇರ್ ಮಾಡಿ…

    ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ…

  • ಸಿನಿಮಾ

    ಒಳ್ಳೆ ಹುಡುಗ ಪ್ರಥಮ್’ನ ಹುಚ್ಚಾಟ!ಭುವನ್ ತೊಡೆ ಕಚ್ಚಿದ ಪ್ರಥಮ್! ಅಲ್ಲಿ ನಡೆದಿದ್ದಾದರು ಏನು ಗೊತ್ತಾ?

    ಒಳ್ಳೆ ಹುಡುಗ ಪ್ರಥಮ್ ಹಾಗೂ ನಟ ಭುವನ್ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ ಜಗಳವಾಗಿದ್ದು, ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆಂದು ಭುವನ್ ಆರೋಪ ಮಾಡಿದ್ದಾರೆ.

  • ಆರೋಗ್ಯ

    ಗರ್ಭಿಣಿ ಸ್ತ್ರೀಯರು ಇವನ್ನು ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಅಪಾಯ! ಈ ಲೇಖನಿ ಓದಿ…

    ಗರ್ಭಿಣಿ ಸ್ತ್ರೀಯರು ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.