ದೇಶ-ವಿದೇಶ

ಭಾರತ ಚೀನಾ ನಡುವೆ ಯುದ್ದ ನಡೆದ್ರೆ,ಯಾವ ದೇಶಗಳು ಭಾರತಕ್ಕೆ ಸಹಾಯ ಮಾಡುತ್ತವೆ ಗೊತ್ತಾ???

2712

ಭಾರತ ಮತ್ತು ಚೀನಾಗಳ ನಡುವಿನ ರಾಜಕೀಯ  ಪರಿಸ್ತಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಯುದ್ದದ ಕಾರ್ಮೋಡದ ಛಾಯೆ ಉಭಯ ದೇಶಗಳ ಮೇಲೆ ಕಾಡುತ್ತಿದೆ.

ಭಾರತ-ಚೀನಾ ಜಗತ್ತಿನ ಎರಡು ಪ್ರಮುಖ ಶಕ್ತಿಗಳು. ಜನಸಂಖ್ಯೆ, ಆರ್ಥಿಕತೆ, ಸೈನ್ಯ ಮತ್ತು ಪ್ರಕೃತಿ ಸಂಪತ್ತು ಎಲ್ಲದರಲ್ಲೂ ಮುಂಚೂಣಿ ರಾಷ್ಟ್ರಗಳಾಗಿವೆ. ಇಂತಹ ಬಲಿಷ್ಠ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವುದು ಮೂರನೇ ಮಹಾಯುದ್ಧ ನಡೆಯುವ ಮೂನ್ಸೂಚನೆ ಕಾಣಿಸುತ್ತಿದೆ.

ಡೋಕ್ಲಾಂ ಗಡಿ ವಿಚಾರಕ್ಕಾಗಿ ಉಭಯ ದೇಶಗಳು ಜಟಾಪಟಿ ನಡೆದಿತ್ತು. ಇದೀಗ ಬಲಿಷ್ಠ ರಾಷ್ಟ್ರಗಳು ಯುದ್ಧಕ್ಕೆ ಸನ್ನದ್ಧವಾಗಿ ನಿಂತಿವೆ. ಇನ್ನು ಶಸ್ತ್ರಾಸ್ತ್ರಗಳ ವಿಷಯಕ್ಕೆ ಬಂದರೆ ಚೀನಾ ಭಾರತಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಆದರೆ ಭಾರತ ಅಮೆರಿಕ ಮತ್ತು ಇಂಗ್ಲೆಂಡ್ ಸಹಕಾರದಿಂದ ಗೆಲುವು ಸಾಧಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಉಭಯ ದೇಶಗಳು ಅಪಾರ ಪ್ರಮಾಣದಲ್ಲಿ ವಿನಾಶಕಾರಿ ಅಣ್ವಸ್ತ್ರಗಳನ್ನು ಹೊಂದಿವೆ. ಮನುಕುಲಕ್ಕೆ ಮಾರಕವಾದ ಈ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಎರಡೂ ದೇಶಗಳು ತೀರ್ಮಾನಿಸಿದರೆ ಪ್ರಪಂಚದ ಎರಡು ಪ್ರಾಚೀನ, ಮಹಾನ್ ನಾಗರಿಕತೆಗಳ ಮೇಲೆ ಮಾರಣಾಂತಿಕ ಹಲ್ಲೆಯಾಗುವುದು ಖಚಿತ.

ಇನ್ನು ಅಣ್ವಸ್ತ್ರ ಮುಕ್ತ, ಸಹಜ ಯುದ್ಧ ನಡೆದರೆ ಎರಡೂ ದೇಶಗಳು ನಿಕಟವಾಗಿ ಕಾದಾಡುತ್ತವೆ. ಶಸ್ತ್ರಾಸ್ತ್ರದ ದೃಷ್ಟಿಯಿಂದ ನೋಡಿದರೆ ಚೀನಾ ಭಾರತಕ್ಕಿಂತ ಹೆಚ್ಚು ಸಂಗ್ರಹ ಹೊಂದಿದೆ. ಈ ಪ್ರಕಾರ ಚೀನಾಕ್ಕೆ ಗೆಲುವಿನ ಅವಕಾಶ ಜಾಸ್ತಿ ಇದೆ.

ಚೀನಾದ ಪ್ರಮುಖ ನಗರಗಳನ್ನು ತಲುಪಬಲ್ಲ ಕ್ಷಿಪಣಿ ಸಾಮರ್ಥ್ಯ ಭಾರತಕ್ಕಿದೆ. ಆದರೆ ಚೀನಾದ ಹೆಚ್ಚುವರಿ ಶಕ್ತಿಯೆಂದರೆ ತನ್ನ ದೇಶದ ಗಡಿ ಪ್ರವೇಶ ಮಾಡುವುದಕ್ಕೆ ಮುನ್ನವೇ ಕ್ಷಿಪಣಿ ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದೆ. ಸೇನಾಶಕ್ತಿಯಲ್ಲೂ ಚೀನಾವೇ ಮುಂದಿದೆ. ಅಂಕಿ ಅಂಶವನ್ನೇ ಗಮನಿಸಿದರೆ ಇಲ್ಲೂ ಭಾರತಕ್ಕೆ ಹಿನ್ನಡೆಯಾಗಲಿದೆ.

ಆದರೆ ಭಾರತದ ಮೀಸಲು ಪಡೆ ಸಂಖ್ಯೆ ಹೆಚ್ಚಿದೆ.ಆದ್ದರಿಂದ ಸೇನಾ ಶಕ್ತಿಯಲ್ಲಿ ಚೀನಾಕ್ಕೆ ಭಾರತವನ್ನು ಹಿಂದಿಕ್ಕಲು ಸಾಧ್ಯವಾಗಲಾರದು.

ಒಂದು ವೇಳೆ ಯುದ್ಧ ನಡೆದರೆ ಚೀನಾಕ್ಕೆ ಪಾಕ್ ಸಹಾಯ ಮಾಡಬಹುದು. ಇದರ ಜತೆಗೆ ಭಾರತದ ವಿರುದ್ಧ ಸಮರ ಸಾರಬಹುದು. ಆಗ ಭಾರತ ಅತಂತ್ರಗೊಳ್ಳುವುದು ಖಚಿತ. ಆದರೆ ಭಾರತ ಆಂತಕ ಪಡುವ ಅಗತ್ಯವಿಲ್ಲ.

ಇಂತಹ ಹೊತ್ತಿನಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕ, ಇಂಗ್ಲೆಂಡ್, ಜಪಾನ್, ಫ್ರಾನ್ಸ್ ಭಾರತದ ನೆರವಿಗೆ ಧಾವಿಸುತ್ತದೆ. ಒಂದು ರೀತಿಯಲ್ಲಿ 3ನೇ ವಿಶ್ವಯುದ್ಧದ ಛಾಯೆ ಮೂಡತ್ತದೆ. ಈ ಹೊತ್ತಿನಲ್ಲಿ ಚೀನಾ ಸಂಪೂರ್ಣ ಸೋತು ಭಾರತಕ್ಕೆ ಶರಣಾಗಬಹುದು.

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ