ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ. ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ ಬಿದ್ದಿದ್ದಾನೆ.
ಸರಿಸುಮಾರು 7 ಇಂಚು ಅಗಲವಿರುವ ಈ ಕೊಳವೆ ಬಾವಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಇದನ್ನು ಗಮನಿಸದ ಬಾಲಕ ಆಟವಾಡುತ್ತಾ ಅದರ ಒಳಗಡೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ತಾಯಿ ಬಾಲಕನನ್ನು ರಕ್ಷಿಸಲು ಮುಂದಾದ್ರೂ ವಿಫಲರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆ ಬಳಿಕ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಸುಮಾರು 5 ದಿನಗಳಿಂದ ರಕ್ಷಣಾ ಕಾರ್ಯ ನಡೆದಿದ್ದು, ಇಂದು ಬಾಲಕನನ್ನು ಬೋರ್ ವೆಲ್ ಒಳಗಡೆಯಿಂದ ರಕ್ಷಿಸಲಾಯಿತು. ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆ ರಾಜ್ಯದಲ್ಲಿ ಚಾಪರ್ ನಿಲುಗಡೆ ಮಾಡಲು ಸಾಧ್ಯವಿಲ್ಲವಾಯಿತು. ಹೀಗಾಗಿ ಬಾಲಕನನ್ನು ರಸ್ತೆ ಮಾರ್ಗವಾಗಿ 140 ಕೀ.ಮಿ ತೆರಳಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ಸಂಬಂಧ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ದೇವರು ಆತನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಕಳೆದ ರಾತ್ರಿ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಇದೇ ವೇಳೆ ಅಲ್ಲಿನ ಮುಖ್ಯಮಂತ್ರಿಗಳು ಕೂಡ ವಿರೋಧ ಪಕ್ಷಗಳು ಕಾರ್ಯಾಚರಣೆಯನ್ನು ತಡಮಾಡುತ್ತವೆ ಎಂದು ಆರೋಪಿಸಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆಯಾಗುವುದು ಪ್ರತಿಯೊಬ್ಬರ ಕನಸು. ತಮಗಿಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗಲು ಪ್ರತಿಯೊಬ್ಬರೂ ಬಯಸ್ತಾರೆ. ದಾಂಪತ್ಯ ಜೀವನ ಪರ್ಯಂತ ಸುಖಕರವಾಗಿರಲೆಂದು ಅಳೆದು ತೂಗಿ ಮದುವೆ ಮಾಡ್ತಾರೆ. ಹಿಂದೂ ಸಂಪ್ರದಾಯದಲ್ಲಿ ಮದುವೆಗೂ ಮುನ್ನ ಜಾತಕ ನೋಡುವ ಪದ್ಧತಿಯಿದೆ. ಜಾತಕ ಹೊಂದಿಕೆಯಾದ್ರೆ ಮದುವೆ ಮಾತುಕತೆ ಮುಂದುವರೆಯುತ್ತದೆ.ಸಾಮಾನ್ಯವಾಗಿ ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ಗೋತ್ರ ನೋಡಿಯೇ ಜಾತಕ ತೆಗೆದುಕೊಳ್ತಾರೆ. ಒಂದೇ ಗೋತ್ರದವರನ್ನು ಮದುವೆಯಾಗದಿರಲು ಮುಖ್ಯ ಕಾರಣವಿದೆ. ಸನಾತದ ಧರ್ಮದ ಪ್ರಕಾರ ಒಂದೇ ಗೋತ್ರದವರು ಸಹೋದರ-ಸಹೋದರಿಯಾಗಿರುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಒಂದೇ ಗೋತ್ರದವರನ್ನು ಮದುವೆಯಾಗುವುದಿಲ್ಲ. ಇದಲ್ಲದೆ ಒಂದೇ ಗೋತ್ರದಲ್ಲಿ…
ಜೀವ ಜಲವೆಂದೇ ಕರೆಯಲ್ಪಡುವ ನೀರು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ನಮ್ಮ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಇರಬೇಕಾದರೆ, ನೀರು ಅತ್ಯಗತ್ಯ.
ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ಸನಾತನ ಧರ್ಮವಾಗಿದೆ. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.
ನಿಮ್ಮ ಹೊಟ್ಟೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆನೋವು ಮತ್ತು ಕೆಳಹೊಟ್ಟೆ ಕಿವುಚಿದಂತಹ ಅನುಭವಾಗಿರಬಹುದು. ಸಾಮಾನ್ಯವಾಗಿ ಅಜೀರ್ಣತೆ ಹಾಗೂ ಒಗ್ಗದ ಆಹಾರ ಸೇವನೆಯಿಂದ ಹೊಟ್ಟೆ ಕೆಡುವುದು ಸಾಮಾನ್ಯವಾದ ತೊಂದರೆ. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಐಬಿಎಸ್ , ಮಲಬದ್ಧತೆ ಹಾಗೂ ಹೊಟ್ಟೆಯೊಳಗಣ ಉರಿಯೂತ ಕಾಣಿಸಿಕೊಳ್ಳುತ್ತದೆ.ಹೊಟ್ಟೆಯ ತೊಂದರೆಗಳಿಗೆ ಶುಂಠಿಯ ಕೆಲವು ಲಾಭಗಳ ವಿವರ ಇಲ್ಲಿದೆ.
ಜಿಯೋ ಗ್ರಾಹಕರ ಬೆನ್ನಲ್ಲೇ ಏರ್ಟೆಲ್ ಮತ್ತು ವೊಡಾಫೋನ್ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್ ಬಿಲ್ ಶಾಕ್ ತಟ್ಟಲಿದೆ. ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಏರ್ಟೆಲ್ ಕಂಪನಿಗಳು ಡಿಸೆಂಬರ್ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ. ಕೆಲವೇ ವರ್ಷಗಳ ಹಿಂದೆ ಹತ್ತಾರು ದೂರ ಸಂಪರ್ಕ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್ಗಳ ಮೂಲಕ ಕಡಿಮೆ ದರ ಸೇವೆಗಳನ್ನು ಘೋಷಿಸುತ್ತಿದ್ದವು. ಆದರೆ ಈಗ ಬಹುತೇಕ ದೂರಸಂಪರ್ಕ ಕಂಪೆನಿಗಳು ಮುಚ್ಚಿ ಹೋಗಿವೆ ಅಥವಾ ವಿಲೀನಗೊಂಡಿವೆ. ಜಿಯೋ, ಏರ್ಟೆಲ್, ವೊಡಾಫೊನ್ ಐಡಿಯಾ ಹಾಗೂ ಸರ್ಕಾರಿ ಸ್ವಾಮ್ಯ…
ನಾವು ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ನೋಡಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ನೋಡಿದ ಪ್ರಾಣಿಗಳನ್ನು ನಮ್ಮ ಕಣ್ಣುಗಳೇ ನಂಬುವುದಿಲ್ಲ, ಅಷ್ಟೊಂದು ವಿಚಿತ್ರವಾಗಿರುತ್ತವೆ..! ಇಂತಹದೆ ಜಲಚರ ಪ್ರಾಣಿಯೊಂದು ಪತ್ತೆಯಾಗಿದೆ. ಅದು ನೋಡಲು ಮತ್ಸ್ಯ ಕನ್ಯೆ ಅಂತಯೇ ಇದೆ. ಕೆಳಗಿರುವ ಚಿತ್ರಗಳು ಮತ್ತು ವಿಡಿಯೋವನ್ನು ವೀಕ್ಷಿಸಿ ಗೊತ್ತಾಗುತ್ತೆ….