ಸಿನಿಮಾ

ಬಾಲಿವುಡ್’ನ ಸೆಕ್ಸಿ ನಟಿಯರ ಸೆಕ್ಸಿ ಲುಕ್’ಗೆ ಈ ‘ಹಾಟ್ ಯೋಗಿನಿ’ ಕಾರಣ..!ತಿಳಿಯಲು ಈ ಲೇಖನ

853

ಬಾಲಿವುಡ್‍ನ ಅನೇಕ ಸ್ಟಾರ್‍ಗಳ ಚಿರಯೌವ್ವನದ ಗುಟ್ಟೇ ದೀಪಿಕಾ ಮೆಹ್ತಾ. ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ಬಿಪಾಷ ಬಸು, ದೀಪಿಕಾ ಪಡುಕೋಣೆ, ವಿದ್ಯಾಬಾಲನ್, ಪ್ರೀತಿ ಜಿಂಟಾ ಸೇರಿದಂತೆ ಅನೇಕ ತಾರೆಯರ ಯೋಗ ಗುರು ಈಕೆ. 1997ರಲ್ಲಿ ಈಕೆ ಪರ್ವತಾರೋಹಣ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿ ತನಗೆ ಎದುರಾದ ಸವಾಲನ್ನು ಎದುರಿಸಲು ಈಕೆ ಕಂಡುಕೊಂಡ ಮಾರ್ಗ ಯೋಗ.

ಅಷ್ಟಾಂಗ ಯೋಗವನ್ನು ಕರಗತ ಮಾಡಿಕೊಂಡು ಇಂದು ದೀಪಿಕಾ ಮೆಹ್ತಾ ಬಳಿ ಬಾಲಿವುಡ್ ನಟ-ನಟಿಯರು, ಕಾರ್ಪೊರೇಟ್ ಉದ್ಯಮದ ಪ್ರಮುಖರು ಸೇರಿದಂತೆ ಅನೇಕ ಖ್ಯಾತನಾಮರಿಗೆ ವಿಶ್ವದಾದ್ಯಂತ ಅನೇಕರಿಗೆ ಯೋಗಾಸನಗಳನ್ನು ಕಲಿಸುತ್ತಿದ್ದಾರೆ.

ಆಧುನಿಕ ಜಗತ್ತು ತೀವ್ರ ಚಟುವಟಿಕೆಯುಳ್ಳ ಅವಿಶ್ರಾಂತ ತಾಣ. ಈ ಯುಗದಲ್ಲಿ ಜನರು ನಿರಂತರವಾಗಿ ಎಡಬಿಡದೇ ಕಾರ್ಯನಿರ್ವಹಿಸಬೇಕಾಗುತ್ತದೆ. ತಾಳ್ಮೆ, ಸಹನೆ-ಸಂಯಮ, ವ್ಯವಧಾನಕ್ಕೆ ಇಲ್ಲಿ ಜಾಗವಿಲ್ಲ. ನಮ್ಮ ಪ್ರತಿದಿನದ ವರ್ತನೆಯು ನಮ್ಮ ಪೂರ್ವಿಕರ ಕಾಲಕ್ಕಿಂತ ಸಾಕಷ್ಟು ಪರಿವರ್ತನೆಯಾಗಿ ಬೇರೆ ದಾರಿಯಲ್ಲಿ ಸಾಗಿದೆ.

ಇದರ ಪರಿಣಾಮವಾಗಿ ಹೊಸ ರೋಗರುಜಿನಗಳು, ಹೊಸ ಸಮಸ್ಯೆ, ತೊಂದರೆಗಳ ಸರಮಾಲೆ ಹಾಗೂ ಕೆಲವು ದಶಕಗಳ ಹಿಂದೆ ನಾವು ಕಂಡು ಕೇಳರಿಯದಿದ್ದ ಕಾಯಿಲೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ನಿರಂತರ ಕೆಡುಕಾಗಿ ಪರಿಣಮಿಸಿದೆ.

ಪ್ರಕೃತಿ ವಿಸ್ಮಯವಾದುದು. ಪ್ರತಿಯೊಂದು ವೈಪರೀತ್ಯಕ್ಕೂ ನಿಸರ್ಗದಲ್ಲಿ ಪರಿಹಾರವಿದೆ, ಅದಕ್ಕೊಂದು ಉಪಶಮನವಿದೆ. ನಮ್ಮ ಇಂದಿನ ದು:ಖ, ನೋವು, ಸಂಕಟ, ಸಮಸ್ಯೆಗಳಿಗೆ ಯೋಗ ಎಂಬ ಪ್ರಾಚೀನ ವಿಜ್ಞಾನದ ಮೂಲಕ ಚಿಕಿತ್ಸೆ ಕಂಡುಕೊಳ್ಳಬಹುದು. ದೇಹ, ಮನಸ್ಸು ಮತ್ತು ಆತ್ಮ ಇವುಗಳ ನಡುವೆ ಸಮನ್ವಯತೆ ಮತ್ತು ಸಮಾನತೆ ಸಾಧಿಸುವ ಸಮಗ್ರ ಸಿದ್ದಾಂತದ ಚಿಕಿತ್ಸಾ ವಿಧಾನವಾಗಿದೆ.

ಯೋಗ ಪ್ರಾಚೀನ ರೂಪದ ಒಂದು ವ್ಯಾಯಾಮವಾಗಿದ್ದು, ಸಾವಿರಾರು ವರ್ಷಗಳಿಂದ ತೀರಾ ನೈಸರ್ಗಿಕ ಹಾಗೂ ನಂಬಿಕೆ ಮಾರ್ಗದಲ್ಲಿ ಮನುಕುಲಕ್ಕೆ ಆರೋಗ್ಯದಿಂದ ಬದುಕುವ ಕೊಡುಗೆ ನೀಡಿದೆ. ಯೋಗ ಒಂದು ರೀತಿ ಪ್ರಶಾಂತ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕೆ ಆಧ್ಯಾತ್ಮಿಕ ಮಾರ್ಗವಾಗಿದೆ. ಇದೇ ಕಾರಣಕ್ಕಾಗಿ ಯೋಗಾಸನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಕಾರ್ಪೆಟ್ ಯೋಗ:-

ಯೋಗ ಯಾರೊಬ್ಬರಿಗೂ ಸೀಮಿತವಲ್ಲ ಅಥವಾ ಇದು ಪ್ರತಿದಿನದ ಕ್ರಮಬದ್ದತೆ, ಪಥ್ಯ, ಅನುಪಾನ, ಜೀವನ ಶೈಲಿಯಲ್ಲಿನ ಬದಲಾವಣೆ ಅಥವಾ ಸಾಹಸ, ಚುರುಕು ಪರಿಶ್ರಮ ಸ್ಥಿತಿಯ ದೀರ್ಘಾವಧಿ ಪ್ರಕ್ರಿಯೆಗಳ ಬೇಡಿಕೆಯಲ್ಲ. ಈ ಪ್ರಾಚೀನ ಕಲೆಯು ನಿಮಗೆ ಇಚ್ಚಾಶಕ್ತಿ ಇದ್ದರೆ ಸುಲಭವಾಗಿ ಅಭ್ಯಾಸ ಮಾಡಲು ಮತ್ತು ನೀವು ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ.

ಭಾರತೀಯ ಮೂಲದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್ ಯೋಗದ ಸ್ವರೂಪ ಪಡೆದುಕೊಂಡಿದ್ದು ಪ್ರಾಚೀನ ವಿದ್ಯೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ನೀವು ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ ಮತ್ತು ಖಿನ್ನತೆಯನ್ನು ಜಾಗ್ರತೆ, ಸಾಮಥ್ರ್ಯ ಮತ್ತು ಅಧಿಕ ಉತ್ಪಾದಕತೆಯನ್ನಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ವಾಹನ ಹರಿದು ನಾಲ್ಕು ಜನರ ಸಾವು…!

    ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್‍ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಎಚ್ ಸಚಿನ್, ಆತನ ಗೆಳೆಯರಾದ ಕಾಶಿನಾಥ್, ಗುರುನಾಥ್ ಮತ್ತು ರಘುವೀರ್ ಮೃತಪಟ್ಟವರು. ಇವರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರು ರಸ್ತೆಯಲ್ಲಿ…

  • ಸುದ್ದಿ

    ಅಲಿಯಾ ಅಂಡರ್‌ವಾಟರ್ ಫೋಟೋಶೂಟ್ ; ಹೇಗಿದೆ ಗೊತ್ತಾ,?

    ಬಾಲಿವುಡ್ ನಟಿ  ಅಲಿಯಾ ಭಟ್ ಇದೀಗ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಲ್ಲಿ ಮಿಂಚುತ್ತಿರುವ ಅಲಿಯಾ ಭಟ್  ಈಗ  ವೈರಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅಲಿಯಾ ವೋಗ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅಲಿಯಾ ಹಾಗೂ ವೋಗ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಅಲಿಯಾ ಚಿಕ್ ಮೊನೊಕಿನಿ ಧರಿಸಿದ್ದಾರೆ. ಅಲಿಯಾ ಫೋಟೋಶೂಟ್‌ನಲ್ಲಿ ನಿಯಾನ್ ಗ್ರೀನ್, ಶಿಮರಿ ಬ್ಲೂ ಹಾಗೂ ಗುಲಾಬಿ ಬಣ್ಣದ ಮೊನೊಕಿನಿಯನ್ನು ಧರಿಸಿದ್ದಾರೆ. ಅಂಡರ್‌ವಾಟರ್‌ನಲ್ಲಿ ಫೋಟೋಗಳಿಗೆ ಬೇರೆ ಬೇರೆ ರೀತಿ ಪೋಸ್‌ಗಳನ್ನು ನೀಡುವ ಮೂಲಕ ಹಾಟ್ ಆಗಿ…

  • ಸುದ್ದಿ

    Month End Mobiles Fest: ಫ್ಲಿಪ್‌ಕಾರ್ಟ್ ಆಫರ್ ಸೇಲ್…!

    ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಕೊನೆಯ ಮೊಬೈಲ್ ಫೆಸ್ಟ್ ಸೇಲ್ ನಡೆಯುತ್ತಿದೆ. ಬುಧವಾರ ಜುಲೈ 31ರವರೆಗೆ ನಡೆಯುವ ವಿಶೇಷ ಸೇಲ್‌ನಲ್ಲಿ ಗೂಗಲ್ ಪಿಕ್ಸೆಲ್ 3, ಮೋಟೋರೋಲ ಒನ್ ಪವರ್, ಹೊನೊರ್ 9N, ಪೋಕೋ F1 ಮತ್ತು ನೋಕಿಯಾ 6.1 ಮೇಲೆ ವಿಶೇಷ ಆಫರ್ ಸೇಲ್ ಘೋಷಿಸಲಾಗಿದೆ.  ಅಲ್ಲದೆ ಹೊನೊರ್ ಸರಣಿಯ ಫೋನ್‌ ಮೇಲೂ ಆಕರ್ಷಕ ಡಿಸ್ಕೌಂಟ್ ಪ್ರಕಟಿಸಲಾಗಿದೆ.  ಹೊನೊರ್ 10 Lite, ಹೊನೊರ್ 7s, ಹೊನೊರ್ 9i ಮತ್ತು ಹೊನೊರ್ 9 Lite ಮಾದರಿ ಡಿಸ್ಕೌಂಟ್‌ನಲ್ಲಿ ದೊರೆಯುತ್ತದೆ. ಉಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ…

  • ದೇಶ-ವಿದೇಶ

    ಜುಲೈ 1ರಿಂದ ಜಾರಿಗೆ ಬರುವ ಈ ವೆವಸ್ಥೆಯಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ!ತಿಳಿಯಲು ಈ ಲೇಖನಿ ಓದಿ…..

    ಜುಲೈ 1ರಿಂದ ಜಾರಿಗೆ ಬರುವ ಕೇಂದ್ರ ಸರ್ಕಾರದ ಏಕರೂಪ ತೆರಿಗೆ ವೆವಸ್ಥೆ ಜಿಎಸ್ಟಿದ(ಸರಕು ಮತ್ತು ಸೇವಾ ತೆರಿಗೆ),ಬೇರೆ ಬೇರೆ ಕ್ಷೇತ್ರಗಳಲ್ಲೂ ಬದಲಾವಣೆ ತರಲಿದೆ. ಆದ್ದರಿಂದ ಜುಲೈ 1 ರಿಂದ ಜಾರಿಗೆ ಬರುವ ಈ ತೆರಿಗೆ ವೆವಸ್ಥೆಯಿಂದ ನಮ್ಮ ದೇಶದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ಮಾಹಿತಿಗಾಗಿ ಮುಂದೆ ಓದಿ…

  • ಸುದ್ದಿ

    ಶಾಲೆಗೆ ಬಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಕ್-ಬಿರುಗಾಳಿ ಸಹಿತ ಭಾರೀ ಮಳೆ…….!

    ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ, 20ಕ್ಕೂ ಅಧಿಕ ವಿದ್ಯುತ್ ಕಂಬ, ಟಿಸಿ ಜಖಂಗೊಂಡಿದೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗೋವೇನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದ್ದು, ಇಂದು ಬೆಳಗ್ಗೆ ಕ್ಲಾಸ್‍ಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಕ್ ಆಗಿದ್ದಾರೆ. ಶಾಲೆಯಿಂದ ಹೊರಗೆ ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಕಟ್ಟಡ ವೀಕ್ಷಿಸುತ್ತಿದ್ದಾರೆ. ತಾಳೇಕೆರೆ, ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ 20ಕ್ಕೂ ಅಧಿಕ…