ಸುದ್ದಿ

ಪುಲ್ವಾಮಾ ದಾಳಿ ಬಗ್ಗೆ ನನಗೆ ಗೊತ್ತಿಲ್ಲ!ಯಾರೋ ಕೆಲವು ಜನ ಬಂದು ಇಲ್ಲಿ ದಾಳಿ ಮಾಡಿದಾಗ ಇಡೀ ಪಾಕಿಸ್ತಾನವನ್ನು ದೂಷಿಸುವುದು ತಪ್ಪು ಎಂದ ಸ್ಯಾಮ್ ಪಿತ್ರೋಡಾ..!

52

ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ, ಪಾಕಿಸ್ತಾನದ ಬಾಲಕೋಟ್​​ನಲ್ಲಿ ನಡೆಸಿದ ಏರ್​ಸ್ಟ್ರೈಕ್ ಬಗ್ಗೆ ಓವರ್​ಸೀಸ್​ ಇಂಡಿಯನ್ ನ್ಯಾಷನಲ್​​​ ಕಾಂಗ್ರೆಸ್​​ ಅಧ್ಯಕ್ಷ ಸ್ಯಾಮ್ ಪಿತ್ರೋಡ ಪ್ರಶ್ನೆ ಎತ್ತಿದ್ದಾರೆ. 300 ಜನರನ್ನ ಕೊಂದಿದ್ದರೆ ಸರಿ. ಆದ್ರೆ ಅದಕ್ಕೆ ಸಾಕ್ಷಿ ಕೊಡ್ತೀರಾ? ಅದನ್ನು ಪ್ರೂವ್​ ಮಾಡ್ತೀರಾ? ಎಂದು ಕೇಳಿದ್ದಾರೆ. ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮುಂಬೈ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಅಲ್ಲಿಂದ ಬಂದ 8 ಮಂದಿ ಇಲ್ಲಿ ಕೃತ್ಯ ಎಸಗಿದ್ದನ್ನು ಪರಿಗಣಿಸಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ದೂಷಣೆ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ನಾನು ನಂಬಿಕೆಯನ್ನು ಇಟ್ಟಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಈ ರೀತಿಯ ದಾಳಿ ನಡೆಯುತ್ತಲೇ ಇರುತ್ತದೆ. ಮುಂಬೈ ದಾಳಿಯಾದಾಗ ನಾವು ವಿಮಾನವನ್ನು ಪಾಕಿಸ್ತಾನಕ್ಕೆ ಕಳುಹಿಸಬಹುದಿತ್ತು. ಆದರೆ ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ ಅಲ್ಲ ಎಂದು ಹೇಳಿದರು.

ಸುದ್ದಿ ಸಂಸ್ಥೆಯೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಪಿತ್ರೋಡ, ನಿಜಕ್ಕೂ ದಾಳಿ ನಡೆಯಿತಾ? ನಿಜಕ್ಕೂ 300 ಜನರನ್ನು ಕೊಲ್ಲಲಾಯಿತಾ? ನನಗೆ ಗೊತ್ತಿಲ್ಲ. ಒಬ್ಬ ಪ್ರಜೆಯಾಗಿ ಇದನ್ನು ಕೇಳುವುದು ನನ್ನ ಕರ್ತವ್ಯ. ವಿದೇಶಿ ಮಾಧ್ಯಮಗಳು ಈ ಏರ್​​ಸ್ಟ್ರೈಕ್​ ಬಗ್ಗೆ ಬೇರೆಯದ್ದೇ ರೀತಿಯಲ್ಲಿ ವರದಿ ಮಾಡಿವೆ ಎಂದು ಹೇಳಿದ್ರು.

ನಾನು ಗಾಂಧಿವಾದಿ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನಂಬಿರುವವನು ಎಂದು ಹೇಳಿದ್ರು. ಹಾಗಿದ್ರೆ ಪಾಕಿಸ್ತಾನದೊಂದಿಗೆ ಮಾತುಕತೆ ಮಾಡಿ ಪರಿಹಾರ ಕಂಡುಕೊಳ್ಳಬೇಕಾ ಎಂದು ಮತ್ತೆ ಪ್ರಶ್ನಿಸಿದಾಗ, ಯಾರೋ ಕೆಲವು ಜನ ಬಂದು ಇಲ್ಲಿ ದಾಳಿ ಮಾಡಿದಾಗ ಇಡೀ ದೇಶವನ್ನು ದೂಷಿಸುವುದು ತಿಳಿಗೇಡಿತನ ಎಂದರು. ನನಗೆ ಪುಲ್ವಾಮಾ ದಾಳಿ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಹೇಳಿಕೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಒಬ್ಬ ವಿಜ್ಞಾನಿ. ನಾನು ಡೇಟಾಗಳನ್ನು ನಂಬುತ್ತೇನೆ ಹೊರತು ಭಾವನೆಗಳನ್ನು ನಂಬುವುದಿಲ್ಲ ಎಂದು ಹೇಳಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ