ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮ್ಯಾನ್ಮಾರ್ನಲ್ಲಿ ಹೆಚ್ಚುತ್ತಿರುವ ರೊಹಿಂಗ್ಯಾ ವಿರೋಧಿ ಹಿಂಸಾಚಾರದಿಂದ ಕಂಗೆಟ್ಟಿರುವ ರೊಹಿಂಗ್ಯಾ ಮುಸ್ಲಿಮರು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಸಮುದ್ರ ದಾಟಿ ಬಾಂಗ್ಲಾದೇಶಕ್ಕೆ ಬರುತ್ತಿದ್ದಾರೆ.

ಇತ್ತೀಚೆಗೆ 13 ವರ್ಷದ ಬಾಲಕ ನಬಿ ಹುಸೈನ್ ಪ್ಲಾಸ್ಟಿಕ್ ತೈಲ ಡಬ್ಬವನ್ನು ಬಳಸಿ ಬಾಂಗ್ಲಾದೇಶಕ್ಕೆ ಬರುವ ಮೂಲಕ ತನ್ನ ಜೀವ ಉಳಿಸಿಕೊಂಡಿದ್ದಾರೆ. ಅವನಿಗೆ ಈಜಲು ಗೊತ್ತಿರಲಿಲ್ಲ ಹಾಗೂ ಮ್ಯಾನ್ಮಾರ್ನಲ್ಲಿನ ತನ್ನ ಗ್ರಾಮದಿಂದ ಪಲಾಯನಗೈಯುವ ಮೊದಲು ಸಮುದ್ರವನ್ನೂ ನೋಡಿರಲಿಲ್ಲ. ಆದರೆ, ಖಾಲಿ ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡ ನಬಿ ಹುಸೈನ್ ಬಂಗಾಳ ಕೊಲ್ಲಿಯಲ್ಲಿ 4 ಕಿ.ಮೀ. ದಾಟಿ ಬಾಂಗ್ಲಾದೇಶಕ್ಕೆ ಬಂದರು.

ಮ್ಯಾನ್ಮಾರ್ನ ರೊಹಿಂಗ್ಯಾ ಮುಸ್ಲಿಮರು ಅಲ್ಲಿನ ಹಿಂಸಾಚಾರದಿಂದ ಎಷ್ಟು ಕಂಗೆಟ್ಟಿದ್ದಾರೆಂದರೆ, ಕೆಲವರು ಸಮುದ್ರವನ್ನು ಈಜಿ ದಾಟಲು ಪ್ರಯತ್ನಿಸುತ್ತಿದ್ದಾರೆ.
ಒಂದೇ ವಾರದಲ್ಲಿ, 40ಕ್ಕೂ ಅಧಿಕ ಬಾಲಕರು ಮತ್ತು ಯುವಕರು ಪ್ಲಾಸ್ಟಿಕ್ ಡಬ್ಬಗಳನ್ನು ತೆಪ್ಪದಂತೆ ಬಳಸಿಕೊಂಡು ನಾಫ್ ನದಿಯನ್ನು ಅಳಿವೆ ಪ್ರದೇಶದಲ್ಲಿ ದಾಟಿ ಶಾ ಪೊರಿರ್ ದ್ವೀಪಕ್ಕೆ ಬಂದಿದ್ದಾರೆ.

‘‘ನಾನು ತುಂಬಾ ಹೆದರಿದ್ದೆ. ಇದು ನನ್ನ ಕೊನೆಯ ದಿನವೆಂದೇ ನಾನು ಭಾವಿಸಿದ್ದೆ’’ ಎಂದು ನಬಿ ಹೇಳುತ್ತಾನೆ.
ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ನಲ್ಲಿ ದಶಕಗಳಿಂದ ವಾಸಿಸುತ್ತಿದ್ದರೂ, ಬೌದ್ಧ ಬಹುಸಂಖ್ಯಾತ ದೇಶವು ಅವರನ್ನು ಬಾಂಗ್ಲಾದೇಶದಿಂದ ಬಂದ ಅತಿಕ್ರಮಣಕಾರಿಗಳಂತೆ ಪರಗಣಿಸುತ್ತಿದೆ. ಅಲ್ಲಿನ ಸರಕಾರವು ಅವರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದೆ.

ರೊಹಿಂಗ್ಯಾ ಮುಸ್ಲಿಮರು ಜಗತ್ತಿನ ಅತ್ಯಂತ ಮರ್ದನಕ್ಕೊಳಗಾದ ಅಲ್ಪಸಂಖ್ಯಾತ ಗುಂಪು ಎಂಬುದಾಗಿ ವಿಶ್ವಸಂಸ್ಥೆ ಹೇಳಿದೆ.
‘‘ಮ್ಯಾನ್ಮಾರ್ನಲ್ಲಿ ನಾವು ಸಂಕಷ್ಟ ಎದುರಿಸಬೇಕಾಗಿದೆ. ಹಾಗಾಗಿ, ಅದಕ್ಕಿಂತ ಸಮುದ್ರದಲ್ಲಿ ಮುಳುಗುವುದೇ ಉತ್ತಮ ಎಂದು ನಾವು ಯೋಚಿಸಿದೆವು’’ ಎಂದು ಪ್ಲಾಸ್ಟಿಕ್ ಡಬ್ಬವನ್ನು ಹಿಡಿದು ಈಜುತ್ತಾ ಬಾಂಗ್ಲಾದೇಶಕ್ಕೆ ಬಂದ 18 ವರ್ಷದ ಕಮಲ್ ಹುಸೈನ್ ಹೇಳುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮಲಾಡ್ನ ಕರೂರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಗೋಡೆ ಕುಸಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಈ ದುರಂತ ನಡೆದಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಗುಡಿಸಲುಗಳ ಮೇಲೆಯೇ 20 ಅಡಿ ಉದ್ದ ಹಾಗೂ ಬಹು ಎತ್ತರದ ಗೋಡೆ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿರುವ ಪರಿಣಾಮ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಫ್ ಪಡೆ…
ಬ್ಯಾಂಕ್ ನಿಂದ ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ . ನವದೆಹಲಿ ,ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಹೌದು.. ಖ್ಯಾತ…
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…..ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು. ಬಾಳೆ ಹೂವಿನಲ್ಲಿ ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳಿವೆ. ಇದರ ಸಾಂಬಾರು ಮಾಡಿಕೊಂಡು ತಿಂದರೆ ಸಾಕಷ್ಟು ಪ್ರಯೋಜನಗಳಿವೆ. * ಬಾಳೆ ಹೂವಿನಲ್ಲಿರುವ ಇಥನಾಲ್ ಅಂಶ ಗಾಯವನ್ನು ಬೇಗ ಗುಣವಾಗುವಂತೆ ಮಾಡುತ್ತದೆ. ಹಾಗೂ ಇನ್ಫೆಕ್ಷನ್ ಕಡಿಮೆ ಮಾಡಲು ಸಹಾಯಕ. * ಬಾಳೆ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್,…
ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.
ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು….