ದೇವರು-ಧರ್ಮ

ಪ್ರತಿಯೊಬ್ಬ “ಹಿಂದೂ ಧರ್ಮ”ದವರು ಕೂಡ ತಿಳಿಯಲೇಬೇಕಾದ ಈ ವಿಷಯಗಳು..!ಏನೆಂದು ತಿಳಿಯಬೇಕಾದ್ರೆ ಈ ಲೇಖನ ಓದಿ…

2811

ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

ಹಿಂದು ಧರ್ಮವು ವಿಶ್ವದ ಪುರಾತನ ಧರ್ಮ ವಾಗಿದ್ದು, ಓಂ ಕಾರ – ಹಿಂದೂ ಧರ್ಮದ ಒಂದು ಪವಿತ್ರಾಕ್ಷರ, ಗಣಪತಿ – ಹಿಂದೂ ಧರ್ಮೀಯರು ಅಪಾರವಾಗಿ ನಂಬುವ ದೇವರು

ವೇದಗಳು (4)
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.

ರಾಶೀಗಳು (12)
ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ,
ಧನು, ಮಕರ, ಕುಂಭ, ಮೀನ.

ಋತುಗಳು (6) ಮತ್ತು ಮಾಸ (12)
ವಸಂತ (ಚೈತ್ರ-ವೈಶಾಖ), ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ), ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ), ಶಿಶಿರ (ಮಾಘ-ಫಾಲ್ಗುಣ).

ದಿಕ್ಕುಗಳು (10)
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ,
ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ.

ಸಂಸ್ಕಾರಗಳು (16)
ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ,
ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ,
ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ.

ಸಪ್ತ ಋಷಿಗಳು (7)
ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ.

ಸಪ್ತ ಪರ್ವತಗಳು
ಹಿಮಾಲಯ (ಉತ್ತರ ಭಾರತ), ಮಲಯ (ಕರ್ನಾಟಕ ಮತ್ತು ತಮಿಳನಾಡು) ,
ಸಹ್ಯಾದ್ರೀ (ಮಹಾರಾಷ್ಟ್ರ) , ಮಹೇಂದ್ರ (ಉಡಿಸಾ), ವಿಂಧ್ಯಾಚಲ (ಮಧ್ಯಪ್ರದೇಶ),
ಅರವಲೀ (ರಾಜಸ್ಥಾನ), ರೈವತಕ (ಗಿರನಾರ-ಗುಜರಾತ)

ಜ್ಯೋತಿರ್ಲಿಂಗಗಳು (12)
ಸೋಮನಾಥ ನಾಗೇಶ (ಗುಜರಾಥ), ಮಲ್ಲಿಕಾರ್ಜುನ (ಆಂಧ್ರಪ್ರದೇಶ),
ರಾಮೇಶ್ವರ (ತಮಿಳನಾಡು), ಮಹಾಕಾಲೇಶ್ವರ (ಉಜ್ಜೈನ),
ಓಂಕಾರೇಶ್ವರ (ಮಧ್ಯಪ್ರದೇಶ), ಕೇದಾರನಾಥ (ಉತ್ತರಾಂಚಲ),
ವಿಶ್ವನಾಥ (ಉತ್ತರ ಪ್ರದೇಶ), ಪರಳೀ ವೈಜನಾಥ, ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ , ಭೀಮಾಶಂಕರ (ಎಲ್ಲ ಮಹಾರಾಷ್ಟ್ರ).

ಪೀಠಗಳು (4)
ಶಾರದಾಪೀಠ (ದ್ವಾರಕಾ-ಗುಜರಾತ), ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ),
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ), ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)

ಚಾರಧಾಮಗಳು
ಬದ್ರಿನಾಥ (ಉತ್ತರಾಂಚಲ), ರಾಮೇಶ್ವರಮ (ತಮಿಳನಾಡು),
ದ್ವಾರಿಕಾ (ಗುಜರಾತ), ಜಗನ್ನಾಥಪುರೀ (ಉಡೀಸಾ).

ಸಪ್ತಪುರಿಗಳು :-
ಅಯೋಧ್ಯಾ, ಮಥುರಾ, ಕಾಶೀ (ಎಲ್ಲ ಉತ್ತರ ಪ್ರದೇಶ),
ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು) ,
ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ).

ಚಾರಕುಂಭಗಳು :-
ಹರಿದ್ವಾರ (ಉತ್ತರಖಂಡ), ಪ್ರಯಾಗ (ಉತ್ತ ಪ್ರದೇಶ),
ಉಜ್ಜೈನ (ಮಧ್ಯ ಪ್ರದೇಶ) , ನಾಶಿಕ(ಮಹಾರಾಷ್ಟ್ರ)

ಪವಿತ್ರ-ಸ್ಮರಣೀಯ ನದಿಗಳು
ಗಂಗಾ , ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ,
ಕೃಷ್ಣಾ , ಬ್ರಹ್ಮಪುತ್ರಾ.

ಅಷ್ಟ ಲಕ್ಷ್ಮೀಯರು (8)
ಆದಿಲಕ್ಷ್ಮೀ , ವಿದ್ಯಾಲಕ್ಷ್ಮೀ , ಸೌಭಾಗ್ಯಲಕ್ಷ್ಮೀ,
ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ,
ಭೋಗಲಕ್ಷ್ಮೀ, ಯೋಗಲಕ್ಷ್ಮೀ.

ಯುಗಗಳು (4) ಸತ್ಯಯುಗ, ತ್ರೇತಾಯುಗ,ದ್ವಾಪರಯುಗ, ಕಲಿಯುಗ.

ಪುರುಷಾರ್ಥ (4) ಧರ್ಮ , ಅರ್ಥ , ಕಾಮ , ಮೋಕ್ಷ.

ಪ್ರಕೃತಿಯ ಗುಣಗಳು (3) ಸತ್ವ , ರಜ , ತಮ.

ನಕ್ಷತ್ರಗಳು (28)
ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ,ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ,
ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ,ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ,
ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ,ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ,
ಉತ್ತರಾಭಾದ್ರಪದಾ, ರೇವತೀ, ಅಭಿಜಿತ.


ದಶಾವತಾರ (10)
ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಗೋವರ್ಧನ ಪೂಜೆ…!ಇದರ ಇನ್ನಳೆಯೇನು ಗೊತ್ತಾ?

    ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…

  • ಜೀವನಶೈಲಿ

    ಮದುವೆಯಾದ ಮಹಿಳೆಯರು ಕಾಲುಂಗುರ ಧರಿಸುವುದರ ಹಿಂದೆ ಇರುವ ವೈಜ್ಞಾನಿಕ ಕಾರಣ ಗೊತ್ತಾ.?ತಿಳಿಯಲು ಇದನ್ನು ಓದಿ ಮರೆಯದೇ ಶೇರ್ ಮಾಡಿ…

    ಮದುವೆಯಲ್ಲಿ ಮದುಮಗಳಿಗೆ ತಾಳಿಯೊಂದಿಗೆ ಕಾಲುಂಗುರವನ್ನು ಸಹ ಹಾಕುತ್ತಾರೆ, ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮುತೈದೆಗೆ ತಾಳಿ, ಕುಂಕುಮ, ಹೂವು, ಬಳೆ, ಇವುಗಳೊಂದಿಗೆ ಕಾಲುಂಗುರವು ಬಹಳ ಪ್ರಮುಖ ಪಾತ್ರವಹಿಸುತ್ತದೆ, ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಕಾಲುಂಗುರ ಧರಿಸುವುದರ ಹಿಂದೆ ಅಡಗಿದೆ ವೈಜ್ಞಾನಿಕ ಕಾರಣ:- ವೇದಗಳ ಅನುಸಾರ ಎರಡು ಕಾಲು ಬೆರಳಿಗೆ ಬೆಳ್ಳಿ ಕಾಲುಂಗುರ ಧರಿಸುವುದರಿಂದ ತಿಂಗಳ ಮುಟ್ಟು ಸರಿಯಾಗಿ ಆಗುವುದಲ್ಲದೇ ಗರ್ಭಧಾರಣೆ…

  • ಸುದ್ದಿ

    ನೀವೆಂದಾದರೂ ಸಮುದ್ರದ ತೀರದಲ್ಲಿ ಈ ತರಹದ ಮೊಟ್ಟೆಗಳನ್ನು ಕಂಡಿದ್ದೀರಾ..? ಏನಿದು ಗೊತ್ತೇ..?

    ಮಿನುಗುವ ಮುತ್ತುಗಳು ಸಮುದ್ರ ತೀರದಲ್ಲಿ ಬಿದ್ದಿದ್ದಾವೋ ಏನೋ ಎಂಬಂತೆ ಕಾಣುವ ದೃಶ್ಯ.ಪ್ರಕೃತಿ ದೇವಿಯೇ ಮುತ್ತನ್ನು ಪೋಣಿಸಿ ಹಾಸಿಗೆ ಮಾಡಿದ್ದಾಳೋ ಏನೋ ಎಂಬಂತಹ ನೋಟ…ಎಂತಹವರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ಸೊಬಗು.ಈ ಸೌಂದರ್ಯ `ರಾಶಿ’ಗೆ ಸಾಕ್ಷಿಯಾಗಿದ್ದು ಫಿನ್‌ಲ್ಯಾಂಡಿನ ಮರ್ಜಾನಿಯೆಮಿ ಕಡಲತೀರ. ಇಷ್ಟು ದಿನ ಮರಳಿಂದ ಆವೃತ್ತವಾಗಿದ್ದ ಈ ಬೀಚ್ ಮೊನ್ನೆ ಸಾವಿರಾರು `ಹಿಮದ ಮೊಟ್ಟೆ’ಗಳ ಹಾಸಿನಿಂದ ಅಚ್ಚರಿಗೆ ಕಾರಣವಾಗಿತ್ತು. ಸುಮಾರು 30 ಮೀಟರ್ ಅಂದರೆ 10 ಅಡಿಯಷ್ಟು ಪ್ರದೇಶದಲ್ಲಿ ಈ ಮೊಟ್ಟೆಗಳ ರಾಶಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದನ್ನು ಕಂಡು…

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

    ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…

  • ವಿಸ್ಮಯ ಜಗತ್ತು

    ವರ್ಷದ 365 ದಿನ ನಿರಂತರವಾಗಿ ಮಳೆ ಬೀಳುವ ಗ್ರಾಮ..!ತಿಳಿಯಲು ಈ ಲೇಖನ ಓದಿ..

    ಪ್ರತಿ ವರ್ಷವೂ ಮಾನ್ಸೂನ್‌ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.

  • ಆರೋಗ್ಯ

    ರಾತ್ರಿ ಮಲಗುವ ಮೊದಲು ಬೆಲ್ಲ ತಿಂದರೆ ಏನಾಗುತ್ತದೆ ಗೊತ್ತಾ, ಬಹಳಷ್ಟು ಜನರಿಗೆ ಗೊತ್ತಿಲ್ಲ ಬೆಲ್ಲದ ಮಹತ್ವ.

    ಹಳೆಯ ಕಾಲದಲ್ಲಿ ಜನರು ಬೆಲ್ಲವನ್ನು ಮಾತ್ರ ಸಿಹಿ ವಸ್ತುವಾಗಿ ಹೆಚ್ಚು ಸೇವಿಸುತ್ತಿದ್ದರು ಆದರೆ ಕಾಲ ಕಳೆದಂತೆ ಇತ್ತೀಚಿನ ದಿನಗಳಲ್ಲಿ ಜನರು ಸಿಹಿ ಎಂದರೆ ಸಕ್ಕರೆಯ ಮೊರೆ ಹೋಗುತ್ತಾರೆ, ಸಕ್ಕರೆ ಸಿಹಿಯಾಗಿ ಹೆಚ್ಚು ಪ್ರಚಾರ ಪಡೆದಿದೆ. ನಮ್ಮ ಆಯುರ್ವೇದದಲ್ಲಿ ಉತ್ತಮ ಆಹಾರವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ ಬೆಲ್ಲವನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 12, ಆಂಟಿಆಕ್ಸಿಡೆಂಟ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ….