ಜೀವನಶೈಲಿ

ಭಗವಾನ್ ಶ್ರೀ ಕೃಷ್ಣನ ಈ 8 ಉಪದೇಶಗಳನ್ನು ಅನುಸರಿಸಿದ್ರೆ, ಜೀವನ ತುಂಬಾ ಸರಳ..!

5210

ಮಹಾಭಾರತದ ಒಂದು ಯುದ್ದದ ಸನ್ನಿವೇಶದಲ್ಲಿ ಅರ್ಜುನನು, ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಾನ್ ಶ್ರೀ ಕೃಷ್ಣನು, ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸುತ್ತಾನೆ.

ಗೀತೆಯಲ್ಲಿನ ಈ 8 ಕೃಷ್ಣನ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡ್ರೆ, ಜೀವನ ತುಂಬಾ ಸರಳ.

1.ಒಳ್ಳೆಯದಕ್ಕೆ ಆಗಿದೆ.ಆಗುವುತ್ತಿರುವುದೆಲ್ಲಾ ಒಳ್ಳೆಯದಕ್ಕೆ.ಮುಂದೆ ಆಗುವುದೆಲ್ಲಾ ಒಳ್ಳೆಯದೇ ಆಗುತ್ತೆ.ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ.

2.ಹುಟ್ಟಿದಾಗ ಬೆತ್ತಲೆ, ಸತ್ತಾಗಲೂ ಬೆತ್ತಲೆ.ಅಂದ್ರೆ ನಾವು ಹುಟ್ಟಿದಾಗ ಏನನ್ನೂ ತರುವುದಿಲ್ಲ.ಸತ್ತಾಗ ಕೂಡ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.

3.ಬದಲಾವಣೆಯೇ ಜೀವನದ ನಿಯಮ.ಅಂದ್ರೆ ಯಾವುದೇ ರಾಜನಾಗಿದ್ದವನು, ಒಂದೇ ದಿನದಲ್ಲಿ ಅಥವಾ ಒಂದೇ ನಿಮಿಷದಲ್ಲಿ ಬಿಕಾರಿಯಾಗಬಹುದು.ಹಾಗಾಗಿ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಕಾಲಕ್ಕೆ ತಕ್ಕಂತೆ ನಾವು ಒಪ್ಪಿಕೊಳ್ಳಲೇಬೇಕು.

4.ಆತ್ಮಕ್ಕೆ ಜನನವೂ ಇಲ್ಲ, ಮರಣವೂ ಇಲ್ಲ.ಅಂದ್ರೆ ನಮ್ಮ ದೇಹ ನಶ್ವರ. ಆತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೋಗುತ್ತದೆ.ಹಾಗಾಗಿ ಸಾವಿಗೆ ಭಯಪಡಬಾರದೆಂದು ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಹಾಗಾಗಿ ನಾವು ಸಾವಿಗೆ ಭಯಪಡಬಾರದು.

5.ಕರ್ಮ ಮಾಡಿ ಫಲವನ್ನು ಬಯಸಬೇಡಿ. ಅಂದ್ರೆ ನಾವು ಮಾಡೋ ಕೆಲಸದಲ್ಲಿ ಶೃದ್ಧೆ ಇದ್ರೆ, ನಮಗೆ ಮಾಡೋ ಕೆಲಸಕ್ಕೆ ಪ್ರತಿಫಲ ಸಿಗುತ್ತೆ ಎನ್ನುವುದು ಇದರ ಅರ್ಥ.

6.ಸಂದೇಹದಿಂದ ನಮಗೆ ಖುಷಿ ಸಿಗುವುದಿಲ್ಲ. ಇದರಿಂದ ನಮ್ಮ ಜೀವನವೇ ಹಾಳಾಗುತ್ತದೆ.

7.ಧ್ಯಾನದಿಂದ ಮನಸ್ಸು ನಿರ್ಮಲವಾಗುದಲ್ಲದೆ, ಒಂದು ನಿರಂತರ ಜ್ಯೋತಿಯಂತೆ ಆಗುತ್ತದೆ.

8.ಮಾನವನು ತನ್ನ ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕಳ್ಳುವುದರಿಂದ ಜೀವನದಲ್ಲಿ ಗೆಲ್ಲಲೂಬಹುದು, ಸೋಲಲೂಬಹುದು. ಹಾಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಯೋಚಿಸಿ ನಿರ್ಧರ ತೆಗೆದುಕೊಳ್ಳಬೇಕಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ