ಸುದ್ದಿ

ಪ್ರೇಕ್ಷಕರಿಗೆ ಮತ್ತೊಂದು ಗುಡ್​ ನ್ಯೂಸ್ ಕೊಡಲಿರುವ ಕಿಚ್ಚ ಸುದೀಪ್

59

ಅಭಿನಯ ಚಕ್ರವರ್ತಿ ಬಾದ್​ಷಾ ಕಿಚ್ಚ ಸುದೀಪ್. ಬಹುಭಾಷೆಯಲ್ಲಿ ಬೇಡಿಕೆ ಇರುವ ಬಹುಮುಖ ಪ್ರತಿಭೆ. ಪೈಲ್ವಾನ್ ಸಕ್ಸಸ್ ಸಂಭ್ರಮ , ಪೈರಸಿ ಸಂಗ್ರಾಮವನ್ನು ಮುಗಿಸಿಕೊಂಡು ಈಗ ಪೋಲೆಂಡ್​ ದೇಶಕ್ಕೆ ಹಾರಿದ್ದಾರೆ. ಕಾರಣ ಕೋಟಿಗೋಬ್ಬ -3 ಸಿನಿಮಾದ ಶೂಟಿಂಗ್​​​.

ಕಳೆದ ಎರಡು ವರ್ಷದಿಂದ ‘ಕೋಟಿಗೊಬ್ಬ-3’ ಚಿತ್ರದ ಕಾರ್ಯಗಳು ಪ್ರಗತಿಯಲ್ಲಿವೆ. ನಾಲ್ಕೈದು ಶೆಡ್ಯೂಲ್ ಶೂಟಿಂಗ್​ ಅನ್ನು ಕೂಡ ಚಿತ್ರತಂಡ ಮುಗಿಸಿಕೊಂಡಿದೆ. ಈಗ ಸೂರಪ್ಪ ಬಾಬು ನಿರ್ಮಾಣದ ಈ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ದೂರದ ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸಾಗುತ್ತಿದೆ.

‘ಕೋಟಿಗೊಬ್ಬ-3’ ಸಿನಿಮಾದ ಚಿತ್ರೀಕರಣಕ್ಕೆ ಪೋಲೆಂಡ್​​ಗೆ ತೆರಳಿರುವ ನಟ ಸುದೀಪ್ ಮತ್ತು ಚಿತ್ರತಂಡ ಅಲ್ಲಿನ ರಾಯಭಾರಿ ಕಚೇರಿಗೆ ಭೇಟಿ ನೀಡಿದೆ. ನಟ ಸುದೀಪ್ ಅವರು ಪೋಲೆಂಡ್​​ನ ರಾಯಭಾರಿ ಅಧಿಕಾರಿಯ ಜೊತೆಗಿರುವ ಫೋಟೋವನ್ನು ಟ್ವೀಟ್ಟರ್​​​ನಲ್ಲಿ ಟ್ವೀಟ್ಟಿಸಿದ್ದಾರೆ. ಜೊತೆಗೆ ಅಲ್ಲಿನ ಅನಿವಾಸಿ ಭಾರತಿಯರನ್ನು ಕಂಡು ಖುಷ್ ಆಗಿದ್ದಾರೆ. ಆ ಫೋಟೋಗಳನ್ನು ಕೂಡ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ ರನ್ನ.

‘ಕೋಟಿಗೊಬ್ಬ-3’ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್. ಅದ್ಧೂರಿ ಚೇಸಿಂಗ್ ದೃಶ್ಯಗಳನ್ನು ಪೋಲೆಂಡ್ ದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಮೊದಲು ‘ಕೋಟಿಗೊಬ್ಬ-3’ ಚಿತ್ರದ ಚೇಸಿಂಗ್​​ ದೃಶ್ಯದ ಕೆಲ ಭಾಗವನ್ನು ಈಗಾಗಲೇ ಚಿತ್ರೀಕರಿಸಲಾಗಿದೆ. ಈಗ ಅದರ ಮುಂದುವರೆದ ಭಾಗವನ್ನು ಪೋಲೆಂಡ್ನಲ್ಲಿ ಶೂಟ್​ ಮಾಡಲಾಗುತ್ತಿದೆ. ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಇದು ಸೃಷ್ಟಿ ಕರ್ತ ಬ್ರಹ್ಮದೇವರ, ವಿಶ್ವದ ಏಕೈಕ ದೇವಾಲಯ!ಈ ದೇವಾಲಯ ಎಲ್ಲಿದೆ ಗೊತ್ತಾ?

    ಭಾರತದ ಹಿಂದೂ ಧರ್ಮವು ಸನಾತನವಾಗಿದ್ದು, ಈ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರತಿಯೊಂದು ದೇವರುಗಳ ದೇವಸ್ಥಾನಗಳು, ಪೂಜಾ ಮಂದಿರಗಳು ನಮಗೆ ಸಿಗುತ್ತವೆ. ಆದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇವರು ಸೃಷ್ಟಿ, ಸ್ಥಿತಿ, ಲಯ
    ಕರ್ತರಾಗಿದ್ದು, ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ.ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.

  • inspirational, ದೇವರು, ದೇವರು-ಧರ್ಮ

    ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

    ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  • ಆರೋಗ್ಯ

    ಬಿಳಿಕೂದಲುನಿಂದ ತುಂಬಾ ಅವಮಾನಿತರಾಗಿದ್ದೀರಾ?ತಲೆಕೆಡಿಸ್ಕೊಬೇಡಿ!ಇಲ್ಲಿದೆ ಸುಲಭ ಮನೆಮದ್ದು…..

    ಹಿಂದೆ ಕೇವಲ ವಯಸ್ಸಾದರವರಲ್ಲಿ ಬಿಳಿಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕಿನಿಂದಾಗಿ ಬಿಳಿಕೂದಲು ಸಣ್ಣ ವಯಸ್ಸಿನ ಮಕ್ಕಳಲ್ಲಿ ಕೂಡ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.

  • ಸುದ್ದಿ

    ಸಾವಿನಲ್ಲಿಯೂ ಸಹ ಸಾರ್ಥಕತೆ, ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ…!

    ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ. ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ…

  • ಸಾಧನೆ

    ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಕೋಲಾರ ಗಾಯಿತ್ರಿ ಆಯ್ಕೆ

    ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ  ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.  ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ….

  • ತಂತ್ರಜ್ಞಾನ

    ಆಲೂಗಡ್ಡೆ ಮತ್ತು ಈರುಳ್ಳಿ ಉಪಯೋಗಿಸಿ ಟೇಬಲ್ ಫ್ಯಾನ್ ತಿರುಗಿಸಿದ ಭೂಪ..!ತಿಳಿಯಲು ಇದನ್ನು ಓದಿ..

    ಆಲೂಗಡ್ಡೆ ಮತ್ತು ಈರುಳ್ಳಿಯನ್ನು ನೀವು ಏತಕ್ಕಾಗಿ ಬಳಸುತ್ತೀರಿ..? ಇಂಥದ್ದೊಂದು ಪ್ರಶ್ನೆ ಕೇಳಿದರೆ ಯಾರೇ ಆದರೂ ಅಡುಗೆ ತಯಾರಿಸಲು ಬಳಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಆಲೂಗಡ್ಡೆ ಮತ್ತು ಈರುಳ್ಳಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.