ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಶಿವಜಿನಗರದ ತಿಮ್ಮಯ್ಯ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ದನದ ಕೊಟ್ಟಿಗೆಯಂತಿರುವ ಕಟ್ಟಡ, ಉಸಿರುಕಟ್ಟುವ ವಾತಾವರಣ, ನೊಣ-ಸೊಳ್ಳೆಗಳ ಕಾಟ, ಇನ್ನು ಮಳೆ ಬಂದಾಗಲೆಲ್ಲ ಕಿಟಕಿ- ಬಾಗಿಲು, ಹೆಂಚುಗಳ ಮೂಲಕ ಸೋರುವ ಮಳೆ ನೀರಿನ ಜತೆಗೆ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ. ಇದರ ಜತೆಗೆ ನೊಣ-ಸೊಳ್ಳೆಗಳ ಕಾಟ. ಇದು ಶಿವಾಜಿನಗರ ಸರ್ಕಾರಿ ಶಾಲೆ ಅನುಭವಿಸುತ್ತಿರುವ ಸಮಸ್ಯೆಯಾಗಿದೆ..

ಅಷ್ಟೇ ಅಲ್ಲದೆ ಶಾಲೆಯಲ್ಲಿ ಒಂದು ಸುಸಜ್ಜಿತ ಶೌಚಾಲಯವಿಲ್ಲ. ಮಕ್ಕಳಿಗೆ ಕುಡಿವ ನಿರಿನ ವ್ಯವಸ್ಥೆ ಕೂಡ ಇಲ್ಲ. ಹೆಣ್ಣು ಮಕ್ಕಳು ಶೌಚಲಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಶಾಲೆಯ ಆವರಣದಲ್ಲಿರುವ ಶಿಥಿಲಗೊಂಡ ಕಟ್ಟಡ ತೆರವುಗೊಳಿಸದೆ ಇರುವ ಪರಿಣಾಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಥಿಲಗೊಂಡಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯ ನವೀಕರಣ ಕಾರ್ಯಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಲೇ ಇದ್ದರೂ ಯಾವೊಬ್ಬ ರಾಜಕಾರಣಿಗಳು ಕೂಡ ಇತ್ತ ಗಮನ ಹರಿಸಿರಲಿಲ್ಲ. ಇದೀಗ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಶಾಲೆಯ ಪುನರ್ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ..
ಮೂಲ ಭೂತ ಸೌಕರ್ಯಗಳು ಇಲ್ಲದ ಈ ಶಾಲೆಯನ್ನು ಪುನರ್ ನಿರ್ಮಾಣ ಮಾಡಿ ಮಾದರಿ ಶಾಲೆಯನ್ನಾಗಿ ಮಾಡಲು ಸಂಸದ ಜಿಸಿ ಚಂದ್ರಶೇಖರ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ಕಾಗಿ ತಗಲುವ ವೆಚ್ಚವನ್ನು ನಮ್ಮ ಸಂಸದರ ನಿಧಿಯಿಂದ ಬರಿಸಲು ತೀರ್ಮಾನಿಸಿದ್ದು ಈ ನಿರ್ಬಂಧಗಳನ್ನು ಹೊರಡಿಸುವಂತೆ ಜಿ.ಸಿ.ಚಂದ್ರಶೇಖರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರ್ಕಾರೀ ಶಾಲೆಗಳ ಉಳಿವಿಗೆ ಕೈ ಜೋಡಿಸಿದ್ದಾರೆ.

ಇನ್ನು ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೂಡ ಬರೆದುಕೊಂಡಿರುವ ಸಂಸದರು “ಬೆಂಗಳೂರು ಕೇಂದ್ರ ಭಾಗದಲ್ಲಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆ ಆಗರ , ಸೋಶಿಯಲ್ ಮೀಡಿಯಾದಲ್ಲಿ ಕಂಡ ಗೆಳೆಯ ಸಯ್ಯದ್ ಹುಸೆನ್ನ್ ನನ್ನ ಗಮನಕ್ಕೆ ತಂದಿದ್ದು , ಈ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡಲು ತಗಲುವ ವೆಚ್ಚವನ್ನು ನಮ್ಮ ಸಂಸದರ ನಿಧಿಯಿಂದ ಬರಿಸಲು ನಿರ್ಧರಿಸಿದ್ದೇನೆ.” ಎಂದು ಟ್ವೀಟ್ ಮಾಡಿದ್ದಾರೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಪದ್ಧತಿ, ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯಲ್ಲಿ ಕಡಿಮೆ ದೇಹದಂಡನೆ ಹಾಗೂ ತಪ್ಪಾದ ಆಹಾರಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದುದು ಹೊಟ್ಟೆಯ ಬೊಜ್ಜು. ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕಾಣಬಹುದು. ಸಬ್ಕ್ಯುಟೆನಿಯಸ್ ಫ್ಯಾಟ್ – ಇದು ಸಾಮಾನ್ಯವಾಗಿ ಕೈ-ಕಾಲುಗಳ ಮೇಲ್ಭಾಗದಲ್ಲಿರುವ ಕೊಬ್ಬಿನಂಶ. ಇದು ಹೊಟ್ಟೆಯ ಚರ್ಮದ ಒಳಭಾಗದಲ್ಲಿ ಬಂದಲ್ಲಿ ಅಷ್ಟೆಲ್ಲ ತೊಂದರೆ ಆಗುವುದಿಲ್ಲ. ಶೇ. 80ರಷ್ಟು ಜನರಲ್ಲಿ ಇದಕ್ಕಿಂತ ಜಾಸ್ತಿ ಹೊಟ್ಟೆಯ ಬೊಜ್ಜಿಗೆ ಮುಖ್ಯ ಕಾರಣ ವಿಸರಲ್ ಫ್ಯಾಟ್. ಇದು ಹೊಟ್ಟೆಯ…
ನೀವು ರಾತ್ರಿಯಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದರೆ, ಅರಿಶಿನ ಹಾಲು ನಿಮ್ಮ ನಿದ್ರೆಗೆ ಸಹಾಯಕವಾಗಬಹುದು. ರಾತ್ರಿ ಊಟದ ನಂತರ ಮಲಗುವ ಮುನ್ನ ಅರ್ಧ ಲೋಟ ಹಾಲನ್ನು ಅರಿಶಿನೊಂದಿಗೆ ಕುಡಿಯಿರಿ ಮತ್ತು ನಂತರ ನೀವು ರಾತ್ರಿಯಲ್ಲಿ ಹೇಗೆ ಮಲಗುತ್ತೀರಿ ಎಂಬುದನ್ನು ನೋಡಿ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ…
ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು…
ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಲು ಮುಜರಾಯಿ ಇಲಾಖೆ ಕ್ರಮಕೈಗೊಂಡಿದೆ ಎನ್ನಲಾಗಿದೆ. ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬಡವ ಶ್ರೀಮಂತ ಎಂಬ ಭೇದ ಭಾವ ಬಿಟ್ಟು ಸಮಾತನೆ ಕಾಣಬಹದು. ಬಡವರು, ಜನಸಾಮಾನ್ಯರಿಗೆಅನುಕೂಲವಾಗುವಂತೆ ಮುಜರಾಯಿ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಹೊಸ ಯೋಜನೆಯನ್ನುಜಾರಿಗೆ ತರಲು ಸರ್ಕಾರ ಮುಂದಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿವಿವಾಹವಾಗಲು ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲಾಗುವುದು.ಇದು ಬಡವರ ಅನುಕೂಲಕ್ಕಾಗಿ ಮಾಡಿದ್ದಾರೆ ಎನ್ನಬಹುದು. ರಾಜ್ಯದಲ್ಲಿರುವ …
ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.