ಆರೋಗ್ಯ

ಪಿರಿಯಡ್ಸ್ ಸಮಯದಲ್ಲಿ ಆಗುವ ನೋವುಗಳಿಗೆ ಇಲ್ಲಿದೆ ಪರಿಹಾರ…ತಿಳಿಯಲು ಈ ಲೇಖನ ಓದಿ…

502

ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು. ಇದರಿಂದ ಋತುಸ್ರಾವದ ಸಂದರ್ಭದಲ್ಲಿ ಆಗುವ ನೋವನ್ನ ಕಡಿಮೆ ಮಾಡಬಹುದು.

ಪಿರಿಯಡ್ಸ್ ಸಮಯದಲ್ಲಿ ಆಗುವ ಪ್ರಮುಖ ನೋವುಗಳು…

ಪಿರಿಯಡ್ಸ್‌ ಸಮಯದಲ್ಲಿ ಸಾಮಾನ್ಯವಾಗಿ ಹೊಟ್ಟೆನೋವು ಮತ್ತು ಸೊಂಟದ ನೋವು ಬರುತ್ತದೆ.

ಏನು ಮಾಡಬೇಕು..?

*ಪಿರಿಯಡ್ಸ್‌ ಸಮಯದಲ್ಲಿ ವ್ಯಾಯಾಮಗಳನ್ನು ಮಾಡುವುದು ಅಷ್ಟೊಂದು ಸುಲಭ ಅಲ್ಲ. ಆದರೆ ಕೆಲವು ಸಮಸ್ಯೆಗಳಿಂದ ಮುಕ್ತಿ ಪಡೆಯಲು ದೈಹಿಕ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು. ಇದರಿಂದ ಎಂಡೋರ್ಫಿನ್‌‌ ಪ್ರಮಾಣ ಏರಿಕೆಯಾಗುತ್ತದೆ. ಇದು ನಮ್ಮ ಮೆದುಳಿನಲ್ಲಿ ಸಂತೋಷಕ್ಕೆ ಕಾರಣವಾಗುವ ರಾಸಾಯನಿಕ ವಸ್ತುಗಳನ್ನು ಪ್ರಚೋದನೆಗೊಳಿಸುತ್ತದೆ. ಈ ಸಮಯದಲ್ಲಿ ಕಾರ್ಡಿಯೊ ಮಸ್ಕ್ಯುಲರ್ ಕಸರತ್ತು ನಿಮಗೆ ಕಷ್ಟ ಅನಿಸಿದರೆ ಯೋಗ ಮಾಡಿ.

*ಪಿರಿಯಡ್ಸ್‌ ಸಮಯದಲ್ಲಿ ಏನನ್ನೂ ತಿನ್ನಲು ಕುಡಿಯಲು ಮನಸಾಗುವುದಿಲ್ಲ.ಆದರೆ ಪಿರಿಯಡ್ಸ್ ಸಮಯದಲ್ಲಿ ಬರುವ ಸೊಂತದನೋವು ನಿವಾರಣೆಗೆ ನೀವು ಆದಷ್ಟೂ ನೀರು ಕುಡಿಯುವುದು ಒಳ್ಳೆಯದು.ಇದರಿಂದ ನಿಮ್ಮ ಸೊಂಟದ ನೋವು ಕಡಿಮೆ ಆಗುತ್ತದೆ.

*ನಿಮ್ಮ ಸೊಂಟದ ನೋವು ಕಡಿಮೆ ಆಗಲು ಹೀಟಿಂಗ್ ಪ್ಯಾಡ್ ಬಳಸಿ.ಇಲ್ಲದಿದ್ದರೆ ಒಂದು ಬಟ್ಟೆಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದನ್ನು ನಿಮ್ಮ ನೋವಿನ ಜಗದಲ್ಲಿ ಇಟ್ಟು ಮಸಾಜ್ ಮಾಡಿಕೊಳ್ಳಿ ಇದರಿಂದ ನಿಮ್ಮ ಸೊಂಟ ಹಾಗೂ ಬೆನ್ನು ನೋವುಗಳು ಕಡಿಮೆಯಾಗುತ್ತವೆ.

*ಪಿರಿಯಡ್ಸ್ ಸಮಯದಲ್ಲಿ ತಪ್ಪದೆ ಬಿಸಿ ನೀರಿನ ಸ್ನಾನ ಮಾಡಿ ಇದರಿಂದ ನಿಮ್ಮ ಹೊಟ್ಟೆ ಮತ್ತು ಸೊಂಟದ ನೋವು ಕಡಿಮೆ ಆಗುವುದಲ್ಲದೆ ನಿಮ್ಮ ಮನಸ್ಸು ರಿಲಾಕ್ಸ್ ಆಗುತ್ತದೆ.

 

ಎನನ್ನು ಮಾಡಲೇಬಾರದು..?

*ಋತುಸ್ರಾವದ ಸಂದರ್ಭದಲ್ಲಿ ಬಹುತೇಕ ಮಹಿಳೆಯರು ಜಂಕ್ ಫುಡ್ ಸೇವಿಸುತ್ತಾರೆ. ಇದು ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು, ಸಿಹಿ ತಿಂಡಿ, ಐಸ್‌‌‌‌‌ಕ್ರೀಮ್‌‌‌‌‌‌‌‌‌‌‌‌‌‌ಗಳನ್ನು ಸೇವಿಸಬೇಡಿ.

*ಇದರ ಬದಲು ಹಣ್ಣುಗಳನ್ನು ಸೇವಿಸಿ. ಚಿಪ್ಸ್ ಬದಲಿಗೆ ಇಡೀ ಧಾನ್ಯಗಳ ಬ್ರೆಡ್ ಅನ್ನು ಸ್ವಲ್ಪ ಚೀಸ್‌‌ನೊಂದಿಗೆ ತಿನ್ನಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • India, Sports, ಕ್ರೀಡೆ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇಟೆಸ್ಟ್‌ಗೆ ಮಳೆ ಕಾಟ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 4ದಿನ ಮಳೆ ಕಾಟದಿಂದಾಗಿ ದಿನದಾಟ ಆರಂಭ ವಾಗಿಲ್ಲ ಈ ಪಂದ್ಯದಲ್ಲಿ ಜಯವನ್ನು ಸಾಧಿಸಲು ದಕ್ಷಿಣ ಆಫ್ರಿಕಾಕ್ಕೆ  122ರನ್ ಅಗತ್ಯ ಇದೆ.ಮಳೆಯಿಂದಾಗಿ ಭಾರತ ತಂಡಕ್ಕೆ ಜಯಗಳಿಸುವ ಅವಕಾಶವನ್ನು ಒದಗಿಸುತ್ತದೆ.ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ 202ರನ್ ಗಳಿಸಿತು.ದಕ್ಷಿಣ ಆಫ್ರಿಕಾ 229ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 266ರನ್ಗಳಿಸಿತು.ಭಾರತ ದಕ್ಷಿಣ ಆಫ್ರಿಕಾಕ್ಕೆ 240ಗುರಿ ನೀಡಿದೆ.ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 118/2 ಗಳಿಸಿದೆ

    Loading

  • ಸುದ್ದಿ

    ಭಾರಿ ಮಳೆಗೆ ಒಡೆದ ಸೇತುವೆ : 6 ಬಲಿ,17 ಮಂದಿ ನಾಪತ್ತೆಯಾಗಿದ್ದಾರೆ……!

    ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ರತ್ನಗಿರಿ ತಾವ್ರೆ ಆಣೆಕಟ್ಟು ಮುರಿದು ಬಿದ್ದಿದೆ. ಆಣೆಕಟ್ಟಿನ ಕೆಳಗಿರುವ 7 ಹಳ್ಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಈವರೆಗೆ 6 ಶವವನ್ನು ಹೊರ ತೆಗೆಯಲಾಗಿದೆ. 17 ಮಂದಿ ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಆಣೆಕಟ್ಟೆಯ ಪಕ್ಕದಲ್ಲಿಯೇ ಇದ್ದ 12 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. 12 ಮನೆಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗ್ತಿಲ್ಲ. ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ…

  • ದೇಶ-ವಿದೇಶ

    ಇದು ಜಗತ್ತಿನ ಅತ್ಯಂತ ಸೋಮಾರಿ ರಾಷ್ಟ್ರ..! ಆ ರಾಷ್ಟ್ರ ಯಾವುದು ಗೊತ್ತಾ?

    ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.

  • ಸುದ್ದಿ

    23 ವರ್ಷದ ಅಲೆಕ್ಸಾ ಟೆರಾಜಾ ಎಂಬುವರು ತಲೆ ಕೆಳಗಾಗಿ ಯೋಗ ಮಾಡಿ ಆರನೇ ಅಂತಸ್ತಿನಿಂದ 80 ಅಡಿ ಕೆಳಗೆ ಬಿದ್ದ ಯುವತಿ…!

    ಮೆಕ್ಸಿಕೋದ ಕಾಲೇಜು ಯುವತಿ ಬಾಲ್ಕನಿ ಮೇಲೆ ತಲೆಕೆಳಗಾಗಿ ಯೋಗ ಮಾಡಲು ಹೋಗಿ, ಆಯಾತಪ್ಪಿ 80 ಅಡಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್​ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಿ ಮತ್ತು ಪಾದದ ಕೀಲುಗಳನ್ನು ಮರುಜೋಡಣೆ ಮಾಡಿರುವುದರಿಂದ ಆಕೆ ಮೂರು ವರ್ಷ ನಡೆದಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆ ದೇಹದಲ್ಲಿ 110 ಮೂಳೆಗೆ ಮುರಿದಿವೆ. ತಲೆ, ಸೊಂಟದ ಭಾಗಕ್ಕೂ ಪೆಟ್ಟು ಬಿದ್ದಿದೆ. ಯುವತಿ ಅಪಾರ್ಟ್​ಮೆಂಟ್​ನ ಆರನೇ ಅಂತಸ್ತಿನಲ್ಲಿರುವ ತಮ್ಮ ಮನೆಯ ಬಾಲ್ಕನೆಯ ಕಂಬಿಯ ಮೇಲೆ…

  • ಸುದ್ದಿ

    ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ತುಂಬಿದ ನಾರಾಯಣಪುರ ಡ್ಯಾಂ…!

    ರಾಯಚೂರು/ವಿಜಯಪುರ/ಬೆಳಗಾವಿ: ಜುಲೈಮುಗಿಯುತ್ತಿದ್ದರೂ ರಾಜ್ಯದ ಯಾವ ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲವೆಂಬುವುದು ದುಃಖದಸಂಗತಿ. ಅದರೊಟ್ಟಿಗೆ ಅಲ್ಲಲ್ಲಿ ಮಳೆಯಾಗಿರುವ ಸುದ್ದಿ ಕೇಳಿದರೂ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮಳೆಯಾಗುತ್ತಿದ್ದು, ನಾರಾಯಣಪುರಜಲಾಶಯದ ತುಂಬಿದೆ. ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.  ನಾರಾಯಣಪುರ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 18 ಗೇಟ್ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಾಲೂಕು…

  • ಆರೋಗ್ಯ

    ‘ ಹಸಿ ಶುಂಠಿ’ ಅನೇಕ ನೋವಿಗೆ ಪರಿಹಾರ..! ತಿಳಿಯಲು ಈ ಲೇಖನ ಓದಿ ..

    ನಿಮ್ಮ ಹೊಟ್ಟೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆನೋವು ಮತ್ತು ಕೆಳಹೊಟ್ಟೆ ಕಿವುಚಿದಂತಹ ಅನುಭವಾಗಿರಬಹುದು. ಸಾಮಾನ್ಯವಾಗಿ ಅಜೀರ್ಣತೆ ಹಾಗೂ ಒಗ್ಗದ ಆಹಾರ ಸೇವನೆಯಿಂದ ಹೊಟ್ಟೆ ಕೆಡುವುದು ಸಾಮಾನ್ಯವಾದ ತೊಂದರೆ. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಐಬಿಎಸ್ , ಮಲಬದ್ಧತೆ ಹಾಗೂ ಹೊಟ್ಟೆಯೊಳಗಣ ಉರಿಯೂತ ಕಾಣಿಸಿಕೊಳ್ಳುತ್ತದೆ.ಹೊಟ್ಟೆಯ ತೊಂದರೆಗಳಿಗೆ ಶುಂಠಿಯ ಕೆಲವು ಲಾಭಗಳ ವಿವರ ಇಲ್ಲಿದೆ.