ಸುದ್ದಿ

ತುಂಬು ಗರ್ಭಿಣಿಯಾದ ಬಹುಭಾಷಾ ನಟಿ ಸಮೀರಾ ರೆಡ್ಡಿ ಅವರಿಂದ ಅಂಡರ್‌ವಾಟರ್ ಫೋಟೋಶೂಟ್…!

89

ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ತುಂಬು ಗರ್ಭಿಣಿಯಾಗಿದ್ದು, ಅವರು ಈಗ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಮೀರಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.ಇತ್ತೀಚೆಗೆ ಸಮೀರಾ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟನ್ನು ಪ್ರೇರಣಾ ಬೇಯೋಸ್ ಅವರಿಂದ ಮಾಡಿಸಿದ್ದು, ಸಮೀರಾ ಅಂಡರ್‌ವಾಟರ್ ಫೋಟೋಶೂಟ್‍ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಮೀರಾ, “ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಆನಂದಿಸಿದ್ದೇನೆ. ನಾನು ನನ್ನ ಜೀವನ ವೃತ್ತಿಯಲ್ಲಿ ಮಾಡಿಸಿದ ರೋಮಾಂಚಕ ಫೋಟೋಶೂಟ್‍ಗಳಲ್ಲಿ ಇದು ಒಂದಾಗಿದೆ. ನಾನು ಕೆಲವೇ ಸಮಯದಲ್ಲಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇದು ಒಳ್ಳೆಯ ಅನುಭವ” ಎಂದು ಹೇಳಿದ್ದಾರೆ.

ಸಮೀರಾ ಫೋಟೋ ನೋಡಿ ಕೆಲವರು, ನೀವು ಈ ಫೋಟೋದಲ್ಲಿ ಸೂಪರ್ ಕೂಲ್ ಆಗಿ ಕಾಣಿಸುತ್ತಿದ್ದೀರಾ ಎಂದು ನಿಮಗೆ ಅನಿಸಿರಬಹುದು. ಆದರೆ ಪ್ರೆಗ್ನೆನ್ಸಿ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವ ಅವಶ್ಯಕತೆ ಆದರೂ ಏನಿತ್ತು. ದಯವಿಟ್ಟು ಹುಷಾರಾಗಿರಿ. ಮಕ್ಕಳು ದೇವರು ಕೊಟ್ಟ ಉಡುಗೊರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು, ಗರ್ಭಿಣಿಯಾಗಿರುವ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ನಿಮಗೆ ತಲೆ ಕೆಟ್ಟಿದ್ದೀಯಾ ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಸಮೀರಾ ಅವರ ಈ ಫೋಟೋಗಳಿಗೆ ಯಾವುದೇ ಫಿಲ್ಟರ್ ಅಥವಾ ಫೋಟೋಶಾಪ್ ಮಾಡಲಿಲ್ಲ. ಈ ಫೋಟೋಗಳು ಸುಂದರವಾಗಿ ಬಂದಿದ್ದು, ಇದರಿಂದ ಸಮೀರಾ ಖುಷಿಯಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಈ ಫೋಟೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರ ಇದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ