ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ.
![]()
ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳೋದು ಕಷ್ಟ.

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು. ಈ ಕಾಯಿಲೆ ಹೆಚ್ಚಾದರೆ ರಕ್ತಸ್ರಾವ ಕಂಡು ಬರುವುದು ಹಾಗೂ ಮಲವಿಸರ್ಜನೆಗೆ ಹೋಗುವಾಗ ವಿಪರೀತ ನೋವು ಕಂಡು ಬರುವುದು, ಕೂರುವುದು, ನಡೆಯುವುದು ಕೂಡ ಕಷ್ಟವಾಗುವುದು.

ಮನೆಯಲ್ಲಿ ಸಿಗುವ ಸರಳ ಔಷಧಿಗಳಿಂದ ಈ ರೋಗವನ್ನು ಸಾಕಷ್ಟು ನಿಯಂತ್ರಣಕ್ಕೆ ತರಬಹುದು. ಈ ರೋಗಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಇಲ್ಲಿವೆ…
*ಒಂದು ದೊಡ್ಡ ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ ಅದರಲ್ಲಿ ರೋಗಿಯು ಕುಳಿತುಕೊಳ್ಳಬೇಕು. ಮಲವಿಸರ್ಜನೆಯ ನಂತರ ದಿನಕ್ಕೆ 2-3 ಬಾರಿ ಕುಳಿತುಕೊಂಡರೆ ಒಳಿತು.
*ಮೂಲಂಗಿಯನ್ನು ಜಜ್ಜಿ ರಸ ತೆಗೆದು ಬೆಳಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಯಲ್ಲಿ 5-6 ಚಮಚ ಸೇವಿಸಬೇಕು.
*ಮೂಲಂಗಿ ರಸದೊಂದಿಗೆ ಗೋಪಿಚಂದನವನ್ನು ಅರೆದು ಮೊಳಕೆಗೆ ಲೇಪ ಮಾಡಬೇಕು.
*ಮೂಲಂಗಿಯನ್ನು ಹೆಚ್ಚಿ, ಅದರ ಸೊಪ್ಪಿನೊಂದಿಗೆ ತಿನ್ನಲು ದಿನಕ್ಕೆರಡು ಸಾರಿಯಂತೆ ಕೊಡಬೇಕು.
*ಮುಟ್ಟಿದರೆ ಮುನಿ ಸೊಪ್ಪನ್ನು ಅರೆದು ಕಲ್ಕವನ್ನು ಬಟ್ಟೆಯ ಮೇಲೆ ಲೇಪಿಸಿ ಗುದದ್ವಾರದಲ್ಲಿ ಕಟ್ಟಬೇಕು.
*ಶತಾವರಿ ಬೇರು ಒಂದು ತೊಲದಷ್ಟು (12 ಗ್ರಾಂ) ಜಜ್ಜಿ ಒಂದು ಲೋಟದಷ್ಟು ಮಜ್ಜಿಗೆ ಬೆರೆಸಿ ದಿನಕ್ಕೊಂದು ಬಾರಿಯಂತೆ 3 ದಿವಸ ನೀಡಬೇಕು.
*ಲೋಳೆಸರದ ಎಲೆಯ ತಿರುಳನ್ನು 1 ಚಮಚದಷ್ಟು ದಿನಕ್ಕೆ 3 ಬಾರಿಯಂತೆ 15 ದಿವಸದವರೆಗೆ ಕೊಡಬೇಕು.
*ಊಟದಲ್ಲಿ ಸುವರ್ಣಗೆಡ್ಡೆ, ವಿವಿಧ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನು ಯಥೇಚ್ಛವಾಗ ಬಳಸಿ.
*ಯಥೇಚ್ಛವಾಗಿ ನೀರು, ಎಳನೀರು, ಮಜ್ಜಿಗೆ, ಬಾಳೆಹಣ್ಣುಗಳನ್ನು ಸೇವಿಸಿ.
*ನಿಯಮಿತ ವ್ಯಾಯಾಮ, ನಡಿಗೆ ಮತ್ತು ಮಲವಿಸರ್ಜನೆ.
*ನಾರಿನಾಂಶವುಳ್ಳ ತರಕಾರಿಗಳನ್ನು ಸೇವಿಸಿ

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಹಲವಾರು ಖ್ಯಾತ ನಟರ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ. ಸಾಕ್ಷಿ ಸಮೇತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿರುವ ಶ್ರೀ ರೆಡ್ಡಿ ಹಲ್ ಚಲ್ ಸೃಷ್ಟಿಸಿದ್ದಾರೆ. ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಮತ್ತು ಬಹುಭಾಷಾ ನಟಿ ತ್ರಿಶಾ ಅವರು ಪರಸ್ಪರ ಚುಂಬಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಅದರೊಂದಿಗೆ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ದಗ್ಗುಬಾಟಿ ತಮ್ಮನ್ನು…
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ
ಕಳೆದ ವಾರವಷ್ಟೇ ಆರ್’ಬಿಐ ನೂತನ 200 ಹಾಗೂ 50 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು.
ಶಾಸ್ತ್ರಗಳ ಪ್ರಕಾರ ಜನರು ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಜನರ ದೃಷ್ಠಿಯನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಾರೆ. ಮನೆ ಮತ್ತು ಕಚೇರಿಯಲ್ಲಿ ನಿಂಬೆ ಹಣ್ಣು ಹಾಗೂ ಹಸಿ ಮೆಣಸನ್ನು ಕಟ್ಟುವುದು ಕೂಡ ಇದ್ರಲ್ಲಿ ಒಂದು. ನಿಂಬೆ-ಮೆಣಸಿನಲ್ಲಿ ತಂತ್ರ-ಮಂತ್ರದ ಜೊತೆ ಮನೋವಿಜ್ಞಾನದ ಸಂಬಂಧವೂ ಅಡಗಿದೆ. ನಿಂಬೆ ಹಣ್ಣು ಸೇರಿದಂತೆ ಹಸಿ ಮೆಣಸಿನಕಾಯಿ ಇನ್ನಿತರೇ ಅಡುಗೆಗೆ ಮಾತ್ರ ಮೀಸಲಾಗಿಲ್ಲ.ತಂತ್ರ-ಮಂತ್ರಕ್ಕೂ ಸಂಬಂಧವಿದೆ.ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನ ಖಾರದ ರುಚಿ ಕೆಟ್ಟ ದೃಷ್ಟಿಯುಳ್ಳವರ ಗಮನವನ್ನು ಬೇರೆಡೆಗೆ…
ಆಲ್ದೂರು ಸಮೀಪದ ಹಳಿಯೂರು ಕಾಲೊನಿ ವಾಸಿ ಲೋಕೇಶ್, ಸರಿತಾ ಅವರ 3 ತಿಂಗಳ ಮಗು ಆರವ್ನನ್ನು ಜಾಂಡೀಸ್ ಕಾಯಿಲೆ ಕಾರಣ ಹಾಸನದ ಮಣಿ ಆಸ್ಪತ್ರೆಗೆ ಕಳೆದ ಗುರುವಾರ ದಾಖಲಿಸಲಾಗಿತ್ತು. ಮಣಿ ಆಸ್ಪತ್ರೆಯವರು ಮಗುವಿನ ಪೋಷಕರಿಂದ ಹಣ ಕಟ್ಟಿಸಿಕೊಂಡು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ ಹಸ್ತಾಂತರಿಸಿಬಿಟ್ಟರು. ಮಗುವಿನ ಅಂತ್ಯಕ್ರಿಯೆ ನಡೆಸಲು ತಾಯಿ ಸರಿತಾ ಅವರ ತವರು ಮನೆ ಮೂಡಿಗೆರೆ ಸಮೀಪದ ಭಾರತಿ ಆಂಬ್ಯುಲೆನ್ಸ್ನಲ್ಲಿ ತೆಗೆದುಕೊಂಡು…
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ಯುವತಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ…