ಮನರಂಜನೆ

ಬಿಗ್ ಬಾಸ್ ಕಿರೀಟ ಧರಿಸಿದ ಆಧುನಿಕ ರೈತ..!ಬಿಗ್ ಬಾಸ್ ನಲ್ಲಿ ಅನ್ಯಾಯ ಆಗಿದೆ ಎಂದ ವೀಕ್ಷಕರು…

593

ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಮಾಡರ್ನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನ ಪಡೆದಿದ್ದಾರೆ.

ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ ವಿನ್ನರ್ ಶಶಿಕುಮಾರ್ 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿಯನ್ನ ತಮ್ಮದಾಗಿಸಿಕೊಂಡರು.

ಸೀಸನ್ -6ರ 12ನೇ ಕಂಟೆಸ್ಟೆಂಟ್ ಆಗಿ ಶಶಿ ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದರು. ಮಾಡರ್ನ್ ರೈತ ಅಂತಾನೇ ಫೇಮಸ್ ಆಗಿದ್ದ ಇವರು, ಎಲ್ಲಾ ಟಾಸ್ಕ್‍ಗಳನ್ನ ಕೂಡ ಚೆನ್ನಾಗಿಯೇ ಮಾಡಿದ್ದರು. ಹೀಗಾಗಿ, ರೈತನೊಬ್ಬ ಮೊದಲ ಬಾರಿಗೆ ಬಿಗ್ ಬಾಸ್ ಗೆಲ್ತಾನೆ ಅನ್ನೋ ಮಾತು ಕೇಳಿ ಬಂದಿತ್ತು. ಅದರಂತೆ ಶಶಿಕುಮಾರ್ ಬಿಗ್‍ಬಾಸ್ ಸೀಜನ್ -6 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದ 20 ಮಂದಿಯಲ್ಲಿ ಕೊನೆಗೆ ಮೂವರು ಉಳಿದಿದ್ರು. ಕವಿತಾ ಮೊದಲು ಮನೆಯಿಂದ ಹೊರಬಂದರು. ಶಶಿ, ನವೀನ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಗಾಯಕ ನವೀನ್ ಸಜ್ಜು ಅವರೇ ವಿನ್ ಆಗುತ್ತಾರೆ ಅನ್ನೋ ಅಭಿಪ್ರಾಯ ಬಹುತೇಕರಲ್ಲಿತ್ತು. ಆದ್ರೆ ಅದು ಸುಳ್ಳಾಗಿದೆ. ಮಾಡರ್ನ್ ರೈತ ಶಶಿ ಬಿಗ್‍ಬಾಸ್ ವಿನ್ನರ್ ಆಗಿದ್ದಾರೆ. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಶಶಿ ಬಿಗ್‍ಬಾಸ್ ವಿನ್ನರ್.. ನವೀನ್ ಸಜ್ಜು ಜನರ ದಿಲ್‍ದಾರ್ ಎಂಬ ಡೈಲಾಗ್ ಹೊರಬೀಳುತ್ತಿವೆ.

ಬಿಗ್ ಬಾಸ್ ಸೀಸನ್ 1 ರಲ್ಲಿ ನಟ ವಿಜಯ್ ರಾಘವೇಂದ್ರ, ಸೀಸನ್ 2ರಲ್ಲಿ ನಿರೂಪಕ ಅಕುಲ್ ಬಾಲಾಜಿ, ಸೀಸನ್ 3 ರಲ್ಲಿ ನಟಿ ಶೃತಿ, ಸೀಸನ್ 4 ರಲ್ಲಿ ನಿರ್ದೇಶಕ ಪ್ರಥಮ್, ಸೀಸನ್ 5 ರಲ್ಲಿ ಗಾಯಕ ಚಂದನ್ ಶೆಟ್ಟಿ ಹಾಗೂ ಸೀಸನ್ 6ರಲ್ಲಿ ಮಾಡರ್ನ್ ರೈತ ಶಶಿಕುಮಾರ್ ವಿಜೇತರಾದಂತಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • nation, National, News Paper

    ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಭಾರತದ ಟಾಪ್ 5 ರಾಜ್ಯಗಳು ಇಲ್ಲಿವೆ.

    “ಓದುವುದಕ್ಕಿಂತ ದೊಡ್ಡ ಸಂತೋಷವಿಲ್ಲ, ಸ್ನೇಹಿತರಿಗಿಂತ ದೊಡ್ಡವರಲ್ಲ ..” ಎಂದು ಪ್ರಧಾನಿ ನರೇಂದ್ರ ಹೇಳಿದರು. 50 ವರ್ಷಗಳಿಗಿಂತ ಹೆಚ್ಚು ಕಾಲ ಅಂತರರಾಷ್ಟ್ರೀಯ ಸಾಕ್ಷರತಾ ದಿನವು ಎಲ್ಲರಿಗೂ ಸಾಕ್ಷರತೆಯ ಮಹತ್ವದ ಬಗ್ಗೆ ನೆನಪಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಮಿಲಿಯನ್ ಜನರಲ್ಲಿ ಸುಮಾರು 733 ಮಿಲಿಯನ್ ಜನರಿಗೆ ಓದಲು ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋ ಹೇಳಿದೆ. ನಾವು .. ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಸುಧಾರಣೆಯನ್ನು ತೋರಿಸಿದ ಭಾರತೀಯ ರಾಜ್ಯಗಳ ನೋಟ ಇಲ್ಲಿದೆ. ಜನಗಣತಿ…

  • ಭವಿಷ್ಯ

    ಈ 4 ರಾಶಿಯಲ್ಲಿ ಜನಿಸಿದ ಯುವಕ ಮತ್ತು ಯುವತಿಯರು ಸುಂದವರಾಗಿ ಇರುತ್ತಾರೆ..! ನಿಮ್ಮ ರಾಶಿಯು ಇದೆಯಾ ನೋಡಿ?

    ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ತನ್ನ ತಂದೆ ತಾಯಿ ಅಥವಾ ಅಘೋಷಿತವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ಮಾನಸಿಕ ಮತ್ತು ದೈಹಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ಅವನ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಹುಟ್ಟುವ ಸಮಯದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿ ಇದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗುತ್ತದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರಗಳಲ್ಲಿ…

  • ಸುದ್ದಿ

    ಗಾಂಧೀಜಿ ಫೋಟೋವನ್ನು ಬಿಯರ್ ಬಾಟಲುಗಳ ಮೇಲೆ ಹಾಕಿದ ತಪ್ಪಿಗೆ ಶಿಕ್ಷೆಯಾಗಿ ಕ್ಷಮೆ ಕೇಳಿದ ಇಸ್ರೇಲ್ ಕಂಪನಿ…!

    ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ. ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ…

  • ಸುದ್ದಿ

    ಟೋಲ್ ಹಾಗೂ ಟ್ಯಾಕ್ಸ್ ಹಣ ಉಳಿಸಲು ಈ ವ್ಯಕ್ತಿ ಮಾಡಿದ ಖತರ್ನಾಕ್ ಐಡಿಯಾ ಕೇಳಿದ್ರೆ ಶಾಕ್ ಆಗ್ತೀರಾ…!

    ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.  ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು,  ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…

  • ಗ್ಯಾಜೆಟ್

    ಜಿಯೋ ಗ್ರಾಹಕರೇ ಎಚ್ಚರ..!ಇನ್ಮೇಲೆ ಈ ಆಫರ್ ಸಿಗಲ್ಲ!ಯಾಮಾರಿದ್ರೆ ನಿಮ್ಮ ಜೋಬಿಗೆ ಬೀಳುತ್ತೆ ಕತ್ತರಿ..!

    ಸದ್ಯ ಭಾರತದಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು ರಿಲಯನ್ಸ್ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಿ, ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು

  • ಗ್ಯಾಜೆಟ್

    ನಿಮ್ಮ ಆಂಡ್ರಾಯ್ಡ್ ಮೊಬೈಲ್ ನ ಈ 8 ಸೀಕ್ರೆಟ್ ಆಪ್ಷನ್ಸ್ ಗಳು ನಿಮ್ಗೆ ಗೊತ್ತಿಲ್ಲಾ!ಗೊತ್ತಾಗ್ಬೇಕಂದ್ರೆ ಈ ಲೇಖನಿ ಓದಿ…

    ಬಹುಶಃ ಈಗಂತೂ ಸ್ಮಾರ್ಟ್ಫೋನ್ ಇರದೆ ಇರುವ ವ್ಯಕ್ತಿಯು ಸಿಗುವುದು ತುಂಬಾ ವಿರಳ. ಎಲ್ಲರ ಪಾಕೆಟ್ನಲ್ಲಿ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಈ ಸತ್ಯದ ಹೊರತಾಗಿಯೂ, ನಂಬಲಾಗದ ವಿಷಯೇನಂದರೆ, ಆಂಡ್ರಾಯ್ಡ್ ಫೋನ್ ನ ಎಷ್ಟೋ ವಿಶಿಷ್ಟ ಆಪ್ಷನ್ಸ್ ಗಳು ಎಷ್ಟೋ ಬಳಕೆದಾರರಿಗೆ ಗೊತ್ತಿಲ್ಲಾ ಎನ್ನುವುದೇ ಸೋಜಿಗದ ವಿಷಯ.