ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ತಿಂಡಿಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಹಾಕುವ ಮುನ್ನ ಯೋಚಿಸಿ.
ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ವಸ್ತುಗಳನ್ನು ಇಡಬೇಡಿ. ಒಂದು ವೇಳೆ ಪ್ಲಾಸ್ಟಿಕ್ ಪಾತ್ರೆ ಬಳಸುತ್ತಿದ್ದರೆ ಅದರ ತಳಭಾಗದಲ್ಲಿ #2, #3, #4 ಅಥವಾ #5 ಎಂದು ಗುಣಮಟ್ಟ ಬರೆಯಲಾಗಿದೆಯೇ ನೋಡಿ. ಹಾಗಿದ್ದರೂ ಪ್ಲಾಸ್ಟಿಕ್ ಪಾತ್ರೆ ಬಳಸುವಾಗ ಕೆಲವೊಂದು ಅಂಶಗಳ ಬಗ್ಗೆ ಗಮನಹರಿಸುವುದು ಒಳ್ಳೆಯದು.
ಮರು ಬಿಸಿ ಮಾಡಬೇಡಿ:-
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ವಸ್ತುಗಳನ್ನು ಮೈಕ್ರೋಓವನ್ ನಲ್ಲಿಟ್ಟು ಬಿಸಿ ಮಾಡುವ ಕೆಲಸ ಮಾಡಬೇಡಿ. ಇದು ಒಂದು ರೀತಿಯ ರಾಸಾಯನಿಕ ಹೊರ ಸೂಸುವುದು. ಬಿಸಿ ಮಾಡಿದ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕುವುದೂ ಒಳ್ಳೆಯದಲ್ಲ.
ಬಿಸಿ ನೀರಿನಿಂದ ದೂರವಿಡಿ:-
ಪ್ಲಾಸ್ಟಿಕ್ ಪಾತ್ರೆಗಳನ್ನು ಬಿಸಿ ನೀರಿನಿಂದ ತೊಳೆಯುವುದು ಅಥವಾ ಬಿಸಿ ನೀರನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಶೇಖರಿಸಿಡುವುದು ಸುರಕ್ಷಿತವಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಬಿಡುಗಡೆಯಾಗುತ್ತದೆ.
ಹೀಗಾಗಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಶೇಖರಿಸಿಡುವ ಮೊದಲು ಇವುಗಳ ಬಗ್ಗೆ ಗಮನ ಹರಿಸುವುದು ಒಳ್ಳೆದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ ಜಿಲ್ಲೆಯ 6 ವಿಧಾನ ಸಭಾ ಮತ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಪೂರ್ಣ; ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ; ನಿಗಾವಹಿಸಲು ವಿವಿಧ ತಂಡಗಳ ರಚನೆ: ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಕೋಲಾರ(ಕರ್ನಾಟಕ ವಾರ್ತೆ)ಮಾ.29: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು…
ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ. ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ…
ಭಾರತವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ವರ್ಷಗಳಿಂದ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ ವರ್ಷ ಭಾರತದಲ್ಲೆ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೆ ಸ್ಥಾನ ಪಡೆದುಕೊಂಡ ಛತ್ತೀಸ್‌ಗಢದ ಅಂಬಿಕಾಪುರ ಹೊಸತೊಂದು ಪ್ರಯತ್ನದ ಮೂಲಕ ವಿಶ್ವದ ಗಮನ ಸೆಳೆದಿದೆ. ಹೌದು ಛತ್ತಿಸ್ಗಢದ ಅಂಬಿಕಾಪುರ ಸ್ವಚ್ಛತಾ ಕಾರ್ಯಗಳಲ್ಲಿ ಬೇರೆ ನಗರಗಳಿಗಿಂತ ಬಹಳ ಮುಂದುವರೆದಿದೆ. ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಗಳಿಸಿದೆ, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಗರದಲ್ಲಿ…
ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಇದೀಗ ಕರ್ನಾಕಟವೂ ದುಬಾರಿ ಟ್ರಾಫಿಕ್ ದಂಡದ ಮೊತ್ತವನ್ನು ಕಡಿತಗೊಳಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಮೊತ್ತವನ್ನು10 ಪಟ್ಟು ಹೆಚ್ಚಿಸಲಾಗಿತ್ತು. ಇದೀಗ ಕರ್ನಾಟಕ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದರೆ ಕರ್ನಾಟಕ ಸರ್ಕಾರ ಟ್ರಾಫಿಕ್ ದಂಡವನ್ನು ಎಷ್ಟು ಕಡಿತಗೊಳಿಸಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸಿದರೆ…
ಬರಿ ಒಂದು ಮೀನಿಗೆ ಗ್ರಾಹಕರೊಬ್ಬರು 5 ಲಕ್ಷ ರೂ. ನೀಡಲು ಮುಂದಾದ್ರೂ ಮಾಲೀಕ ಮಾತ್ರ ಮಾರಾಟ ಮಾಡಲ್ಲ ಎಂದು ಹೇಳಿದ ಯಾಕೆ ಗೊತ್ತಾ,.! ಈ ವಿಶೇಷ ಮೀನಿನ ಮೇಲೆ ಉರ್ದುವಿನಲ್ಲಿ ‘ಅಲ್ಲಾಹ’ ಎಂದು ಬರೆಯಲಾಗಿದ್ದು, ಕೆಲವರು ಜಲಚರಕ್ಕಾಗಿ ಲಕ್ಷಾಂತರ ರೂಪಾಯಿ ನೀಡಲು ಮುಂದಾಗುತ್ತಿದ್ದಾರೆ. ಇಷ್ಟಕ್ಕೂ ಆ ಮೀನಿನ ವಿಶೇಷತೆಯಾದರೂ ಏನು ಗೊತ್ತಾ ಇಲ್ಲಿದೆ ನೋಡಿ ಅಚ್ಚರಿ ಮುಡಿಸುವ ವಿಷಯ. ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಕೈರಾನಾದಲ್ಲಿರುವ ಈ ವಿಶೇಷ ಮೀನು ನೋಡಲು ಜನರು ದೂರದಿಂದ ಆಗಮಿಸುತ್ತಿದ್ದಾರೆ. ಶಬಾಬ್…
ನವದೆಹಲಿ: ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಹಳದಿ ಮಾರ್ಗದ ಮೆಟ್ರೋ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳಿ ಮೇಲೆ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದ್ದಾರೆ. ಮಂಗಳವಾದ ಬೆಳಗ್ಗೆ ಸುಮಾರು 9.30ಕ್ಕೆ ಹಳದಿ ಮಾರ್ಗದಲ್ಲಿ ಕುತಬ್ ಮಿನಾರ್ ನಿಲ್ದಾಣದಿಂದ ಮೆಟ್ರೋ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗೆ ಚಲಿಸುತ್ತಿರುವಾಗಲೇ ಸುಲ್ತಾನಪುರ ನಿಲ್ದಾಣಕ್ಕೆ ಮೊದಲೇ ನಿಂತಿದೆ. ಕೊನೆಗೆ ಎಮೆರ್ಜೆನ್ಸಿ ಗೇಟ್‍ನಿಂದ ಪ್ರಯಾಣಿಕರನ್ನು ಹೊರ ಬಂದು, ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ…