ದಿನಕ್ಕೊಂದು ನೀತಿ ಕಥೆ

ಭೂಮಿ ಮೇಲೆ ಯಾರು ಹೆಚ್ಚು ಸುಖೀ?ರಾಜನಿಗೆ ಕಾಡಿದ ಈ ಪ್ರಶ್ನೆಗೆ ಉತ್ತರ ಕೊಟ್ಟವರು ಯಾರು ಗೊತ್ತಾ..?ತಿಳಿಯಲು ಈ ಕಥೆ ಓದಿ…

493

ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ. ರಾಜ್ಯದ ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ, ಅಲ್ಲಿನ ಜನರನ್ನು ಮಾತಾಡಿಸುತ್ತಾ, ಅವರ ಕಷ್ಟ-ಸುಖಗಳನ್ನು, ಆಲಿಸುತ್ತಾ, ಸಮಾಧಾನವನ್ನೋ, ಪರಿಹಾರವನ್ನೋ ಹೇಳುತ್ತಾ ನಡೆದ.

ಒಂದು ರಾತ್ರಿ ದೂರದ ಹಳ್ಳಿಯೊಂದರ ಜಗಲಿಯಲ್ಲಿ ಕುಳಿತು ಆನಂದದಿಂದ ಹಾಡುತ್ತಿದ್ದ ರೈತನೊಬ್ಬ ಕಾಣಿಸಿದ. ಮಾರುವೇಷದಲ್ಲಿದ್ದ ರಾಜನಿಗೆ ಆತನನ್ನು ಕಂಡು ಅಚ್ಚರಿಯಾಯಿತು. ಆತನ ಕುಶಲ ವಿಚಾರಿಸಿ, ಬಹಳ ಸಂತೋಷದಿಂದ ಹಾಡುತ್ತಿರುವ ಕಾರಣ ಕೇಳಿದ. ಅದಕ್ಕೆ ರೈತನ ಉತ್ತರ ಹೀಗಿತ್ತು; “ದಿನವೂ ಕಷ್ಟಪಟ್ಟು ಹೊಲದಲ್ಲಿ ದುಡಿಯುತ್ತೇನೆ. ಭಗವಂತನ ದಯೆಯಿಂದ ಸಿಕ್ಕ ಫ‌ಲದಲ್ಲಿ ಅರ್ಧ ಭಾಗವನ್ನು ಮಾತ್ರ ನನ್ನ ದೈನಂದಿನ ಜೀವನದ ನಿರ್ವಹಣೆಗೆ ಖರ್ಚು ಮಾಡುತ್ತೇನೆ. ಉಳಿದ ಅರ್ಧಭಾಗದಲ್ಲಿ ಕಾಲು ಭಾಗವನ್ನು ಸಾಲ ತೀರಿಸಲು, ಇನ್ನುಳಿದ ಕಾಲು ಭಾಗವನ್ನು ಸಾಲ ಕೊಡುವುದಕ್ಕೂ ವ್ಯಯಿಸುತ್ತೇನೆ. ಹೀಗಾಗಿ ನನ್ನ ಆದಾಯದ ಮಿತಿಯಲ್ಲಿ ನಾನು ಜೀವಿಸುತ್ತಾ ನನ್ನ ಕುಟುಂಬದವರೊಟ್ಟಿಗೆ ಸುಖ- ಸಂತೋಷದಿಂದಿದ್ದೇನೆ’ ಎಂದ.

ರೈತನ ಈ ಮಾತು ರಾಜನಿಗೆ ಒಗಟಾಗಿ ಕಂಡಿತು. “ಸಾಲ ಕೊಡುವುದು, ಸಾಲ ತೀರಿಸುವುದು ಹೀಗಂದರೇನು? ಕೊಂಚ ಬಿಡಿಸಿ ಹೇಳು ಮಹರಾಯ’ ಎಂದ. ರಾಜನ ಮಾತಿಗೆ ನಗುತ್ತ ರೈತನೆಂದ; “ಸಾಲ ಕೊಡುವುದೆಂದರೆ, ನನ್ನ ದುಡಿಮೆಯ ಕಾಲು ಭಾಗವನ್ನು ನಾನು ನನ್ನ ತಂದೆ- ತಾಯಿಯರನ್ನು ಸಾಕಲು ವ್ಯಯಿಸುತ್ತೇನೆ. ಕಾರಣ ಅವರು ನನ್ನನ್ನು ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ- ಸಲಹಿ ದೊಡ್ಡವನನ್ನಾಗಿ ಮಾಡಿ¨ªಾರೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ವೃದ್ಧರಾದ ಅವರನ್ನು ನೋಡಿಕೊಳ್ಳುವುದು ನನ್ನ ಹೊಣೆ. ಇದು ನಾನು ಪಡೆದ ಸಾಲ ತೀರಿಸುವ ರೀತಿ. ಇನ್ನು ನಿಮ್ಮ ಅನುಮಾನ ಸಾಲ ಕೊಡುವ ಕುರಿತದ್ದು; ಅದೂ ಹೀಗೆಯೇ, ನಾನು ನನ್ನ ಮಕ್ಕಳನ್ನು ಸಾಕಿ-ಸಲಹಿ, ಸಶಕ್ತರನ್ನಾಗಿ ಮಾಡುತ್ತಿದ್ದೇನೆ. ಇದು ಒಂದು ರೀತಿ ಸಾಲ ಕೊಟ್ಟಂತೆ; ಅಂದರೆ ಅವರು ಮುಂದೆ ನನಗೆ ಮತ್ತು ನನ್ನ ಹೆಂಡತಿಗೆ ವಯಸ್ಸಾದಾಗ ದಿಕ್ಕಾಗುತ್ತಾರೆ. ಇನ್ನು ಉಳಿದ ಅರ್ಧಭಾಗದಲ್ಲಿ ನನ್ನ ದೈನಂದಿನ ಜೀವನ ಹೇಗೋ ಸಾಗುತ್ತದೆ.

ಹೀಗಾಗಿ ನನ್ನ ನೆಮ್ಮದಿಯ ಜೀವನಕ್ಕೆ ಭಂಗವಿಲ್ಲ’ ಎಂದು ನಗೆ ಬೀರಿದ. ರೈತನ ಜೀವನೋತ್ಸಾಹದ ಮಾತು ರಾಜನಲ್ಲಿ ಹೊಸ ಅರಿವನ್ನೇ ಹುಟ್ಟಿಸಿತು. ಸರಳ ಜೀವನ ಹಾಗೂ ಇದ್ದುದರ ತೃಪ್ತಿ ಹೊಂದುವ ಗುಣ ಇವೇ ಬದುಕಿನ ಸುಖ-ಸಂತೋಷದ ಮೂಲ ಎನ್ನುವ ಸತ್ಯ ಗೊತ್ತಾಯಿತು. ಆಗಲೇ ರಾಜನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರವೂ ದೊರಕಿತು.

ಮೂಲ:- 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೋಲ್ ಹಾಗೂ ಟ್ಯಾಕ್ಸ್ ಹಣ ಉಳಿಸಲು ಈ ವ್ಯಕ್ತಿ ಮಾಡಿದ ಖತರ್ನಾಕ್ ಐಡಿಯಾ ಕೇಳಿದ್ರೆ ಶಾಕ್ ಆಗ್ತೀರಾ…!

    ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.  ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು,  ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…

  • ಆರೋಗ್ಯ

    ಸುಮ್ಮನೆ ನೀರು ಕುಡಿಯೋದಲ್ಲ, ಇಲ್ಲಿ ಸ್ವಲ್ಪ ನೋಡಿ….

    ಜೀವ ಜಲವೆಂದೇ ಕರೆಯಲ್ಪಡುವ ನೀರು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ನಮ್ಮ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಇರಬೇಕಾದರೆ, ನೀರು ಅತ್ಯಗತ್ಯ.

  • ಸುದ್ದಿ

    ಬಿಹಾರ ರೈತರ ನಿದ್ದೆಗೆಡಿಸಿದ ಬಾನುಗಲ್ಲು….! ಕಾರಣ ಏನು?

    ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. “ರೈತರು…

  • ಸುದ್ದಿ

    ಪಾನಿ ಪುರಿ ಮಾಡೋದಕ್ಕೂ ಬಂತು ಮಷೀನ್.!ಇನ್ಮೇಲೆ ಮನೆಯಲ್ಲೇ ಪಾನಿ ಪುರಿ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಇತ್ತೀಚಿನ ಯುವಕ ಯುವತಿಯರಿಗೆ ಮಕ್ಕಳಿಗೆ ಮನೆಯ ತಿಂಡಿಗಳಿಗಿಂತ ಹೊರಗೆ ಸಿಗುವ ತಿಂಡಿಗಳೇ ಹೆಚ್ಚು ಇಷ್ಟ, ಅದರಲ್ಲೂ ಪಾನಿ ಪುರಿಯ ಹೆಸರು ತುಂಬಾನೇ ಫೇಮಸ್. ಪಾನಿ ಪುರಿ ಎಂಬ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುವುದು ಸಾಮಾನ್ಯ, ಪಾನಿ ಪುರಿ ಎಂದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಇಷ್ಟ ಪಡುತ್ತಾರೆ, ಆದರೆ ಅದನ್ನೇ ಮನೆಯಲ್ಲಿ ಮಾಡಿ ತಿನ್ನದೇ, ಹೊರಗೆ ತಿನ್ನುತ್ತಾರೆ, ಪಾನಿ ಪುರಿಯನ್ನ ಅವರು ಹೇಗೆ ಮಾಡಿರುತ್ತಾರೆ ಎಂದು ತಿಳಿದಿರಲ್ಲ.   ಮನೆಯಲ್ಲಿ ನಾವು ಬಿಸ್ಲೇರಿ ನೀರನ್ನೇ ಸೇವಿಸುತ್ತೇವೆ ಆದರೆ…

  • ತಂತ್ರಜ್ಞಾನ

    ನಿಮ್ಮ ಆಧಾರ್ ಕಾರ್ಡ್ ಮೊಬೈಲ್’ಗೆ ಮನೆಯಲ್ಲಿ ಕುರಿತು ಲಿಂಕ್ ಮಾಡುವುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ.