Sports, ಕ್ರೀಡೆ

ಪ್ರತಿಷ್ಠೆಗಾಗಿ ಭಾರತ ಮತ್ತು ಪಾಕ್ ಕೊನೆಯ ಹೋರಾಟ ಇಲ್ಲಿ ಗೆಲುವು ಯಾರದು?

859

‘ಕಡುವೈರಿಗಳ ವಿರುದ್ಧ ಫೈನಲ್​ನಲ್ಲಿ ಗೆದ್ದೆ’ ಎನ್ನುವ ಪ್ರತಿಷ್ಠೆಯೇ ಎರಡೂ ತಂಡಕ್ಕೆ ಮುಖ್ಯವಾಗಿದೆ.

ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ.  ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಭಾನುವಾರ ಎದುರಾಗುತ್ತಿವೆ. ಆ ಕಾರಣಕ್ಕಾಗಿ ಅತೀವ ಕುತೂಹಲಕ್ಕೆ ಕಾರಣವಾಗಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವ 14.11 ಕೋಟಿ ರೂ. ಹಾಗೂ ಮಿರುಗುವ ಟ್ರೋಫಿಗಿಂತ ಮುಖ್ಯವಾಗಿ ‘ಕಡುವೈರಿಗಳ ವಿರುದ್ಧ ಫೈನಲ್​ನಲ್ಲಿ ಗೆದ್ದೆ’ ಎನ್ನುವ ಪ್ರತಿಷ್ಠೆಯೇ ಎರಡೂ ತಂಡಕ್ಕೆ ಮುಖ್ಯವಾಗಿದೆ.

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಟೂರ್ನಿಯ 5 ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡಿರುವ ‘ದಿ ಓವಲ್’ ಮೈದಾನದಲ್ಲಿ ಭಾರತಕ್ಕೆ ಟೂರ್ನಿಯ 3ನೇ ಪಂದ್ಯವಾಗಿದೆ. ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತ್ತು.

ಇನ್ನೊಂದೆಡೆ ಪಾಕಿಸ್ತಾನ ಟೂರ್ನಿಯಲ್ಲಿ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಪಂದ್ಯ ಆಡಲಿದೆ. ಐಸಿಸಿ ಟೂರ್ನಿಗಳಲ್ಲಿ ಅಭೂತಪೂರ್ವ ಸ್ಥಿರ ನಿರ್ವಹಣೆ ತೋರುವ ಭಾರತ ತಂಡ, ಪಾಕಿಸ್ತಾನದ ವಿರುದ್ಧವೂ ಇಂಥದ್ದೊಂದು ದಾಖಲೆ ಕಾಯ್ದುಕೊಂಡಿದೆ. ಅಲ್ಲದೆ, ಹಾಲಿ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು 124 ರನ್​ಗಳಿಂದ ಬಗ್ಗುಬಡಿದ ಆತ್ಮವಿಶ್ವಾಸ ಕೊಹ್ಲಿ ಟೀಮ್ಲ್ಲಿದೆ. ಆ ಬಳಿಕ ಪಾಕಿಸ್ತಾನ ತಂಡ ಅದ್ಭುತ ನಿರ್ವಹಣೆ ತೋರಿದ್ದರೂ, ಫೈನಲ್​ನಲ್ಲಿ ನಮ್ಮ ತಂಡ ಭಿನ್ನ ನಿರ್ವಹಣೆ ತೋರುವ ಅಗತ್ಯವಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದು 22 ಆಟಗಾರರ ನಡುವೆ ಕ್ರಿಕೆಟ್​ನ ಕೇವಲ ಒಂದು ಪಂದ್ಯವಾಗಿರದೆ ಉಭಯ ದೇಶಗಳ ನಡುವಿನ ಪ್ರತಿಷ್ಠೆಯೇ ಪಣಕ್ಕಿಟ್ಟಂತೆ ಅಭಿಮಾನಿಗಳು ವರ್ತಿಸುವುದು ಪಂದ್ಯದ ಮೇಲಿನ ಕ್ರೇಜ್ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಕ್ರಿಕೆಟ್​ಅನ್ನು ಮಾತ್ರವೇ ಗಮನಿಸುವುದಾದರೆ, ಪಾಕಿಸ್ತಾನ ತಂಡ ವಿರಾಟ್ ಕೊಹ್ಲಿ ಟೀಮ್ ಯಾವುದೇ ವಿಭಾಗಕ್ಕೂ ಸಮವಲ್ಲ. ಆದರೆ, ಅನ್​ಪ್ರಿಡಿಕ್ಟಬಲ್ ಟೀಮ್ ಖ್ಯಾತಿಯ ಪಾಕ್ ತನ್ನ ದಿನದಂದು ಸಾಂಘಿಕ ನಿರ್ವಹಣೆ ನೀಡುತ್ತದೆ.

ಪಾಕ್​ನ ಅಗ್ರ ಮೂವರು ಬ್ಯಾಟ್ಸ್​ಮನ್​ಗಳಾದ ಅಜರ್ ಅಲಿ, ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಟೀಮ್ ಇಂಡಿಯಾದ ಅಗ್ರ ಮೂವರು ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿಗೆ ಯಾವ ಹಂತದಲ್ಲೂ ತಾಳೆಯಾಗುವುದಿಲ್ಲ. ಆದರೆ, ಮೊಹಮದ್ ಆಮಿರ್, ಹಸನ್ ಅಲಿ, ಜುನೇದ್ ಖಾನ್ ಹಾಗೂ ರುಮ್ಮಾನ್ ರಯೀಸ್ ಇರುವ ಪಾಕ್ ತಂಡದ ವೇಗದ ಬೌಲಿಂಗ್ ವಿಭಾಗ ನಿಜಕ್ಕೂ ಬಲಿಷ್ಠ. ವಿಶ್ವ ನಂ.1 ದಕ್ಷಿಣ ಆಫ್ರಿಕಾ ಎದುರು ಇದೇ ಶಕ್ತಿ ಪಾಕ್​ಗೆ ಜಯ ತಂದಿತ್ತು. ಈಗ ಇವರ ಮೇಲೆ ನಂಬಿಕೆ ಇರಿಸಿಯೇ ಪಾಕಿಸ್ತಾನ ಗೆಲುವಿನ ನಿರೀಕ್ಷೆ ಇಟ್ಟಿದೆ.

ಇನ್ನು ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಮೂವರೊಂದಿಗೆ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯರ ನೈಜ ಆಟ ಇನ್ನೂ ಸಾಬೀತಾಗಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳೇ ಮಿಂಚಿರುವ ಕಾರಣ ಮಧ್ಯಮ ಕ್ರಮಾಂಕದ ಶಕ್ತಿ ತೋರ್ಪಡಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ, ಅಪರೂಪದ ವೈಫಲ್ಯ ಅಗ್ರ ಕ್ರಮಾಂಕದಿಂದ ದಾಖಲಾದಲ್ಲಿ, ಮಧ್ಯಮ ಕ್ರಮಾಂಕ ಮಿಂಚುವ ವಿಶ್ವಾಸವನ್ನು ನಾಯಕ ಕೊಹ್ಲಿ ವ್ಯಕ್ತಪಡಿಸಿದ್ದಾರೆ.

ಭಾರತ ನಂ. 1 

ಭಾರತ ತಂಡ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದರೆ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಸ್ಥಾನಕ್ಕೇರಲಿದೆ. ಸೆಮೀಸ್ ಗೆಲುವಿನ ಬಳಿಕ 2ನೇ ಸ್ಥಾನಕ್ಕೇರಿರುವ ಭಾರತ ತಂಡ (118), ಫೈನಲ್ ಸೋತರೆ ಮತ್ತೆ 3ನೇ ಸ್ಥಾನಕ್ಕೆ ಕುಸಿಯಲಿದೆ. ಆದರೆ ಕೊಹ್ಲಿ ಪಡೆ ಗೆದ್ದರೆ ಅಂಕ ಗಳಿಕೆಯಲ್ಲಿ ದಕ್ಷಿಣ ಆಫ್ರಿಕಾ (119) ಜತೆ ಸಮಬಲ ಸಾಧಿಸಲಿದೆಯಲ್ಲದೆ, ದಶಾಂಶ ಲೆಕ್ಕಾಚಾರದಲ್ಲಿ ಅಗ್ರಸ್ಥಾನಕ್ಕೇರಲಿದೆ. ಭಾರತ ಈಗಾಗಲೆ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ. 1 ಸ್ಥಾನದಲ್ಲಿದ್ದರೆ, ಟಿ20 ರ್ಯಾಂಕಿಂಗ್​ನಲ್ಲಿ 4ನೇ ಸ್ಥಾನದಲ್ಲಿದೆ. ಸದ್ಯ 7ನೇ ಸ್ಥಾನದಲ್ಲಿರುವ ಪಾಕ್ ಗೆದ್ದರೆ 6ನೇ ಸ್ಥಾನಕ್ಕೇರಲಿದ್ದು, ಸೋತರೆ 8ನೇ ಸ್ಥಾನಕ್ಕೆ ಕುಸಿಯಲಿದೆ.

ಭಾರತ ಗೆದ್ದರೆ….

  • ಸತತ 2 ಬಾರಿ ಟ್ರೋಫಿ ಗೆದ್ದ ಆಸೀಸ್ ದಾಖಲೆ ಸಮ
  • ಒಟ್ಟಾರೆ 3 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ದಾಖಲೆ
  • ಭಾರತಕ್ಕೆ 6ನೇ, ನಾಯಕ ಕೊಹ್ಲಿಗೆ ಚೊಚ್ಚಲ ಐಸಿಸಿ ಪ್ರಶಸ್ತಿ
  • ಕೋಚ್ ಅನಿಲ್ ಕುಂಬ್ಳೆಗೆ ಚೊಚ್ಚಲ ಐಸಿಸಿ ಟ್ರೋಫಿ
  • ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಸ್ಥಾನಕ್ಕೆ ಬಡ್ತಿ

ಪಾಕಿಸ್ತಾನ ಗೆದ್ದರೆ…

  • ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಸಾಧನೆ
  • ಐಸಿಸಿಯ ಎಲ್ಲ ಪ್ರಶಸ್ತಿ ಗೆದ್ದ ನಾಲ್ಕನೇ ತಂಡ ಎನ್ನುವ ಸಾಧನೆ
  • 1992ರ ಬಳಿಕ ಮೊದಲ ಐಸಿಸಿ ಏಕದಿನ ಪ್ರಶಸ್ತಿ ಗೆಲುವು
  • 2009ರ ಬಳಿಕ ಮೊದಲ ಬಾರಿ ಐಸಿಸಿ ಟೂರ್ನಿ ಚಾಂಪಿಯನ್
  • ಭಾರತ ವಿರುದ್ಧ ಲೀಗ್ ಸೋಲಿಗೆ ಸೇಡು ತೀರಿಸಿದ ಸಮಾಧಾನ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕಾಡುವ ಡ್ಯಾಂಡ್ರಫ್‌ಗೆ ಇಲ್ಲಿದ ಮನೆ ಮದ್ದು, ಒಮ್ಮೆ ಟ್ರೈ ಮಾಡಿ ನೋಡಿ.

    ತಲೆ ಹೊಟ್ಟಿನ (Dandruff) ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ವೇಳೆ ಕಾಡಿಯೇ ಕಾಡುತ್ತೆ. ಇದಕ್ಕಿದೆ ಸರಳ ಪರಿಹಾರ. ಮೆಂತ್ಯಪುಡಿಯನ್ನು ತುಸು ಕಾಲ ನೆನೆಸಿಟ್ಟು, ನೆಲ್ಲಿಕಾಯಿ ಪುಡಿಯೊಂದಿಗೆ ಕಲೆಸಿ, ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಲೋಳೆಸರದ ಬಿಳಿ ತಿರುಳನ್ನು ನೆನೆಸಿ, ದಾಸವಾಳದ ಎಲೆಯೊಂದಿಗೆ ರುಬ್ಬಿ ಹಚ್ಚಿಕೊಳ್ಳಿ. ಮೊಸರಿನೊಂದಿಗೆ ಹಚ್ಚಿಕೊಂಡರೆ ಮೆಹಂದಿಯೂ ಪರಿಣಾಮಕಾರಿ. ಕಡಲೆಹಿಟ್ಟು ಸೀಗೆಯೊಂದಿಗೆ ನಂತರ ತಲೆ ತೊಳೆದುಕೊಳ್ಳಬೇಕು. ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ಸುಟ್ಟು, ತಿರುಳನ್ನು ತೆಗೆದು ರುಬ್ಬಿ ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಕೊಬ್ಬರಿ ಎಣ್ಣೆ…

  • ಉಪಯುಕ್ತ ಮಾಹಿತಿ

    ಮೊಟ್ಟೆ ಚಿಪ್ಪು ಬಿಸಾಡಬೇಡಿ!ಮತ್ತೆ ತಿನ್ನೋಕೆ ಆಗುತ್ತಾ ಅಂತೀರಾ!ಈ ಲೇಖನ ಓದಿ ಶೇರ್ ಮಾಡಿ…

    ಮೊಟ್ಟೆ ಪೌಸ್ಟಿಕವಾದ ಆಹಾರ.ನಾವು ಸಾಮಾನ್ಯವಾಗಿ ಮೊಟ್ಟೆ ಬೇಯಿಸಿದಾಗ ಅಥವಾ ಆಮ್ಲೆಟ್ ಮಾಡಲು ಹೋದಾಗ ಮೊಟ್ಟೆ ಹೊಡೆದು ಮೊಟ್ಟೆ ಚಿಪ್ಪನ್ನು ಬಿಸಾಡುತ್ತೇವೆ.

  • ಜ್ಯೋತಿಷ್ಯ

    ಶಾಸ್ತ್ರಗಳ ಪ್ರಕಾರ ಯಾವ ರಾಶಿಯವರು ಯಾವ ಬಣ್ಣದ ಬಳೆ ಹಾಕಿದ್ರೆ ಗಂಡನ ಆಯಸ್ಸು ಹೆಚ್ಚಾಗುತ್ತೆ ನೋಡಿ

    ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು ವೃದ್ಧಿಗೆ ನೀವೂ ಬಯಸಿದ್ದರೆ ಈ ಸುಲಭ ಉಪಾಯವನ್ನು ಅನುಸರಿಸಿ. ರಾಶಿಗೆ ಅನುಗುಣವಾಗಿ ಯಾವುದೇ ಮಹಿಳೆ ತನ್ನ ಬಳೆಯ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಆಕೆಯ ಪತಿ ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು…

  • inspirational, ಸುದ್ದಿ

    ಗಾಂಧಿಜಿ ಪ್ರತಿಮೆಯ ಮುಂದೆ ಧರಣಿಗೆ ಕುಳಿತ ಕಾಂಗ್ರೆಸ್ ಶಾಸಕರು….!

    ಕರ್ನಾಟಕದ ಕಾಂಗ್ರೆಸ್ ನಾಯಕರು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ಧರಣಿ ಆರಂಭಿಸಿದ್ದಾರೆ. ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ 8 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ದೂರು ನೀಡಲಾಗಿದೆ. ಮಂಗಳವಾರ ವಿಧಾನಸೌಧ, ವಿಕಾಸಸೌಧ ನಡುವಿ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಕರ್ನಾಟಕದ ಮೈತ್ರಿ ಸರ್ಕಾರವನ್ನು ಉರುಳಿಸಲು ‌ಮೋದಿ ಸಂಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ನೇರವಾಗಿ ಆಪರೇಷನ್ ಕಮಲ ನಡೆಸಿದ್ದಾರೆ….

  • ಉಪಯುಕ್ತ ಮಾಹಿತಿ

    ಗೂಗಲ್ ಪ್ಲೇ ಸ್ಟೋರ್ ನಲ್ಲಿ ದುಡ್ಡು ಕೊಟ್ಟು ಖರೀದಿಸಿದ ಆ್ಯಪ್ ಬೇಡವೆನಿಸಿದಾಗ, ಅದಕ್ಕೆ ಪಾವತಿಸಿದ ಮೊತ್ತ ಮರಳಿ ಪಡೆಯುವುದು ಹೇಗೆ..?

    ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಯಾವುದೇ ಆ್ಯಪ್ ಬೇಕಾದರೂ ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಿದೆ. ಆದರೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಎಲ್ಲ ಆ್ಯಪ್‌ಗಳು ಉಚಿತವಲ್ಲ. ಕೆಲವೊಂದು ಆ್ಯಪ್‌ಗಳಿಗೆ ನಾವು ಹಣ ಪಾವತಿಸಬೇಕಾಗುತ್ತದೆ. ಕೆಲವೊಂದು ಆ್ಯಪ್‌ಗಳ ಆರಂಭಿಕ ಸೇವೆಗಳು ಉಚಿತವಾಗಿದ್ದರೂ, ಪ್ರೀಮಿಯಂ ಸೇವೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸುವುದು ಅನಿವಾರ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾವುದಾದರೂ ಆ್ಯಪ್ ಅನ್ನು ಖರೀದಿಸಿದ್ದರೆ ಮತ್ತು ಹಣ ಪಾವತಿಸಿದ್ದರೆ, ಅದನ್ನು ಮರಳಿ ಪಡೆಯುವುದು ಹೇಗೆ ಎಂದು ಇಲ್ಲಿವಿವರಿಸಲಾಗಿದೆ. ಜತೆಗೆ ಕೆಲವೊಂದು ಆ್ಯಪ್‌ಗಳು ಟ್ರಯಲ್‌ ಲಭ್ಯವಿದ್ದರೂ, ಅಚಾನಕ್…

  • ಸಿನಿಮಾ

    ಕೊನೆಗೂ ತಮ್ಮ ಮಗಳ ಫೋಟೋವನ್ನು ಬಹಿರಂಗ ಮಾಡಿದ ಯಶ್ ರಾಧಿಕಾ ಪಂಡಿತ್ ದಪತಿ..ಯಾವ ಹೆಸರು ಇಟ್ಟಿದ್ದಾರೆ ನೋಡಿ…

    ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ. ಅಕ್ಷಯ ತೃತೀಯ ದಿನ ಮಂಗಳವಾರದಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು…