ಆರೋಗ್ಯ

ಬೋರಲಾಗಿ ಮಲಗುವುದು ನಿಜಕ್ಕೂ ಕೆಟ್ಟದ್ದೇ..?ತಿಳಿಯಲು ಈ ಲೇಖನ ಓದಿ..

782

ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಬೇಕಾಗುತ್ತದೆ. ಬೋರಲಾಗಿ ಅಂದರೆ ಹೊಟ್ಟೆ ಅಡಿಯಾಗಿ ಮಲಗುವದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಇದು ನಿದ್ರೆಯನ್ನು ಕೆಡಿಸುವ ಜೊತೆಗೆ ನಿಮ್ಮ ಶರೀರಕ್ಕೂ ಅನಾನುಕೂಲವನ್ನುಂಟು ಮಾಡುತ್ತದೆ.

ಯರಂತೂ ತಮ್ಮ ನಿದ್ರಿಸುವ ಭಂಗಿಯ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬೋರಲಾಗಿ ನಿದ್ರಿಸುವ ಹೆಚ್ಚಿನವರು ಏನಾದರೊಂದು ನೋವನ್ನು ಅನುಭವಿಸುತ್ತಿರುತ್ತಾರೆ. ಅದು ಕುತ್ತಿಗೆ,ಬೆನ್ನು ಅಥವಾ ಕೀಲುಗಳಾಗಿರಲಿ….ಈ ನೋವು ನೀವು ನಿದ್ರಿಸುವ ಭಂಗಿ ಸರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಹೆಚ್ಚಿನ ನೋವು ನೀವು ಮಧ್ಯರಾತ್ರಿಯಲ್ಲಿ ಏಳುವಂತೆ ಮಾಡುವ ಸಾಧ್ಯತೆಯಿರುತ್ತದೆ ಮತ್ತು ನಿದ್ರೆ ಹಾಳಾಗುವುದರಿಂದ ಬೆಳಿಗ್ಗೆ ನಿಮ್ಮಲ್ಲಿ ಉಲ್ಲಾಸವಿರುವುದಿಲ್ಲ.

ಬೋರಲಾಗಿ ಮಲಗುವುದರಿಂದ ನಿಮ್ಮ ಬೆನ್ನು ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ನಿಮ್ಮ ಹೆಚ್ಚಿನ ಭಾರ ಕುತ್ತಿಗೆಯ ಮಧ್ಯಭಾಗದಲ್ಲಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ನೀವು ನಿದ್ರಿಸಿದ್ದಾಗ ನಿಮ್ಮ ಬೆನ್ನುಮೂಳೆಯು ತಟಸ್ಥ ಭಂಗಿಯನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಬೆನ್ನುಮೂಳೆಯ ಮೇಲಿನ ಒತ್ತಡ ಶರೀರದ ಇತರ ಭಾಗಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ.

ಬೆನ್ನುಮೂಳೆಯು ಶರೀರದಲ್ಲಿನ ನರಗಳು ಹಾದು ಹೋಗುವ ಪ್ರಮುಖ ಮಾರ್ಗವಾಗಿರುವುದರಿಂದ ಅದರ ಮೇಲಿನ ಒತ್ತಡವು ಶರೀರದ ಯಾವುದೇ ಭಾಗದಲ್ಲಿ ನೋವನ್ನುಂಟು ಮಾಡಬಲ್ಲುದು. ನಿಮ್ಮ ಶರೀರದ ಭಾಗಗಳು ನಿದ್ರೆಯಲ್ಲಿವೆಯೋ ಎಂಬಂತೆ ಜುಮುಗುಟ್ಟುವಿಕೆ ಮತ್ತು ಮರಗಟ್ಟುವಿಕೆಯೂ ಅನುಭವವಾಗಬಹುದು.

ಬೋರಲಾಗಿ ನಿದ್ರಿಸುವುದು ಕುತ್ತಿಗೆಯ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬೋರಲಾಗಿ ಮಲಗಿದಾಗ ನೀವು ಕುತ್ತಿಗೆಯನ್ನು ಓರೆಯಾಗಿಸುವುದರಿಂದ ತಲೆ ಮತ್ತು ಬೆನ್ನುಮೂಳೆ ಸಮರೇಖೆಯಲ್ಲಿರುವುದಿಲ್ಲ. ಇದರಿಂದಾಗಿ ಕಾಲಕ್ರಮೇಣ ಕುತ್ತಿಗೆಯ ಸಮಸ್ಯೆ ಎದುರಾಗಬಹುದು.

ಸುದೀರ್ಘ ಅವಧಿಗೆ ಬೋರಲಾಗಿ ನಿದ್ರಿಸುವುದು ‘ಹರ್ನಿಯೇಟೆಡ್ ಡಿಸ್ಕ್’ಗೆ ಕಾರಣವಾಗಬಹುದು. ಇದರಿಂದಾಗಿ ಬೆನ್ನುಮೂಲೆಯ ಕಶೇರುಗಳ ನಡುವಿನ ತೆಳ್ಳಗಿನ ಬಿಲ್ಲೆಯಲ್ಲಿ ರಂಧ್ರವುಂಟಾಗುತ್ತದೆ. ಅದರೊಳಗಿನ ಜೆಲ್ ಹೊರಗೆ ಬಂದಾಗ ಅದು ನರಗಳನ್ನು ಕೆರಳಿಸುತ್ತದೆ ಮತ್ತು ನೋವನ್ನುಂಟು ಮಾಡುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ