ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ.
ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ ಬಿಚ್ಚಿಟ್ಟಿದ್ದಾರೆ.
ನಂಜನಗೂಡಿನಲ್ಲಿ ಪುರೋಹಿತ ವೃತ್ತಿಯಲ್ಲಿರುವ ವೆಂಕಟೇಶ್, ಎರಡು ದಿನಗಳ ಕಾಲ ಬ್ರಿಡ್ಜ್ ಕೆಳಗೆ ಅಡಗಿ ಕುಳಿತಿದ್ದರಂತೆ, ಊಟ-ತಿಂಡಿ ಇಲ್ಲದೇ ಸುಸ್ತಾಗಿದ್ದ ವೆಂಕಟೇಶ್, ನೀರಿನ ರಭಸ ಕಡಿಮೆಯಾದ ಬಳಿಕ ಹೊರಬಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವೆಂಕಟೇಶ್, ತಿನ್ನೋಕ್ಕೆ ಊಟ ಇಲ್ಲದೆ, ನೀರು ಕಡಿಮೆಯಾದ ಬಳಿಕ ಬಂದೆ. ಈ ರೀತಿಯ ಸಾಹಸ ನನಗೆ ಹುಟ್ಟಿನಿಂದ ಬಂದಿದೆ. ನಾನು ಸೈಕಲ್ನಲ್ಲಿ ಹಿಮಾಲಯಕ್ಕೆ ಹೋಗಿದ್ದೇನೆ. ನನಗೆ ಇದೆಲ್ಲ ಅಭ್ಯಾಸ ಇದೆ, ಯಾವುದೇ ಆತಂಕ ಬೇಡ. ನನಗೆ ನದಿಯಲ್ಲಿ ಈಜಾಡಿ ಬಂದು ದಡ ಸೇರುವ ಸಾಮರ್ಥ್ಯ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ…
ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ…
“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.
ಸ್ನಾನ ಮಾಡುವ ವಿಷಯಕ್ಕೆ ಬಂದ್ರೆ ಕೆಲವರು ದಿನಾ ಮತ್ತೆ ಕೆಲವರು ಅವರವರ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ನಮಗೆ ಕೆಲಸಗಲಿರಲಿ ಬೇರೆ ಏನಾದ್ರೂ ಇರಲಿ ಪ್ರತಿನಿತ್ಯ ಸ್ನಾನ ಮಾಡುವುದು ಒಳಿತು.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ…
ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು…