ಸಿನಿಮಾ

ಮಂಡ್ಯದ ಗಂಡು ತಮ್ಮ ಹುಟ್ಟುಹಬ್ಬದಲ್ಲಿ ಅಭಿಮಾನಿಗಳಿಗೆ ಹೇಳಿದ್ದಾದರೂ ಏನು ???

1108

ಹಿರಿಯ ನಟ ಕಮ್ ಶಾಸಕ ರೆಬೆಲ್ ಸ್ಟಾರ್ ಅಂಬರೀಶ್‍ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. 65 ನೇ ವರ್ಷಕ್ಕೆ ಕಾಲಿಟ್ಟಿರೋ ಅಂಬರೀಶ್ ಇತ್ತೀಚೆಗೆ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲವಾದ್ರೂ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಮತ್ತು ರಾಜಕೀಯದಲ್ಲಿ ಅಪಾರ ಅಭಿಮಾನಿಗಳನ್ನ ಪಡೆದಿರುವ ಅಂಬರೀಶ್ ಇಂದು ಜೆ.ಪಿ.ನಗರದ ತಮ್ಮ ಸ್ವಗೃಹದಲ್ಲಿ ನೂರಾರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ನಾನು ಅಭಿಮಾನಿಗಳಿಗೊಸ್ಕರ ಏನು ಮಾಡಿಲ್ಲ. ಇವತ್ತು ನಾನು ನನ್ನ ಕುಟುಂಬ ಚನ್ನಾಗಿದ್ದೀವಿ ಅಂದ್ರೆ ಅದಕ್ಕೆ ನಿಮ್ಮ ಪ್ರೀತಿ ಕಾರಣ ಅಂತಾ ಬಂದಿದ್ದ ನೂರಾರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ರು.

ತಮ್ಮ ನೇರ ನುಡಿ ಮತ್ತು ವ್ಯಕ್ತಿತ್ವದಿಂದ ರೆಬೆಲ್ ಸ್ಟಾರ್ ಎಂದು ಕರೆಸಿಕೊಳ್ಳುವ ಅಂಬರೀಶ್ ಅವರಿಗೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಶುಭಾಶಯ ತಿಳಿಸಿದ್ದಾರೆ. ಇತ್ತ ತವರು  ಜಿಲ್ಲೆ ಮಂಡ್ಯದಲ್ಲೂ ಅಭಿಮಾನಿಗಳು ಕೇಕ್ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇಲ್ಲಿ ಓದಿ :-ಸುದೀಪ್ ಹೇರ್ ಸ್ಟೈಲ್ ಕಾಪಿ ಮಾಡಿದ ಬಾಲಿವುಡ್ ನಟ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ