ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಬಿಎಂಪಿ ಆಸ್ಪತ್ರೆಗಳಲ್ಲಿ ಬಾಣಂತಿಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತರಬೇಕು ಎಂದು ನಿರ್ಧರಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವೇನೆಂದರೆ ಬಾಣಂತಿಯರಿಗಾಗಿ ಉಪಯುಕ್ತ ಪೌಷ್ಟಿಕಾಂಶ ಮತ್ತು ಅವರಿಗಾಗಿ ಹಾಲು ಸಹ ನೀಡಬೇಕು ಎಂದು ನಿರ್ಧರಿಸಲಾಗಿದೆ.
ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಬಾಣಂತಿಯರಿಗೆ ಎರಡು ಹೊತ್ತು ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿನ ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು, ಪ್ರತಿದಿನ 500 ಎಂ.ಎಲ್. ಹಾಲು ಪೂರೈಸಲು ನಿರ್ಧರಿಸಿದ್ದಾರೆ. ಯೋಜನೆಗಾಗಿ ಸುಮಾರು 15 ಲಕ್ಷ ರೂ ಮೀಸಲಿಡಲಾಗಿದೆ.ವರ್ಷಕ್ಕೆ 11 ಸಾವಿರ ಹೆರಿಗೆ ಆಗಲಿದೆಎಂದು ಅಂದಾಜಿಸಲಾಗಿದ್ದು, ಸುಮಾರು 30 ಸಾವಿರ ಲೀಟರ್ ಹಾಲುಬೇಕಾಗುತ್ತದೆ.
ಬಿಬಿಎಂಪಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಪಿಂಕ್ ಬೇಬಿ ಹೆಸರಿನಲ್ಲಿ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ 1 ಲಕ್ಷರೂ. ಬಾಂಡ್ ನೀಡಲಾಗುತ್ತಿದೆ. ಇದೀಗ ಹಾಲು ಯೋಜನೆ ಆರಂಭಿಸಲಿದೆ. 15 ಲಕ್ಷರೂ. ವೆಚ್ಚ 10 ವರ್ಷಗಳ ಹಿಂದೆ ಬಾಣಂತಿಯರಿಗೆ ಹಾಲು ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು.ಆದರೆ, ಕಾರಣಾಂತರಗಳಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಹಾಲು ನೀಡುವುದನ್ನು ಆರಂಭಿಸಲಾಗುತ್ತಿದೆ. ವಾರ್ಷಿಕ 30 ಸಾವಿರ ಲೀಟರ್ ಹಾಲು ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.ಅದಕ್ಕಾಗಿ 15 ಲಕ್ಷ ರೂ. ವ್ಯಯಿಸಲು ನಿರ್ಧರಿಸಿದ್ದಾರೆ.
ಹಾಲು ವಿತರಣೆ ಹೇಗೆ?: ಹಾಲು ಪೂರೈಕೆ ಮಾಡುವ ಸಂಸ್ಥೆಯ ಡೇರಿಗಳಿಗೆ ಬಿಬಿಎಂಪಿ ಆಸ್ಪತ್ರೆಗಳಲ್ಲಾಗುವ ಹೆರಿಗೆಗಳು ಮತ್ತು ಬಾಣಂತಿಯರ ಸಂಖ್ಯೆಯನ್ನು ತಿಳಿಸಲಾಗುತ್ತದೆ. ಆ ದಿನ ಎಷ್ಟು ಹಾಲು ಪೂರೈಸಬೇಕು ಎಂಬುದನ್ನು ಅದರಲ್ಲಿ ಹೇಳಲಾಗುತ್ತದೆ. ಹೀಗೆ ಸಂಸ್ಥೆ ಪೂರೈಸುವ ಹಾಲನ್ನು ಆಸ್ಪತ್ರೆಗಳಲ್ಲಿ ಕಾಯಿಸಿ ಬಾಣಂತಿಯರಿಗೆ ನೀಡಲಾಗುತ್ತದೆ. ತಿಂಗಳಾಂತ್ಯಕ್ಕೆ ಪೂರೈಕೆಯಾದ ಹಾಲಿನ ಪ್ರಮಾಣವನ್ನು ಗಮನಿಸಿಕೊಂಡು ಹಣ ಬಿಡುಗಡೆ ಮಾಡಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಕುರಿ’ ಪ್ರತಾಪ್ ಈಗ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾರಣ, ಬಿಗ್ ಬಾಸ್. ಅಲ್ಲದೆ, ಕನ್ನಡ ಚಿತ್ರರಂಗದ ಬೇಡಿಕೆಯ ಈ ಹಾಸ್ಯನಟನ ಬದುಕಲ್ಲಿ ಈಗ ಫಸ್ಟ್ ಟೈಮ್ ಏನೇನೋ ಆಗ್ತಿದೆಯಂತೆ! ನಟ ಕುರಿ ಪ್ರತಾಪ್ ವೃತ್ತಿಜೀನವ ಆರಂಭಿಸಿದ್ದು ಕಿರುತೆರೆ ಮೂಲಕ. ಆನಂತರ ಅವರು ಬೆಳ್ಳಿತೆರೆಯಲ್ಲಿ ಬೇಡಿಕೆಯ ಹಾಸ್ಯನಟರಾಗಿ ಮಿಂಚಿದರು. ಬಳಿಕ ಮತ್ತೆ ‘ಮಜಾ ಟಾಕೀಸ್’ ಮೂಲಕ ವೀಕ್ಷಕರಿಗೆ ಕಾಮಿಡಿ ಕಚಗುಳಿ ನೀಡಿದರು. ಇದೀಗ ಅವರು ‘ಬಿಗ್ ಬಾಸ್’ ಮನೆ ಸೇರಿಕೊಂಡಿದ್ದಾರೆ. ಜತೆಗೆ ಅವರ ಲೈಫಲ್ಲಿ ಫಸ್ಟ್ ಟೈಮ್ ಏನೇನೋ ಆಗ್ತಿದೆ!…
ಸಾಮಾನ್ಯವಾಗಿ ಹೊಸ ವರ್ಷ ಬಂತೆಂದರೆ ಆಚರಣೆಯ ಜೊತೆಗೆ ಎಷ್ಟು ದಿನ ರಜೆ ಇರುವುದು ಎಂಬ ಕುತೂಹಲ ಇದ್ದೇ ಇರುತ್ತದೆ..
2018 ರಲ್ಲಿ ರಜೆ ಬಯಸುವವರಿಗೆ ಬಂಪರ್ ಕೊಡುಗೆ ಎಂದರೇ ತಪ್ಪಾಗಲಾರದು.. ಏಕೆಂದರೆ ಬರೋಬ್ಬರಿ 23 ದಿನಗಳ ಸರ್ಕಾರಿ ರಜೆ ಬಂದಿದೆ..
ಮುಂಬೈ ಮೂಲದ 32 ಕಂಪನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಸೂಚಿಸಿದೆ . ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ . ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ಅನ್ಶುಲ್ ಮೆರ್ಸಾಂಟೈಲ್, ಎವರ್ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್…
ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ…
ಮದುವೆಗಳಲ್ಲಿ ಹಲವಾರು ವಿಚಿತ್ರ ಸನ್ನಿವೇಶಗಳು ನಡೆಯುವುದನ್ನ ಕೇಳಿರುತ್ತೇವೆ, ನೋಡಿರುತ್ತೇವೆ.ಅದರಲ್ಲಿ ಕೆಲವೊಂದು ಇನ್ನೇನು ತಾಳಿ ಕಟ್ಟುವ ಸಮಯಕ್ಕೆ ಹುಡುಗಿ ಕಾಣೆಯಾಗುವುದು, ಇಲ್ಲವಾದ್ರೆ ಹುಡುಗನೇ ಇಲ್ಲದಿರುವುದು. ಅಣ್ಣನ ಮದುವೆಯಲ್ಲಿ ತಮ್ಮ ಅಣ್ಣನ ಕೈಯಿಂದ ತಾಳಿ ಕಿತ್ತುಕೊಂಡು ವಧುವಿಗೆ ಕಟ್ಟುವುದು ಇಂತಹ ಹಲವಾರು ಸನ್ನಿವೇಶಗಳನ್ನು ಎಲ್ಲರೂ ನೋಡಿಯೇ ಇರುತ್ತೇವೆ. ಇದೇ ರೀತಿ ಇಲ್ಲಿ ವರ ಮಹಾಶಯನೊಬ್ಬ ವಧುವಿಗೆ ತಾಳಿ ತಾಳಿ ಕಟ್ಟುವ ವೇಳೆ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾನೆ.ಇದನ್ನು ತಿಳಿದೇ ಮಾಡಿದ್ದಾನೋ, ತಿಳಿಯದೇ ಮಾಡಿದ್ದಾನೋ ಗೊತ್ತಿಲ್ಲ ಆ ವಿಡಿಯೋ ಮಾತ್ರ ಈಗ ಸೋಶಿಯಲ್…
ಈಗ ಬರಲಿರುವ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಅವರು ಅಮೆರಿಕದ ಮಾಧ್ಯಮವೊಂದಕ್ಕೆ ಅಧಿಕೃತವಾಗಿ ಹೇಳಿದ್ದಾರೆ. ಇವರು ಅಮೇರಿಕದ ಕಾಂಗ್ರೆಸ್ ನಮಹ ಮೊದಲ ಮಹಿಳಾ ಹಿಂದೂ ಕಾರ್ಯಕರ್ತೆ ಯಾಗಿದ್ದಾರೆ. ಹೆಸರು ತುಳಸಿ ಗಬ್ಬಾರ್ಡ್. ಈಗ ಇವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದಾರೆ. ತುಳಸಿ ಅವರು ಸದ್ಯ ಅಮೆರಿಕ ವಿದೇಶಾಂಗ ಇಲಾಖೆಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರ ನಿರ್ಧಾರವು ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದೆ. ಗಬ್ಬಾರ್ಡ್ ಇರಾಕ್…