ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿದ್ದಾರೆ.ಪ್ರಯಾಣಿಕರೊಂದಿಗೆ ಪದ ಬಳಕೆಯ ಬದಲಿಸಿಕೊಳ್ಳಿ. ಸರ್, ಮೇಡಂ, ಅಣ್ಣ ಅಕ್ಕ ಎಂದು ಹೇಳುವುದು ಸೂಕ್ತ ಎಂದು ತಿಳಿಸಿದ್ದಾರೆ.
ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಸ್ವಂತ ವಾಹನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಾರಿಗೆ ಸಂಸ್ಥೆಗಳ ಮೇಲೆಯು ಅದೇ ಭಾವನೆ ಹೊಂದಬೇಕೆಂದು ತಿಳಿಸಿದ್ದಾರೆ.
ಬಸ್ ಚಾಲಕ, ನಿರ್ವಾಹಕರೊಬ್ಬರು ಮಾಡುವ ಕೆಲಸದಿಂದ ಇಡೀ ಸಿಬ್ಬಂದಿಗೆ ಕೆಟ್ಟ ಹೆಸರು ಬರುತ್ತದೆ. ಇಂತಹ ಪ್ರಕರಣಗಳನ್ನು ತಪ್ಪಿಸಬೇಕು. ಅಲ್ಲದೆ, ಸಣ್ಣಪುಟ್ಟ ಅಪಘಾತಗಳು ನಡೆದ ಸಂದರ್ಭದಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಬೇಕು. ವೈದ್ಯಕೀಯ ಸೇವೆ ದೊರಕಿಸಿಕೊಡಬೇಕು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಮುಷ್ಕರದ ಸಂದರ್ಭದಲ್ಲಿ ವಿನಾಕಾರಣ ಬಸ್ ಗಳು ಹಾನಿಗೀಡಾಗಿದ್ದು, ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವ ಅವರು, ಪ್ರಯಾಣಿಕರು ಸಣ್ಣಪುಟ್ಟ ಕಿರಿಕಿರಿ ಮಾಡಿದರೂ, ಮೆಲುದನಿಯಲ್ಲೇ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡ ಹೆಂಡತಿ” ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…
ಪ್ರತಿಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ತಮ್ಮ ವರಸೆ ಬದಲಾಯಿಸಿದ್ದಾರೆ. ಎಲ್ಲ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಕಳೆದೆರಡು ದಿನಗಳಲ್ಲಿ ಐದು ಬಾರಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಧಿವೇಶನದಲ್ಲಿ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್ ಹಾಗೂ ಶಾಸಕರ ಸಲಹೆ ಪಡೆದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಲು ಸಿದ್ದರಾಮಯ್ಯನವರು ನಡೆಸಿದ ಪ್ರಯತ್ನದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೈಕಮಾಂಡ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಸಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಇವರ ಆಪ್ತರು ಹಾಗೂ…
ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!
ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಶನಿವಾರ ರಾತ್ರಿ ವಿಧಿವಶರಾಗಿದ್ದು, ಆ ಕ್ಷಣದಿಂದ ಅಂತ್ಯಸಂಸ್ಕಾರದವರೆಗೆ ಬೆಂಗಳೂರು ಪೊಲೀಸರು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿಯೊಂದು ಹಂತದಲ್ಲೂ ಕರ್ನಾಟಕ ಪೊಲೀಸರು ಸಂಯಮ ತೋರಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಖುದ್ದಾಗಿ ನಿಂತು ತಮ್ಮ ಅಧೀನ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಂಸದೆ ಜಯಪ್ರದಾ, ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಅಣ್ಣಾಮಲೈ ಅವರ ವಿರುದ್ಧ ಆಕ್ರೋಶ…
ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2022 ರ ವೇಳೆಗೆ ದೇಶದ ಎಲ್ಲ ಬಡವರಿಗೆ ಮನೆ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಗ್ರಾಮ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ನಿರ್ಮಾಣದ ಅವಧಿಯನ್ನು ಕಡಿಮೆ ಮಾಡಲಾಗಿದೆ. ಪ್ರತಿಯೊಂದು ಮನೆಗೂ ಶೌಚಾಲಯ, ವಿದ್ಯುತ್ ಹಾಗೂ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. 2022 ರ ವೇಳೆಗೆ ಎಲ್ಲಾ ಬಡವರಿಗೂ ಕಂಡಿತವಾಗಿ ಸ್ವಂತ ಮನೆ ಸೌಲಬ್ಯ ಒದಗಿಸಿಕೊಡುತ್ತೆನೆಂದು ಹೇಳಿ…