ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 5 ದಿನಗಳು ಬಾಕಿ ಉಳಿದಿವೆ. ನೆನ್ನೆ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾತ್ರೋ ರಾತ್ರಿ ಒಬ್ಬರನ್ನು ಎಲಿಮಿನೇಟ್ ಮಾಡುವ ಮುಖಾಂತರ ಶಾಕ್ ಕೊಟ್ಟಿದ್ದಲ್ಲದೆ, ವೀಕ್ಷಕರಲ್ಲಿ ಬಾರಿ ಕುತೂಹಲವನ್ನು ಉಂಟುಮಾಡಿದೆ.
ಹೌದು, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸಮೀರ್ ಆಚಾರ್ಯವರನ್ನು ಎಲಿಮಿನೇಟ್ ಮಾಡುವ ಮುಖಾಂತರ ಉಳಿದ 5 ಜನ ಸ್ಪರ್ಧಿಗಳು ಬಿಗ್ ಬಾಸ್ ಸಂಚಿಕೆ 5ರ ಫೈನಲ್ ತಲುಪಿದ್ದಾರೆ. ದಿವಾಕರ್,ನಿವೇದಿತಾ ಗೌಡ,ಶ್ರುತಿ ಪ್ರಕಾಶ್,ಜಯರಾಂ ಕಾರ್ತಿಕ್,ಮತ್ತು ಚಂದನ್ ಶೆಟ್ಟಿ ಈ 5 ಜನರ ಗ್ರಾಂಡ್ ಪಿನಾಲೆ ತಲುಪಿದ್ದಾರೆ.
ಬಿಗ್ ಬಾಸ್ ಸಂಚಿಕೆ 5ರ ಪಟ್ಟಕ್ಕೆ ನೆನ್ನೆಯಿಂದಲೇ ವೋಟಿಂಗ್ ಶುರುವಾಗಿದೆ.ಈ 5 ಜನರಲ್ಲಿ ದಿವಾಕರ್ ಉಳಿದಂತೆ 4 ಜನ ಸೇಲೆಬ್ರೆಟಿಗಳಾಗಿದ್ದು, ಕಾಮನ್ ಮ್ಯಾನ್ Vs ಸೇಲೆಬ್ರೆಟಿಸ್ ಇವರಲ್ಲಿ ಯಾರೂ ಗೆಲ್ಲುತ್ತಾರೆಂಬ ಕುತೂಹಲ ಜನರಲ್ಲಿ ಇಮ್ಮಡಿಗೊಂಡಿದೆ.ಹಾಗಾದ್ರೆ ವೀಕ್ಷಕರು ಹೇಳುವ ಪ್ರಕಾರ ಯಾರು ಗೆಲ್ಬೇಕು ಎಂಬ ವಿವರ ಇಲ್ಲಿದೆ ಮುಂದೆ ನೋಡಿ…
ನಿವೇದಿತಾ ಗೌಡ ಹುಟ್ಟಿದ್ದು ಮತ್ತು ಬೆಳೆದಿದ್ದು ಮೈಸೂರಿನಲ್ಲಿಯೇ. ಆದರೂ ಆಕೆಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಏಕೆಂದರೆ ಆಕೆ ಓದಿದ ಶಾಲೆ ಅಟಾಮಿಕ್ ಎನರ್ಜಿ ಸ್ಕೂಲಿನಲ್ಲಿ. ಶಾಲೆಯಲ್ಲಿ ಕನ್ನಡ ಇಲ್ಲದ ಕಾರಣ ಕನ್ನಡ ಬರೆಯಲು ಗೊತ್ತಿಲ್ಲ, ಶಾಲೆಯಲ್ಲಿ ಮಾತಾಡಲು ಸಹ ಇಲ್ಲದಿರುವುದರಿಂದ ಕನ್ನಡ ಆಕೆಗೆ ಮಾತಾಡಲು ತುಂಬ ಕಷ್ಟ. ಮನೆಯಲ್ಲಿ ಕನ್ನಡ, ಶಾಲಾ ಕಾಲೇಜ್ನಲ್ಲಿ ಇಂಗ್ಲಿಷ್, ಇವೆರಡು ಮಿಶ್ರಣವಾಗಿ ಇಂಗ್ಲಿಷ್ ಸ್ಟೈಲಿನ ಕನ್ನಡ ಮಾತನಾಡುತ್ತಾರೆ. ನಿವೇದಿತಾ ಈಗ ಮೈಸೂರಿನ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ವಯಸ್ಸು 18. ಬಿಗ್ಬಾಸ್ ಇತಿಹಾಸದಲ್ಲಿ ಅತೀ ಕಡಿಮೆ ವಯಸ್ಸಿನ ಸ್ಪರ್ಧಿಯಾಗಿದ್ದಾರೆ.ತಂದೆ ರಮೇಶ್ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಒಬ್ಬ ಕಿರಿಯ ಸಹೋದರ ಇದ್ದಾನೆ.
ಡಬ್ ಸ್ಮ್ಯಾಶ್ ಮಾಡುವುದರಲ್ಲಿ ನಿವೇದಿತಾ ಗೌಡ ಎತ್ತಿದ ಕೈ. ನಿಜ ಹೇಳಬೇಕು ಅಂದ್ರೆ, ಡಬ್ ಸ್ಮ್ಯಾಶ್ ಜಗತ್ತಿನಲ್ಲಿ ನಿವೇದಿತಾ ಸೂಪರ್ ಸ್ಟಾರ್. ಕನ್ನಡದ ಸೂಪರ್ ಹಿಟ್ ಡೈಲಾಗ್ ಗಳನ್ನು ತಮ್ಮದೇ ಶೈಲಿಯಲ್ಲಿ ನಿವೇದಿತಾ ಹೇಳಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಈಗ ಅದರಿಂದಲೇ ‘ಬಿಗ್ ಬಾಸ್’ ಎಂಬ ದೊಡ್ಡ ಕಾರ್ಯಕ್ರಮಕ್ಕೆ ಬಂದು, ಟಾಪ್ 5ರಲ್ಲಿ ತಮ್ಮ ಸ್ಥಾನ ಗಳಿಸುವ ಮೂಲಕ ಮೋಡಿ ಮಾಡಿದ್ದಾರೆ.
ಜಯರಾಂ ಕಾರ್ತಿಕ್ ಒಬ್ಬ ನಟನಾಗಿದ್ದು, ಕನ್ನಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಇವರು ಕಲರ್ಸ್ ವಾಹಿನಿಯಲ್ಲಿ 2012-15ರಲ್ಲಿ ಪ್ರಸಾರಗೊಂಡ ಧಾರಾವಾಹಿಯಾದ ಅಶ್ವಿನಿ ನಕ್ಷತ್ರದಲ್ಲಿನ ಜೆ. ಕೃಷ್ಣ ಎಂಬ “ಸೂಪರ್‍ಸ್ಟಾರ್” ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು.2014 ರಲ್ಲಿ ತೆರೆಕಂಡ ಜಸ್ಟ್ ಲವ್ ಚಿತ್ರದ ಮೂಲಕ ನಾಯಕ ನಟರಾದರು. ನಟನೆಯ ಜೊತೆಜೊತೆಗೆ ಇವರು ಇಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಸ್ಪರ್ದಿಸಿದ್ದ ಇವರು, ಈಗ ಟಾಪ್ 5 ತಲುಪುವ ಮೂಲಕ ಬಿಗ್ ಬಾಸ್ ಪಟ್ಟ ಗೆಲ್ಲುವಲ್ಲಿ ಮುನ್ನುಗ್ಗುತ್ತಿದ್ದಾರೆ.
ಚಂದನ್ ಶೆಟ್ಟಿ, ಇದು 2012ರಿಂದಲೇ ಕನ್ನಡ ಸಿನಿಮಾಗಳಲ್ಲಿ ಕೇಳುತ್ತಿದ್ದ, ಕಾಣುತ್ತಿದ್ದ ಹೆಸರು. ಹಾಡುಗಳನ್ನು ಬರೆಯುವ, ಹಾಡುವ ಮತ್ತು ಸಂಗೀತ ಸಂಯೋಜಿಸುವ ಚಂದನ್ ಶೆಟ್ಟಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದರೂ ಒಂದು ಐಡೆಂಟಿಟಿ ಎಂದು ಕೊಟ್ಟಿದ್ದು ‘ಧಮ್ ಪವರ್ರೇ…’ ಪುನೀತ್ ರಾಜಕುಮಾರ್ ಅಭಿನಯದ ‘ಪವರ್’ ಚಿತ್ರದ ಈ ಶೀರ್ಷಿಕೆ ಗೀತೆ ಬರೆದು, ಹಾಡಿದ ಚಂದನ್ ಒಮ್ಮೆಲೇ ಲೈಮ್‌ಲೈಟ್‌ಗೆ ಬಂದರು.
ಹಾಸನ ಚಂದನ್ ಹುಟ್ಟೂರಾದರೂ ಬೆಳೆದಿದ್ದು ಸಕಲೇಶಪುರದಲ್ಲಿ. ಅಲ್ಲಿ ಹೈಸ್ಕೂಲ್ ಮುಗಿಸಿ ಪುತ್ತೂರಲ್ಲಿ ಪಿಯು ಓದಿ, ಮೈಸೂರಿಗೆ ಬಂದು ಬಿಬಿಎಂ ಮುಗಿಸಿದರು. ಉದ್ಯೋಗದ ಬೆನ್ನು ಹತ್ತಿ ಕಾಲ್‌ಸೆಂಟರ್‌ನಲ್ಲಿ ಒಂದು ವರ್ಷ ಕೆಲಸವನ್ನೂ ಮಾಡಿದರು.
ಸಂಗೀತದ ಕಡೆಗೆ ಸೆಳೆಯುತ್ತಿದ್ದ ಮನಸು ಕಾಲ್‌ಸೆಂಟರ್ ಬಿಡಿಸಿತು. ಬೆಂಗಳೂರಲ್ಲಿ ಯಾವುದಾದರೂ ನೌಕರಿ ಹಿಡಿದರೆ ಸಂಗೀತವನ್ನೂ ಜೊತೆಯಲ್ಲೇ ತೂಗಿಸಿಕೊಂಡು ಹೋಗಬಹುದು ಎಂದುಕೊಂಡು ಬೆಂಗಳೂರಿಗೆ ಬಂದರು.ಕಂಡ ಕನಸು ಕೈಗೂಡಿದಂತೆ ಅರ್ಜುನ್ ಜನ್ಯ ಅವರ ಶಿಷ್ಯತ್ವವೂ ಸಿಕ್ಕಿತು. ಅವರ ಜೊತೆ ಚಂದನ್ ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ‘ಅಲೆಮಾರಿ’ ಚಿತ್ರದಲ್ಲಿ ಹಾಡುವ ಮೂಲಕ ಚಂದನ್ ಹಾಡಿನ ಬಂಡಿಯೂ ಆರಂಭವಾಯಿತು.ಹೀಗೆ ತಮ್ಮ ವಿಶಿಷ್ಟ ಗಾಯನದ ಮೂಲಕ ಹೆಸರು ಮಾಡಿರುವ ಇವರು ಬಿಗ್ ಬಾಸ್’ನಲ್ಲಿ ಸ್ಪರ್ದಿಸಿ ಟಾಪ್ 5ರ ಹಂತಕ್ಕೆ ತಲುಪಿ, ಇವರು ಕೂಡ ಬಿಗ್ ಬಾಸ್ ಸಂಚಿಕೆ 5ರ ಗೆಲ್ಲುವ ಕುದುರೆ ಎಂದು ಹೇಳಲಾಗುತ್ತಿದೆ.
ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್, ಬೆಳಗಾವಿಯಲ್ಲಿ ಹುಟ್ಟಿದ, ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುವ ಆಸೆ ಶ್ರುತಿ ಪ್ರಕಾಶ್ ರವರಿಗಿದೆ. ಹೀಗಾಗಿ ಅವರಿಗೆ ‘ಬಿಗ್ ಬಾಸ್’ ಒಂದು ಒಳ್ಳೆಯ ವೇದಿಕೆಯಾಗಿದ್ದು, ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ ಕೂಡ.ಜಯರಾಂ ಕಾರ್ತಿಕ್ ಜೊತೆ ತುಂಬಾ ಸ್ನೇಹದಿಂದ ಇವರ ಮೇಲೆ, ಜಯರಾಂರವರನ್ನು ಪ್ರೀತಿಸುತ್ತಿದ್ದಾರೆಯೇ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.ಇವರೂ ಕೂಡ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಟಪ್ 5ರ ಸ್ಪರ್ದಿಯಾಗಿದ್ದು ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸೊಂಟ ನೋವು, ತಲೆನೋವು… ದೇಹದ ಯಾವುದೇ ನೋವಿರಲಿ… ನೆಗಡಿ, ಶೀತ, ಕೆಮ್ಮು.. ನಿಮಗೆ ಏನೇ ಆದರೂ… ಇವರ ಹತ್ತಿರ ಇದೆ ಔಷಧಿ. ಇವರೇ ಆಯುರ್ವೇದ ಪ್ರಾಡೆಕ್ಟ್ ಸೇಲ್ಸ್ ಮ್ಯಾನ್ ದಿವಾಕರ್. ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದಿರುವ ದಿವಾಕರ್ ಹೊಟ್ಟೆ ಪಾಡಿಗಾಗಿ ಮಾಡದ ಕೆಲಸ ಇಲ್ಲ. ಎಮ್ಮೆ ಮೇಯಿಸುವುದರಿಂದ ಹಿಡಿದು ಹೋಟೆಲ್ ನಲ್ಲಿ ಕೆಲಸ, ಕೂಲಿ ಕೆಲಸ, ಗಾರೆ ಕೆಲಸ ಕೂಡ ಮಾಡಿರುವ ದಿವಾಕರ್ ಹೊಟ್ಟೆ ಹಸಿವಾದಾಗ ಭಿಕ್ಷೆ ಕೂಡ ಬೇಡಿದ್ದಾರಂತೆ.
ಇಷ್ಟೊಂದು ಕಷ್ಟಗಳಲ್ಲಿಯೇ ಬೆಳೆದು ಬಂದಿರುವ ಕಾಮಾನ್ ಮ್ಯಾನ್ ದಿವಾಕರ್ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಭಾಗವಹಿಸಿ, ಘಟಾನುಘಟಿ ಸೇಲೆಬ್ರೆಟಿಗಳ ಜೊತೆ ಸ್ಪರ್ದಿಸಿ ತಮ್ಮ ಪರಿಶ್ರಮದಿಂದ ಟಾಪ್ 5ರ ಹಂತ ತಲುಪಿದ್ದಾರೆ.ಬಿಗ್ ಬಾಸ್ ಪಟ್ಟ ಒಲಿಸಿಕೊಳ್ಳುವಲ್ಲಿ ಇವರು ಸೇಲೆಬ್ರೆಟಿಗಳಿಗಿಂತ ಮುಂದೆ ಇದ್ದು,ಗೆಲ್ಲುವ ನೆಚ್ಚಿನ ಸ್ಪರ್ದಿಯಾಗಿದ್ದಾರೆ.
ಜನರ ಅಭಿಪ್ರಾಯದ ಪ್ರಕಾರ ದಿವಾಕರ್’ರವರಿಗೆ ಹೆಚ್ಚಿಗೆ ವೋಟ್ ಮಾಡಿ ಗೆಲ್ಲಿಸಿ ಎಂದು ಸೋಶಿಯಲ್ ಮಿಡಿಯಾದಲ್ಲಿ ಅಭಿಯಾನ ಶುರುವಾಗಿದೆ.ನಮ್ಮ ಪ್ರಕಾರ ತುಂಬಾ ಕಷ್ಟದಿಂದಲೇ ಬಂದಿರುವ ಕಾಮನ್ ಮ್ಯಾನ್ ದಿವಾಕರ್ ಗೆದ್ದರೆ, ಅದು ಕಾಮನ್ ಮ್ಯಾನ್ ಸಿಕ್ಕ ಗೆಲುವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…
ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿದೆ.
ಸಿಹಿ ಗೆಣಸು ಅನ್ನೋದು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದ ತರಕಾರಿಗಳಲ್ಲಿ ಒಂದು ಅನ್ನಬಹುದು. ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಇದರಲ್ಲಿರುವಂತ ಹಲವು ಆರೋಗ್ಯಕಾರಿ ಗುಣಗಳು ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ಸಿಹಿ ಗೆಣಸು ದೇಹವನ್ನು ಗಟ್ಟಿಮುಟ್ಟಾಗಿ ಬಲಿಷ್ಠವಾಗಿ ಬೆಳೆಯುವಂತೆ ಮಾಡುತ್ತದೆ. ಇದರಲ್ಲಿರುವಂತ ಆರೋಗ್ಯಕಾರಿ ಗುಣಗಳೇನು ಅನ್ನೋದನ್ನ ತಿಳಿಯುವುದಾದರೆ ವಿಟಮಿನ್ ಡಿ, ವಿಟಮಿನ್ ಬಿ 6, ಮಾಗ್ಯಶಿಯಂ, ಪೊಟ್ಯಾಶಿಯಂ ಹೀಗೆ ಅನೇಕ ಆರೋಗ್ಯಕಾರಿ ಗುಣಗಳನ್ನು ಸಿಹಿ ಗೆಣಸು ಹೊಂದಿದೆ. ಇದು ನಾಲಿಗೆಯ…
ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ 6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…
ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.