ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ
2 ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ 202ರನ್ಗಳಿಗೆ ಸರ್ವ ಪತನವಾಗಿದೆ.ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು.ನಂತರ ಬಂದ ಪುಜಾರ (3), ರಹಾನೆ (0) ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ವಿಕೆಟ್ ಕೈಚೆಲ್ಲಿದರು.ಹನಮ ವಿಹಾರಿ ರಾಹುಲ್ ಜೊತೆಗೂಡಿ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ಸೂಚನೆ ನೀಡುವಾಗ ವಿಹಾರಿ (20) ಔಟಾದರು. ನಂತರ ರಾಹುಲ್ 133ಎಸೆತಗಳಿಂದ 50ರನ್ಗಳಿಸಿದ್ದಾಗ ಮಾರ್ಕೊ ಯಾನ್ಸನ್ ಗೆ ವಿಕೆಟ್ ಒಪ್ಪಿಸಿದರು.ನಂತರ ಬಂದ ಪಂತ್ ( 17)& ಅಶ್ವಿನ್(46) ಸ್ವಲ್ಪ ಹೊತ್ತು ಪ್ರತಿರೋಧ ತೋರಿದರೂ ಅವರು ವಿಕೆಟ್ ಒಪ್ಪಿಸಿದರು.ಥಾಕೂರ್ (0),ಶಮಿ(9),ಬುಮ್ರಾ (14*), ಸಿರಾಜ್ (1) ಬೇಗ ವಿಕೆಟ್ ಒಪ್ಪಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ:-ಭಾರತ:-202/10(63.1ಓವರ್ಗಳಲ್ಲಿ)
ರಾಹುಲ್ 50(133), ಅಶ್ವಿನ್ 46(50).
ರಬಾಡ:-64/3(17.1),ಓಲಿವೀರ್:-64/3(17),ಮಾರ್ಕೊ ಯಾನ್ಸನ್:-31/4(17)
ದಕ್ಷಿಣ ಆಫ್ರಿಕಾ:-35/1 (18ಓವರ್ಗಳಲ್ಲಿ)
ಎಲ್ಗರ್11(57)*,ಮಾರ್ಕ್ರಾಮ್ 7(12), ಪೀಟರ್ಸನ್ 14(39)*
ಶಮಿ15/1(6)
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ದೇಶವನ್ನ ದೇವಾಲಯಗಳ ಗೂಡು ಏಂದು ಕರೆಯುತ್ತೇವೆ ಮತ್ತು ಅತೀ ಹೆಚ್ಚು ದೇವಾಲಯಗಳನ್ನ ಹೊಂದಿರುವ ದೇಶಗಳಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಮ್ಮ ದೇಶದ ಜನರು ದೇವರನ್ನು ಹೆಚ್ಚಾಗಿ ನಂಬುತ್ತಾರೆ ಮತ್ತು ದೇಶದಲ್ಲಿ ದೇವರ ಆರಾಧನೆ ಹೆಚ್ಚಾಗಿ ನಡೆಯುತ್ತಾರೆ, ಯಾವುದೇ ಶುಭಕಾರ್ಯ ನಡೆಯಬೇಕು ಅಂದರೆ ಮೊದಲು ದೇವರ ಒಪ್ಪಿಗೆಯನ್ನ ಪಡೆದು ನಂತರ ಮುಂದಿನ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಹಿಂದಿನ ಕಾಲದಿಂದಲೂ ನಮ್ಮ ಜನರು ದೇವರ ವಿಚಾರವಾಗಿ ಅನೇಕ ಆಚಾರ ವಿಚಾರಗಳನ್ನ…
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರರೂಪಾಯಿ ಮುಖಬೆಲೆಯ ನೋಟು ಮುದ್ರಣವನ್ನು ಸ್ಥಗಿತಗೊಳಿಸಿದೆ.ಪ್ರಸಕ್ತ ವರ್ಷ ನೋಟು ಮುದ್ರಣಇಲಾಖೆ 2 ಸಾವಿರ ಮುಖಬೆಲೆಯ ಒಂದುನೋಟನ್ನೂ ಮುದ್ರಿಸಿಲ್ಲ ಎಂದು ಆರ್ಬಿಐಆರ್ಟಿಐ ಅರ್ಜಿಗೆ ನೀಡಿರುವಉತ್ತರದಲ್ಲಿ ಸ್ಪಷ್ಟಪಡಿಸಿದೆ. ಆದರೆ ಹಾಲಿ ಇರುವ ನೋಟುಗಳ ಚಲಾವಣೆಗೆ ಸಮಸ್ಯೆಯೇನಿಲ್ಲ. ಆರ್ಬಿಐ ಮಾಹಿತಿ ಪ್ರಕಾರ ನೋಟು ಮುದ್ರಣ ಇಲಾಖೆ 2016-17ನೇ ಹಣಕಾಸು ವರ್ಷದಲ್ಲಿ 2 ಸಾವಿರ ಮುಖಬೆಲೆಯ ಒಟ್ಟು 3,54,29,91,000 ನೋಟುಗಳನ್ನು ಮುದ್ರಣ ಮಾಡಿತ್ತು. 2017-18 ರಲ್ಲಿ 11,15,07,000 ನೋಟು ಹಾಗೂ 2018-19ನೇ ಸಾಲಿನಲ್ಲಿ ಕೇವಲ4,66,90,000 ನೋಟುಗಳನ್ನು…
ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ.
ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.
ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿದ್ದು, ಈ ಸಂದರ್ಭದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗುತ್ತದೆ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದ್ದು, ಹರಿಯಾಣ ವಿಧಾನಸಭಾ ಅವಧಿ ನವಂಬರ್ 2 ಕ್ಕೆ ಕೊನೆಗೊಳ್ಳಲಿದೆ. ಇನ್ನು ಜಾರ್ಖಂಡ್ ವಿಧಾನಸಭಾ ಅವಧಿ ಡಿಸೆಂಬರ್ 27ಕ್ಕೆ ಅಂತ್ಯವಾಗಲಿದ್ದು, ದೀಪಾವಳಿಗೂ ಮುನ್ನ…
ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವಿಮೆ, ಆಸ್ತಿ ವಿಮೆ, ಆರೋಗ್ಯ ವಿಮೆ ಹೀಗೆ ಹಲವಾರು ರೀತಿಯ ವಿಮಾ ಸುರಕ್ಷೆಯ ಪಾಲಿಸಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಣಕಾಸು ಉತ್ಪನ್ನಗಳಿಗೆ ಸಹ ವಿಮೆ ಸುರಕ್ಷೆ ಇರುತ್ತದೆ ಎಂಬುದು ಬಹುತೇಕರಿಗೆ ಈವರೆಗೂ ತಿಳಿದಿಲ್ಲ. ಕೆಲ ಹಣಕಾಸು ಉತ್ಪನ್ನಗಳಿಗೆ ಉಚಿತ ವಿಮಾ ಸುರಕ್ಷೆ ಇದ್ದರೆ ಇನ್ನು ಕೆಲವಕ್ಕೆ ಅತಿ ಕಡಿಮೆ ಹಣ ಪಾವತಿಸುವುದರ ಮೂಲಕ ವಿಮಾ ಸೌಲಭ್ಯ ಪಡೆಯಬಹುದು. ಯಾವೆಲ್ಲ ಹಣಕಾಸು ಉತ್ಪನ್ನಗಳಿಗೆ…