ಸುದ್ದಿ

ಪಾನಿ ಪುರಿ ಮಾಡೋದಕ್ಕೂ ಬಂತು ಮಷೀನ್.!ಇನ್ಮೇಲೆ ಮನೆಯಲ್ಲೇ ಪಾನಿ ಪುರಿ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

721

ಇತ್ತೀಚಿನ ಯುವಕ ಯುವತಿಯರಿಗೆ ಮಕ್ಕಳಿಗೆ ಮನೆಯ ತಿಂಡಿಗಳಿಗಿಂತ ಹೊರಗೆ ಸಿಗುವ ತಿಂಡಿಗಳೇ ಹೆಚ್ಚು ಇಷ್ಟ, ಅದರಲ್ಲೂ ಪಾನಿ ಪುರಿಯ ಹೆಸರು ತುಂಬಾನೇ ಫೇಮಸ್. ಪಾನಿ ಪುರಿ ಎಂಬ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುವುದು ಸಾಮಾನ್ಯ, ಪಾನಿ ಪುರಿ ಎಂದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಇಷ್ಟ ಪಡುತ್ತಾರೆ, ಆದರೆ ಅದನ್ನೇ ಮನೆಯಲ್ಲಿ ಮಾಡಿ ತಿನ್ನದೇ, ಹೊರಗೆ ತಿನ್ನುತ್ತಾರೆ, ಪಾನಿ ಪುರಿಯನ್ನ ಅವರು ಹೇಗೆ ಮಾಡಿರುತ್ತಾರೆ ಎಂದು ತಿಳಿದಿರಲ್ಲ.

 

ಮನೆಯಲ್ಲಿ ನಾವು ಬಿಸ್ಲೇರಿ ನೀರನ್ನೇ ಸೇವಿಸುತ್ತೇವೆ ಆದರೆ ಆ ಪಾನಿ ಪುರಿಯನ್ನ ಯಾವ ನೀರು ಬಳಸಿ ಮಾಡಿರುತ್ತಾರೆ ಎಂದು ಒಂದು ನಿಮಿಷವೂ ಯೋಚಿಸುವುದಿಲ್ಲ. ಬಾಯಿ ಚಪಲಕ್ಕೆ ತಿಂದು ಬಿಡುತ್ತೇವೆ, ಆದರೆ ಇನ್ನು ಮುಂದೆ ನೀವು ಮನೆಯಲ್ಲೇ ಎಷ್ಟು ಬೇಕೋ ಅಷ್ಟು ಪಾನಿಪುರಿ ಮಾಡಿಕೊಂಡು ತಿನ್ನಬಹುದು. ಅದಕ್ಕಾಗಿ ನೀವು ಕಷ್ಟಪಡಬೇಕಾಗಿಯೂ ಇಲ್ಲ. ಏಕೆಂದರೆ ಪಾನಿ ಪುರಿ ಮಾಡುವ ಮಿಷನ್ ಬಂದಿದೆ.

ಹೌದು ಪಾನಿಪುರಿ ತಯಾರಿಸುವ ಮಷಿನ್ ಬಂದಿದೆ. ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾನಿಪುರಿ ತಯಾರಿಸೋ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಸಾಹಸ್ ಗೆಂಬಲಿ, ಸುನಂದಾ ಸೋಮು, ನೇಹಾ ಶ್ರೀವಾಸ್ತವ ಹಾಗೂ ಕರಿಷ್ಮಾ ಅಗರ್ವಾಲ್ ಜೊತೆಯಾಗಿ ಈ ಪ್ರಾಜೆಕ್ಟ್ ಮಾಡಿದ್ದಾರೆ.

 

ಪಾನಿಪುರಿ ಭಾರತದ ಅತ್ಯಂತ ಜನಪ್ರಿಯ ಸ್ನಾಕ್ಸ್ ಗಳಲ್ಲೊಂದು. ಹಾಗಾಗಿ ಇದನ್ನು ಇನ್ನಷ್ಟು ಹೈಜೆನಿಕ್ ಮಾಡಬೇಕು ಅನ್ನೋ ಆಲೋಚನೆ ವಿದ್ಯಾರ್ಥಿಗಳಿಗೆ ಬಂದಿತ್ತು. ವಿದೇಶದಲ್ಲಿ ಓದ್ತಾ ಇರೋ ವಿದ್ಯಾರ್ಥಿಗಳು ಕೂಡ ಈ ಯಂತ್ರದ ಸಹಾಯದಿಂದ ಆಸೆಯಾದಾಗ್ಲೆಲ್ಲ ಪಾನಿಪುರಿ ತಿನ್ನಬಹುದು ಅನ್ನೋದು ಇವರ ಅಭಿಪ್ರಾಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ