ಸುದ್ದಿ

ಶಾಕಿಂಗ್ ನ್ಯೂಸ್ ಪೀಣ್ಯದ 10 ಸಾವಿರ ಕೈಗಾರಿಕೆಗಳು ಕ್ಲೋಸ್, 15 ಲಕ್ಷ ಕಾರ್ಮಿಕರು ಬೀದಿಗೆ,..ಇದಕ್ಕೆ ಕಾರಣವಾದರು ಏನು..?

552

ಬೆಂಗಳೂರು: ಸಿಲಿಕಾನ್ ಸಿಟಿ ಉದ್ಯೋಗಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದ್ದ ಪೀಣ್ಯ ಕೈಗಾರಿಕಾ ಪ್ರದೇಶದ 10 ಸಾವಿರ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಆಗಮಿಸದ 80,90ರ ದಶಕದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲದೆ, ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುತ್ತಿದ್ದರು. ಅವರೆಲ್ಲರಿಗೂ ಪೀಣ್ಯ ಕೈಗಾರಿಕಾ ಪ್ರದೇಶ ಆಸರೆಯಾಗಿತ್ತು.

ಆರ್ಥಿಕ ಹಿಂಜರಿತದ ಎಫೆಕ್ಟ್ : ಪೀಣ್ಯದ ಕೈಗಾರಿಕೆಗಳ ಮೇಲೆ ಸುನಾಮಿಯಂತೆ ಆರ್ಥಿಕ ಹಿಂಜರಿತ ಅಪ್ಪಳಿಸಿದ್ದು ಭಾರಿ ಸಂಕಷ್ಟ ಎದುರಾಗಿದೆ. ಅಕ್ಷರಶಃ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು  ಐಸಿಯು ಸ್ಥಿತಿಗೆ ತಲುಪಿವೆ. ಎರಡು ತಿಂಗಳಲ್ಲಿ ಕೈಗಾರಿಕಾ ವಹಿವಾಟು ಶೇ.70ರಷ್ಟು ಕುಸಿತ ಕಂಡಿದೆ.

ದೊಡ್ಡ ಕೈಗಾರಿಕೆಗಳಲ್ಲಿ ಶೇ.60ರಷ್ಟು ಮಾರಾಟ ಕುಸಿತವಾಗಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇ. 90ರಷ್ಟು ವ್ಯವಹಾರ ಕಡಿಮೆಯಾಗಿದೆ. 4 ತಿಂಗಳ ಹಿಂದೆ ದಿನಕ್ಕೆ 15 ಲಕ್ಷ ವಹಿವಾಟು ಮಾಡುತ್ತಿದ್ದವರು ಈಗ 3 ಲಕ್ಷಕ್ಕೆ ಇಳಿಕೆ ಕಂಡಿದ್ದಾರೆ. ಗಾರ್ಮೆಂಟ್ಸ್​, ಆಟೋ ಮೊಬೈಲ್ಸ್​​ ಬಿಡಿಭಾಗ, ಫ್ಯಾಬ್ರಿಕೇಷನ್​​​​​-ಪ್ಯಾಕೇಜಿಂಗ್​​ ಇಂಡಸ್ಟ್ರಿ, ಪೌಡರ್​​ ಕೋಟಿಂಗ್​​​​, ಎಲೆಕ್ಟ್ರೋ ಪ್ಲೇಟಿಂಗ್​ ಸೇರಿದಂತೆ 10 ಸಾವಿರ ಕಾರ್ಖಾನೆಗಳಿಗೆ ನಷ್ಟ ಉಂಟಾಗುತ್ತಿದೆ.

ದಿನಕ್ಕೆ 6 ಗಂಟೆ ಕೆಲಸ ಮಾತ್ರ : ಮೂರು ಪಾಳಿ ಬದಲು ಈಗ ದಿನಕ್ಕೆ 5 ರಿಂದ 6 ಆರು ಗಂಟೆ ಕೆಲಸ ಮಾತ್ರ ಸಿಗುತ್ತಿದೆ. ಶನಿವಾರ ಮತ್ತು ಭಾನುವಾರ ಕಡ್ಡಾಯ ರಜೆ ನೀಡಲಾಗುತ್ತಿದೆ. ಉತ್ಪಾದನೆ ಹೆಚ್ಚಿ ಮಾರಾಟ ಕುಸಿತವಾಗಿರುವುದರಿಂದ ಭಾರೀ ಸಂಕಷ್ಟ ಎದುರಾಗಿದೆ.ಯಾವುದೇ ಕ್ಷಣದಲ್ಲೂ ಈ ಕಾರ್ಖಾನೆಗಳು ಮುಚ್ಚಿ ಹೋಗುವುದು ನಿಜವಾಗಲಿದೆ. ಉದ್ಯೋಗ ಕಳೆದುಕೊಳ್ಳೋ 15 ಲಕ್ಷ ಮಂದಿಯಲ್ಲಿ 4 ಲಕ್ಷ ಮಹಿಳೆಯರಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕೈಗಾರಿಕೆಗಳನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಮುಂದಿನ ದಿನಗಳು ಹೇಗೆ ಎಂಬ ಚಿಂತೆಯಲ್ಲಿ ದಿನ ದೂಡುವ ಸ್ಥಿತಿ ಎದುರಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬಿಪಿಎಲ್ ಕಾರ್ಡುದಾರರಿಗೆ ರಾಜ್ಯ ಮತ್ತು ಕೇಂದ್ರಸರ್ಕಾರದಿಂದ ಉಚಿತ ಗ್ಯಾಸ್ ಯೋಜನೆಗಳು..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ…

    ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜನರಿಗೆ ಉಪಯೋಗವಾಗಲೆಂದು ಅನೇಕ ಯೋಜನೆಗಳನ್ನು ಮಾಡುತ್ತಾ ಬಂದಿದೆ.. ಅದರಲ್ಲೂ ಬಿ ಪಿ ಎಲ್ ಕಾರ್ಡ್ ಹೊಂದಿರುವವರಿಗೆ ಯೋಜನೆಗಳಿಂದ ಅನೇಕ ಅನುಕೂಲಗಳಾಗಿವೆ..ಅದರಲ್ಲೊಂದು ಪ್ರಮುಖ ವಾದ ಯೋಜನೆ ಮೂಲಕ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದಾಗಿದೆ..

  • ಸುದ್ದಿ

    ಪ್ರವಾಹದಿಂದ ಪಾರು ಮಾಡುವಂತೆ ಕೋರಿ 108 ಬಗೆಯ ಸಿಹಿ ಮಾಡಿ ದೇವಿಗೆ ವಿಶೇಷ ಪೂಜೆ…!

    ಉತ್ತರ ಕರ್ನಾಟಕ, ಕರಾವಳಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಅನಾಹುತದಿಂದ ಪಾರು ಮಾಡುವಂತೆ ಇಲ್ಲೊಂದು ದೇವಾಲಯದಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿಪರಾಶಕ್ತಿ ದೇವಾಲಯದಲ್ಲಿ ವಿಶೇಷ ರೀತಿಯ ತಿಂಡಿ ತಿನಿಸುಗಳು ಮಾಡಿ ಪೂಜೆ ಮಾಡಲಾಗಿದೆ. ವಿವಿಧ ಬಗೆಯ ಮೈಸೂರ್ ಪಾಕ್, ಲಾಡು, ಜಹಂಗೀರ್, ಜಿಲೇಬಿ, ಚಕ್ಕುಲಿ, ನಿಪ್ಪಟ್, ಪುರಿಉಂಡೆಯಂತಹ 108 ಬಗೆಯ ತಿಂಡಿಗಳನ್ನು ಮಾಡಲಾಗಿತ್ತು. ಅದನ್ನು ದೇವರಿಗೆ ಅರ್ಪಿಸಿ ನಂತರ ಭಕ್ತರಿಗೂ…

  • ಭವಿಷ್ಯ

    ಶ್ರೀ ರಾಮ ನವಮಿ ಶುಭದಿನದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ರವಿವಾರ, 25/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಸಮಸ್ಯೆಗಳ ಪರಿಹಾರಕ್ಕೆ ಹೊಸ ಜಾಣ್ಮೆ ಬಳಬೇಕಾದ ಸಂದರ್ಭ ಬರಬಹುದು. ಮಕ್ಕಳ ಪುರೋಭಿವೃದ್ಧಿ ತೋರಿ ಬಂದೀತು. ವಿವಾಹಾದಿ ಶುಭಮಂಗಲ ಕಾರ್ಯಗಳು ನಡೆದಾವು. ಉಷ್ಣ ಪ್ರಕೋಪದಿಂದ ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆ ತರಲಿದೆ. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ. ವೃಷಭ:- ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸಕಾರ್ಯಗಳಿಗೆ ಸ್ಪೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ…

  • ಸಿನಿಮಾ

    ಗಜಕೇಸರಿ, ಐರಾವತ ಬಂದ್ರೂ ಗೆಲ್ಲೋದು ‘ಅಭಿಮನ್ಯು’?ದಚ್ಚು ಪ್ರಚಾರ ಮಾಡಿದ್ರೆ ಸೋಲ್ತಾರೆ ಎಂದ್ರು..?

    ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಮಂಡ್ಯ ಜೆಡಿಎಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದ್ದು, ಸಿನಿಮಾ ರಂಗದವರು ಬಂದರೆ ಮಂಡ್ಯದ ಜನ ಮರುಳಾಗುವುದಿಲ್ಲ ಎಂದು ಹೇಳಿದ್ದಾರೆ. ‘ಗಜಕೇಸರಿ’, ‘ಐರಾವತ’ ಬಂದರೂ, ಗೆಲ್ಲುವುದು ‘ಅಭಿಮನ್ಯು’ ನಿಖಿಲ್ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಚಾರ ಮಾಡಿ ಸಿದ್ದರಾಮಯ್ಯ, ಆನಂದ ಅಪ್ಪುಗೋಳ, ಕೆ….

  • ಜ್ಯೋತಿಷ್ಯ

    ನಿಮಿಷ್ಟದ ದೇವರನ್ನು ನೆನಯುತ್ತಾ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….